ಖುಷ್ಬೂ ದಾಂಪತ್ಯ ಜೀವನದಲ್ಲಿ ಹೊಸ ಮೈಲಿಗಲ್ಲು; ಸಂತಸ ಹಂಚಿಕೊಂಡ ನಟಿ
ಖುಷ್ಬೂ ಅವರು ಇತ್ತೀಚೆಗೆ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಲವು ತಿಂಗಳ ಕಾಲ ಜಿಮ್ನಲ್ಲಿ ಶ್ರಮ ಹಾಕಿ ತೆಳ್ಳಗೆ ಆಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ನಟಿ ಖುಷ್ಬೂ ಸುಂದರ್ (Khushbu Sundar) ಸದ್ಯ ಚಿತ್ರರಂಗದಿಂದ ದೂರವೇ ಉಳಿದುಕೊಂಡಿದ್ದಾರೆ. ಆದರೆ, ರಾಜಕೀಯದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದರ ಜತೆಗೆ ಸೋಶಿಯಲ್ ಮೀಡಿಯಾದಲ್ಲೂ (Social Media) ಅವರು ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರೋಕೆ ಖುಷ್ಬೂ ಪ್ರಯತ್ನಪಡುತ್ತಾರೆ. ಈಗ ಅವರ ದಾಂಪತ್ಯ ಜೀವನ ಹೊಸ ಮೈಲಿಗಲ್ಲನ್ನು ದಾಟಿ ಮುಂದೆ ಸಾಗುತ್ತಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಖುಷ್ಬೂ ಅವರ ದಾಂಪತ್ಯ ಜೀವನಕ್ಕೆ 22 ವರ್ಷ ತುಂಬಿದೆ. ಸುಂದರ್ ವೃತ್ತಿಯಲ್ಲಿ ನಿರ್ಮಾಪಕ. ಖುಷ್ಬೂ ಹಾಗೂ ಸುಂದರ್ ಒಟ್ಟಾಗಿ ‘ಅವ್ನಿ ಸಿನಿಮ್ಯಾಕ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಇದರ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈಗ ಸುಂದರ್ ಅವರು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ದಂಪತಿ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಜೀವಾ, ಜೈ, ಶ್ರೀಕಾಂತ್, ಐಶ್ವರ್ಯಾ ದತ್ತ, ಅಮೃತಾ ಅಯ್ಯರ್, ಸಂಯುಕ್ತ ಕಾರ್ತಿಕ್ ಹಾಗೂ ದಿವ್ಯ ದರ್ಶಿನಿ ನಟಿಸುತ್ತಿದ್ದಾರೆ. ಈ ಮಧ್ಯೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಖುಷ್ಬೂ ಅವರು ಸೋಶಿಯಲ್ ಮೀಡಿಯಾದಲ್ಲಿ ಸುಂದರ್ ಜತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ’22 ವರ್ಷ ತುಂಬಿದೆ ಮತ್ತು ಮುಂದೆ ಸಾಗುತ್ತಿದ್ದೇವೆ’ ಎಂದು ಖುಷ್ಬೂ ಬರೆದುಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಖುಷ್ಬೂಗೆ ಶುಭಕೋರಿದ್ದಾರೆ.
View this post on Instagram
ಖುಷ್ಬೂ ಅವರು ಇತ್ತೀಚೆಗೆ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಲವು ತಿಂಗಳ ಕಾಲ ಜಿಮ್ನಲ್ಲಿ ಶ್ರಮ ಹಾಕಿ ತೆಳ್ಳಗೆ ಆಗಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಫೋಟೋ ನೋಡಿದ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಹೊರಹಾಕುತ್ತಿದ್ದಾರೆ. ಮತ್ತೆ ಚಿತ್ರರಂಗಕ್ಕೆ ಬರುವಂತೆ ಅವರಿಗೆ ಅನೇಕರು ಬೇಡಿಕೆ ಕೂಡ ಇಟ್ಟಿದ್ದಾರೆ. ಆದರೆ, ಸದ್ಯಕ್ಕೆ ಅವರು ಆ ಬಗ್ಗೆ ಆಲೋಚನೆ ಮಾಡಿದಂತಿಲ್ಲ.
View this post on Instagram
ಖುಷ್ಬೂ ಅವರು ಕನ್ನಡ ಚಿತ್ರರಂಗದಲ್ಲೂ ನಟಿಸಿದ್ದಾರೆ. ಇಲ್ಲಿಯ ನಟ-ನಟಿಯರ ಜತೆ ಅವರಿಗೆ ಒಳ್ಳೆಯ ಒಡನಾಟವಿದೆ. ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ನಂತರ ಅವರು ಬೆಂಗಳೂರಿಗೆ ಆಗಮಿಸಿ ಶಿವರಾಜ್ಕುಮಾರ್ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಇದನ್ನೂ ಓದಿ: ಲಂಡನ್ನಲ್ಲಿ ಖುಷ್ಬೂ; ಅವರ ಸ್ಲಿಮ್ ಬಾಡಿ ನೋಡಿ ಅಚ್ಚರಿ ಹೊರ ಹಾಕಿದ ಫ್ಯಾನ್ಸ್
ಪದೇಪದೇ ಕರೆ ಮಾಡಿ ಪತಿ ಸುಂದರ್ಗೆ ತೊಂದರೆ ಕೊಡಬೇಡಿ; ಖುಷ್ಬೂಗೆ ಯುವನಟಿಯ ಎಚ್ಚರಿಕೆ