ಬೆಂಗಳೂರು: ನಗರದಲ್ಲಿ ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆ, ಸುಲಿಗೆ ನಡೆಸುತ್ತಿದ್ದು, ಜನಜಂಗುಳಿ ನಡುವೆಯೂ ಮಾರಕಾಸ್ತ್ರಗಳನ್ನು ಬೀಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಇಂತಹ ಪುಡಿ ರೌಡಿಗಳ ನಿಗ್ರಹಕ್ಕೆ ಹಾಗೂ ಅಪರಾಧ ಕೃತ್ಯಗಳನ್ನು ತಡೆಯಲು ಪೊಲೀಸರು ಇನ್ನಿಲ್ಲದ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಇದೀಗ ಮಾರಕಾಸ್ತ್ರ ಬೀಸುತ್ತಾ ಹಾಡಹಗಲೇ ಸುಲಿಗೆ ನಡೆಸುತ್ತಿದ್ದ ದುಷ್ಕಮಿಯೊಬ್ಬನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಂಗಡಿ ಮಾಲಕಿಯ ಗಮನವನ್ನು ಬೇರೆಡೆಗೆ ಕೊಂಡೊಯ್ದದ ದುಷ್ಕಮಿ, ಏಕಾಏಕಿ ಅಂಗಡಿ ಗಲ್ಲಾ ಪೆಟ್ಟಿಗೆಗೆ ಕೈಹಾಕಿ ಹಣ ಎಗರಿಸಿದ್ದಾನೆ. ಆದರೆ ಮಹಿಳೆ ಸಮಯಪ್ರಜ್ಞೆ, ಮಹಿಳೆಯ ಪತಿಯ ಪ್ರತಿರೋಧಕ್ಕೆ ಸುಲಿಗೆ ವಿಫಲಗೊಂಡಿದ್ದಲ್ಲದೆ ಲಾಂಗ್ ಬೀಸಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಆದರೆ ಪಟ್ಟುಬಿಡದ ಅಂಗಡಿ ಮಾಲೀಕ, ಸ್ಥಳೀಯರೊಂದಿಗೆ ಸೇರಿಕೊಂಡು ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಂಗಾ ನಗರದ ಮುಖ್ಯ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ತರಕಾರಿ ಅಂಗಡಿಗೆ ಬಂದ ದುಷ್ಕಮಿಯೊಬ್ಬ ಅಂಗಡಿ ಮಾಲಕಿಯ ಗಮನವನ್ನು ಬೇರೆಕಡೆಗೆ ಸೆಳೆದು ಅಂಗಡಿಯ ಡ್ರವರ್ ತೆರೆದು ಹಣ ಕದ್ದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ಪ್ರತಿರೋಧವೊಡ್ಡಿದ್ದು, ಪರಿಣಾಮವಾಗಿ ದುಷ್ಕಮಿ ಮಾರಕಾಸ್ತ್ರವನ್ನು ಬೀಸುತ್ತಾ ಜನಬಿಡ ಪ್ರದೇಶದಿದ ಕಾಲ್ಕಿತ್ತಿದ್ದಾನೆ. ದುಷ್ಕರ್ಮಿ ಬೀಸಿದ ಮಾರಕಾಸ್ತ್ರದಿಂದ ಶಿವರಾಜ್ ಕೂದಲೆಳೆ ಅಂತದಲ್ಲಿ ಪಾರಾಗಿದ್ದಾರೆ. ಈ ಎಲ್ಲಾ ಘಟನೆಗಳ ದೃಶ್ಯಾವಳಿ ಅಂಗಡಿಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿವೆ.
ಇಷ್ಟಕ್ಕೂ ಸುಮ್ಮನಾಗದ ಅಂಗಡಿ ಮಾಲೀಕ ಶಿವರಾಜ್, ಸ್ಥಳೀಯರ ಸಹಾಯದೊಂದಿಗೆ ಬೆನ್ನಟ್ಟಿ ದುಷ್ಕರ್ಮಿಯನ್ನು ಹಿಡಿದಿದ್ದಾರೆ. ನಂತರ ಆರ್.ಟಿ.ನಗರ ಪೊಲೀಸ್ ಠಾಣೆಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಶಾಪ್ ಮಾಲೀಕ ಶಿವರಾಜ್ ದೂರಿನ ಹಿನ್ನಲೆ ಅಪರಾಧ ಪ್ರಕರಣಗಳ ಹಿನ್ನಲೆಯುಳ್ಳ 20-25 ವರ್ಷದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Thu, 18 August 22