ಬಳ್ಳಾರಿ: ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ತನ್ನ 7 ವರ್ಷದ ಸಂಸಾರಕ್ಕೆ ತಿಲಾಂಜಲಿ ಇಟ್ಟು ಇಬ್ಬರು ಮಕ್ಕಳನ್ನು ಅನಾಥವಾಗಿ ಮಾಡಿ ಗಂಡನಿಗೆ ಮೋಸ ಮಾಡಿ ಇನ್ನೊಬ್ಬನ ಜೊತೆ ಪರಾರಿಯಾಗಿರುವ ಘಟನೆ ಒಳ್ಳಾರಿಯಲ್ಲಿ ನಡೆದಿದೆ.
ಗಂಡನಿಗೆ ಕೈಕೊಟ್ಟು ಚಾಲಕನ ಜೊತೆ ಪತ್ನಿ ಎಸ್ಕೇಪ್
ಲಲಿತಾ ಅಲಿಯಾಸ್ ಅಜಿತ ಎಂಬ ಮಹಿಳೆ ಪರ ಪುರುಷನ ಜೊತೆ ಓಡಿ ಹೋಗಿದ್ದಾರೆ. 7 ವರ್ಷದ ಹಿಂದೆ ಬಳ್ಳಾರಿ ಜಿಲ್ಲೆ ಸಂಡೂರಿನ ಬೊಮ್ಮಾಘಟ್ಟದ ಹುಲಗಪ್ಪ ಎಂಬುವವರನ್ನು ಲಲಿತಾಳನ್ನು ಮದುವೆಯಾಗಿದ್ದರು. ಇವರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ರು. ಅತ್ತೆ ಮಾವ ಲಲಿತಾಳನ್ನ ಮಗಳಂತೆ ನೋಡ್ಕೊತ್ತಿದ್ರು. ಮೈನಿಂಗ್ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದ ಹುಲುಗಪ್ಪ ದುಡಿದ ದುಡ್ಡನ್ನೇ ಕೂಡಿಟ್ಟು, ಪತ್ನಿಗೆ ಹೊಸ ಮೊಬೈಲ್ ಕೊಡಿಸಿದ್ದರು. ಆದ್ರೆ ಅದೇ ಮೊಬೈಲ್ ಈ ಲಲಿತಾಳನ್ನ ಹಾಳ್ ಮಾಡ್ಬಿಡ್ತು. ಯಾಕಂದ್ರೆ, ಈ ಲಲಿತಾ ಅದೇ ಓಣಿಯಲ್ಲಿದ್ದ ಟ್ರ್ಯಾಕ್ಸ್ ಚಾಲಕ ಶಶಿಕುಮಾರ್ ಎಂಬಾತನ ಜೊತೆ ಲವ್ವಿಡವ್ವಿ ಶುರುಮಾಡ್ಕೊಂಡಿದ್ಳು.
ಮೊಬೈಲ್ನಲ್ಲಿ ಶುರುವಾದ ಸ್ನೇಹ ಅಕ್ರಮ ಸಂಬಂಧಕ್ಕೂ ತಿರುಗಿತ್ತು. ಕಳೆದ ಡಿಸೆಂಬರ್ 29ರಂದು ಲಲಿತಾ ತನ್ನ ಮಗನನ್ನು ಕರೆದುಕೊಂಡು ಶಶಿಕುಮಾರ್ ಜೊತೆ ಎಸ್ಕೇಪ್ ಆಗಿದ್ದಾರೆ. ಇದ್ರಿಂದ ನೊಂದ ಗಂಡ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಸಹ ಕೊಟ್ಟಿದ್ರು. ಆದ್ರೆ, ಶಶಿಕುಮಾರನಿಗೆ ಬಿಜೆಪಿ ಮುಖಂಡ ವಿರೂಪಾಕ್ಷ ಆಪ್ತನಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳದಂತೆ ಅಡ್ಡಿಮಾಡ್ತಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸ್ತಿದ್ದಾರೆ. ಹೀಗಾಗಿ ಹುಲುಗಪ್ಪ ಸದ್ಯ, ಸಂಡೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನೇರವಾಗಿ ದೂರು ದಾಖಲಿಸಿದ್ದಾರೆ. ನನಗೆ ಪತ್ನಿ ಬೇಡ ಮಗ ಬೇಕು ಅಂತ ಕೇಳಿಕೊಳ್ತಿದ್ದಾರೆ.
ನ್ಯಾಯಾಲಯ ಸಹ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ರಿಗೆ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ಫೆಬ್ರವರಿ 12ರಂದು ಚೋರನೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪತ್ನಿ ಲಲಿತ. ಪ್ರೇಮಿ ಶಶಿಕುಮಾರ್. ಬಿಜೆಪಿ ಯುವ ಮುಖಂಡ ವಿರುಪಾಕ್ಷ ಸೇರಿದಂತೆ 9 ಜನರ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಒಟ್ನಲ್ಲಿ ಪರಪುರುಷನ ಸಂಗ ಮಾಡಿ ಲಲಿತ ಓಡಿಹೋಗಿದ್ರೆ, ಮಾನ ಮರ್ಯಾದೆ ಹೋಯ್ತು ಅಂತ ಗಂಡ, ಅತ್ತೆ, ಮಾವ ಮರುಗುತ್ತಿದ್ದಾರೆ.
ವರದಿ: ವೀರೇಶ್ ದಾನಿ, TV9 ಬಳ್ಳಾರಿ
ಇದನ್ನೂ ಓದಿ: ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ
ಕಾಡಾನೆ ದಾಳಿ ಪ್ರಕರಣ; ಸ್ಥಳಕ್ಕೆ ಸಿಎಂ ಬರೋವರೆಗೂ ಮೃತದೇಹ ತೆಗೆಯಲ್ಲವೆಂದು ಪಟ್ಟು ಹಿಡಿದ ಗ್ರಾಮಸ್ಥರು
Published On - 4:55 pm, Fri, 11 March 22