ಬಳ್ಳಾರಿ: ಹೊಸಪೇಟೆಯಲ್ಲಿ ಸಮಸ್ಯೆ, ಕಷ್ಟ ಎಂದು ಬರುವ ಅಮಾಯಕರನ್ನು ಭಕ್ತಿಯ ಹೆಸರಿನಲ್ಲಿ ವಂಚಿಸುತ್ತಿದ್ದ ನಕಲಿ ನಾಗಕನ್ನಿಕೆಯ ಬಗ್ಗೆ ಟಿವಿ9 ಕನ್ನಡ ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು. ಆಕೆ 9 ವರ್ಷಗಳಿಂದ ಬೆಡ್‌ನಿಂದ ಎದ್ದಿಲ್ಲ. ಹಾಗೇ ಇರುತ್ತಾಳೆ ಎಂದು ಹೇಳಲಾಗಿತ್ತು. ಇದೀಗ ಆಕೆ ಬೆಡ್‌ನಿಂದ ಮೇಲೆದ್ದಿದ್ದಾಳೆ. ಹಾಗೂ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾಳೆ ಎಂಬ ಕಾರಣಕ್ಕೆ ನಕಲಿ ನಾಗಕನ್ನಿಕೆಯನ್ನು ವೈದ್ಯರು ಹೊಸಪೇಟೆ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಆ್ಯಂಬುಲೆನ್ಸ್ ಮೂಲಕ ತಾಲೂಕು ಆಸ್ಪತ್ರೆಗೆ ನಾಗಕನ್ನಿಕೆ ಸ್ಥಳಾಂತರಿಸಲಾಗಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡದಂತೆ ಆಕೆಯ ಪತಿ ಶಂಕರ್ ಹಾಗೂ 2ನೇ ಪತ್ನಿ ಹೈಡ್ರಾಮಾ ನಡೆಸಿದ್ದಾರೆ. ವೈದ್ಯಾಧಿಕಾರಿಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಆದರೆ, ಪೊಲೀಸರ ಸಮ್ಮುಖದಲ್ಲಿ ಆಕೆಯನ್ನು ವೈದ್ಯ ಬಸವರಾಜ್ ನೇತೃತ್ವದ ತಂಡದ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೀಗಾಗಿ, ಶಂಕರ್‌ನ 2ನೇ ಪತ್ನಿ ಮತ್ತು ಮಕ್ಕಳು ಕೂಡ ಆಸ್ಪತ್ರೆಗೆ ತೆರಳಿದ್ದಾರೆ.
ನಾಗದೇವತೆ ಹೆಸರಲ್ಲಿ ವಂಚನೆ ಬಗ್ಗೆ ಟಿವಿ9ನಲ್ಲಿ ಸುದ್ದಿಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಎಸ್‌ಪಿ ಸೈದುಲ್ಲಾ ಅಡಾವತ್ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೆದರಿಕೆ ಹಾಕಿದ್ದರೆ ಆ ಬಗ್ಗೆಯೂ ಕ್ರಮಕೈಗೊಳ್ಳುತ್ತೇವೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡ್ತಾರೆ. ಇದನ್ನು ತಡೆಯುತ್ತೇವೆ ಎಂದು ಹೇಳಿದ್ದಾರೆ.
ನಾಗಕನ್ನಿಕೆಯ ಅನಾಚಾರ ಬಯಲು
ದೇವರ ಹೆಸರಿನಲ್ಲಿ ವಿಚಿತ್ರಗಳನ್ನ ಸೃಷ್ಟಿಸುತ್ತಾ, ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡೋ ಕೆಲಸ ಹೊಸಪೇಟೆಯಲ್ಲಿ ನಡೀತಿದೆ. ನಾಗಕನ್ನಿಕೆ, 9 ವರ್ಷದಿಂದ ಹಾಸಿಗೆಯಿಂದ ಎದ್ದೇ ಇಲ್ಲ ಎಂದು ಹೇಳುತ್ತಾ ಪಾರ್ವತಿ ಹಾಗೂ ಶಂಕರ ಎಂಬ ದಂಪತಿಗಳು ಅನಾಚಾರ ನಡೆಸುತ್ತಿದ್ದಾರೆ. ಅಮಾಯಕರನ್ನು ವಂಚಿಸುತ್ತಿದ್ದಾರೆ. ಈಕೆಯ ಮಗ ಕೂಡ ಈ ದುಷ್ಕೃತ್ಯಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೀನ ಕೆಲಸವನ್ನು ಟಿವಿ9 ಕನ್ನಡ ವಾಹಿನಿ ಬಯಲಿಗೆಳೆದಿದೆ.
ಇದನ್ನೂ ಓದಿ: ಮೂಢನಂಬಿಕೆಗೆ ಪೈಶಾಚಿಕ ಕೃತ್ಯ.. ಹೆಣ್ಣು ಮಕ್ಕಳ ದಿನದಂದೆ ದೇವರ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಕೊಂದ ತಂದೆ-ತಾಯಿ
ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್ ವೈರಲ್
Published On - 9:28 pm, Mon, 16 August 21