Karnataka Politics: ಲಿಂಗಾಯತ ಸಮುದಾಯ ಸೆಳೆಯಲು ಕಾಂಗ್ರೆಸ್​ ಮಹತ್ವದ ಪ್ರಯತ್ನ; ಪ್ರಮುಖ ಮಠಗಳಿಗೆ ಎಂಬಿ ಪಾಟೀಲ್ ಭೇಟಿ

ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ಮಾಡಿ ತೆರಳಿದ ಬೆನ್ನಲ್ಲೇ ಮತ್ತೊಂದು ಪ್ರವಾಸಕ್ಕೆ ಮುಂದಾಗಿರುವ ಕಾಂಗ್ರೆಸ್ ನಾಯಕರು ಅಗಸ್ಟ್ 19ರಿಂದ ಸಪ್ಟೆಂಬರ್ 10 ರವರೆಗೆ ರಾಜ್ಯಾದ್ಯಂತ ಸುತ್ತಾಡಲಿದ್ದಾರೆ.

Karnataka Politics: ಲಿಂಗಾಯತ ಸಮುದಾಯ ಸೆಳೆಯಲು ಕಾಂಗ್ರೆಸ್​ ಮಹತ್ವದ ಪ್ರಯತ್ನ; ಪ್ರಮುಖ ಮಠಗಳಿಗೆ ಎಂಬಿ ಪಾಟೀಲ್ ಭೇಟಿ
ಎಮ್ ಬಿ ಪಾಟೀಲ, ಕಾಂಗ್ರೆಸ್ ಶಾಸಕ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 18, 2022 | 8:58 AM

ಬೆಂಗಳೂರು: ಹಲವು ವರ್ಷಗಳಿಂದ ಲಿಂಗಾಯತ ಸಮುದಾಯ ಕಾಂಗ್ರೆಸ್​ ಪಕ್ಷದಿಂದ ದೂರವೇ ಇದೆ. ಬಿಜೆಪಿ ಪರವಾಗಿ ಒಲವು ತೋರಿದ್ದ ಈ ಸಮುದಾಯವನ್ನು ಮತ್ತೆ ತನ್ನತ್ತ ಸೆಳೆಯಲು ಕಾಂಗ್ರೆಸ್ ಪಕ್ಷವು ಮಹತ್ವದ ಪ್ರಯತ್ನಕ್ಕ ಮುಂದಾಗಿದೆ. ಈ ಯತ್ನದ ಭಾಗವಾಗಿ 21 ದಿನ ಸತತ ಪ್ರವಾಸ ನಡೆಸಲಿರುವ ಕಾಂಗ್ರೆಸ್ ನಾಯಕರು 17 ಪ್ರಮುಖ ಲಿಂಗಾಯತ ಮಠಗಳಿಗೆ ಭೇಟಿ ನೀಡಿ, ಸಮುದಾಯವನ್ನು ಸೆಳೆಯಲು ಯತ್ನಿಸಲಿದ್ದಾರೆ. 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಚುರುಕುಗೊಳಿಸಿರುವ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಸಿದ್ಧತೆ ಚುರುಕುಗೊಳಿಸಿವೆ. ಈ ನಡುವೆ ಕಾಂಗ್ರೆಸ್ ಪಕ್ಷವು ಲಿಂಗಾಯತ ಮಠಗಳನ್ನು ಸಂಪರ್ಕಿಸಿ, ಸಮುದಾಯ ಒಲಿಸಿಕೊಳ್ಳಲು ನಡೆಸುತ್ತಿರುವ ಈ ಪ್ರಯತ್ನ ಮಹತ್ವ ಪಡೆದಿದೆ.

ಲಿಂಗಾಯತ ಮತಗಳಿಗಾಗಿ ಕಾಂಗ್ರೆಸ್ ನಾಯಕರು ರಾಜ್ಯ ಪ್ರವಾಸಕ್ಕೆ ಹೊರಟಿದ್ದಾರೆ. ಸಮುದಾಯದ ನಾಯಕರತ್ತ ಕಾಂಗ್ರೆಸ್ ನಾಯಕರು ಗಮನ ಹರಿಸಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಹಲವು ನಾಯಕರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಮುರುಘಾಮಠಕ್ಕೆ ರಾಹುಲ್ ಗಾಂಧಿ ಭೇಟಿ ಮಾಡಿ ತೆರಳಿದ ಬೆನ್ನಲ್ಲೇ ಮತ್ತೊಂದು ಪ್ರವಾಸಕ್ಕೆ ಮುಂದಾಗಿರುವ ಕಾಂಗ್ರೆಸ್ ನಾಯಕರು ಅಗಸ್ಟ್ 19ರಿಂದ ಸಪ್ಟೆಂಬರ್ 10 ರವರೆಗೆ ಬರೋಬ್ಬರಿ 21 ದಿನಗಳ ಕಾಲ ರಾಜ್ಯಾದ್ಯಂತ ಸುತ್ತಾಡಲಿದ್ದಾರೆ.

ಪ್ರವಾಸದ ವೇಳೆ ಸಮುದಾಯದ ನಾಯಕರು, ಮಠಾಧೀಶರನ್ನು ಎಂ.ಬಿ.ಪಾಟೀಲ್ ಭೇಟಿ ಮಾಡಲಿದ್ದಾರೆ. 21 ದಿನಗಳ ಪ್ರವಾಸದಲ್ಲಿ ಎಂ.ಬಿ.ಪಾಟೀಲ್ ತಂಡವು 17 ಮಠಗಳಿಗೆ ಭೇಟಿ ನೀಡಲಿದೆ. ಕಲಬುರ್ಗಿಯಿಂದ ಆರಂಭಗೊಳ್ಳುವ ರಾಜ್ಯ ಪ್ರವಾಸ ಚಿಕ್ಕಮಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಕಲಬುರ್ಗಿಯ ಶರಣಬಸಪ್ಪ ಅಪ್ಪ ಮಠದಿಂದ ಶುರುವಾಗುವ ಪ್ರವಾಸ ರಂಭಾಪುರಿ ಪೀಠದಲ್ಲಿ ಅಂತ್ಯಗೊಳ್ಳಲಿದೆ.

ಕಳೆದ ಬಾರಿ ಮುನಿಸಿಕೊಂಡಿರುವ ನಾಯಕರನ್ನು ಸಮಾಧಾನ ಮಾಡಲು ಎಂ.ಬಿ.ಪಾಟೀಲ್ ಯತ್ನಿಸಲಿದ್ದಾರೆ. ಲಿಂಗಾಯತ ಧರ್ಮ ಸ್ಥಾಪನೆ ಯತ್ನದಿಂದಾಗಿ ಸ್ವಾಮೀಜಿಗಳು ಸಮುದಾಯದಿಂದ ದೂರ ಸರಿದಿದ್ದ ಸ್ವಾಮೀಜಿಗಳ ಮನವೊಲಿಕೆಗೆ ಪ್ರಯತ್ನ ನಡೆಯಲಿದೆ. ಕಾಂಗ್ರೆಸ್​ಗೆ ಅವಕಾಶ ನೀಡಲು ಮಠಗಳ ಅಂಗಳದಿಂದಲೇ ಸಂದೇಶ ರವಾನೆಗೆ ಯತ್ನಿಸಲಾಗುತ್ತದೆ.

ಕಲಬುರಗಿ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಾಮರಾಜನಗರ, ತುಮಕೂರು, ಮಂಗಳೂರು, ಉಡುಪಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಬೀದರ್, ಚಿಕ್ಕಮಗಳೂರು ಜಿಲ್ಲೆಗಳಿಗೆ ಎಂ.ಬಿ.ಪಾಟೀಲ್ ಭೇಟಿ ನೀಡಲಿದ್ದಾರೆ.

ಯಾವ್ಯಾವ ಮಠಗಳಿಗೆ ಭೇಟಿ?

ಕಲಬುರ್ಗಿಯ ಶರಣಬಸಪ್ಪ ಅಪ್ಪ ದೇವಸ್ಥಾನ, ಸಿದ್ದಾರೂಢ ಮಠ (ಹುಬ್ಬಳ್ಳಿ), ಮೂರು ಸಾವಿರ ಮಠ (ಹುಬ್ಬಳ್ಳಿ), ಮುರುಘಾ ಮಠ (ಧಾರವಾಡ), ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ (ಹರಿಹರ-ದಾವಣಗೆರೆ), ನಂದಿದುರ್ಗ ನೊಳಂಬ ಗುರು ಪೀಠ (ದಾವಣಗೆರೆ), ಸಿರಿಗೆರೆ ಮಠ (ದಾವಣಗೆರೆ), ಮುರುಘಾ ಮಠ (ದಾವಣಗೆರೆ), ಬೆಕ್ಕಿನ ಕಲ್ಮಠ (ಶಿವಮೊಗ್ಗ), ವಿರಕ್ತ ಮಠ (ಚಾಮರಾಜನಗರ), ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ (ತುಮಕೂರು), ಶ್ರೀ ಕಾಡಸಿದ್ದೇಶ್ವರ ಗದ್ದುಗೆ (ನೊಣವಿನಕೆರೆ, ತುಮಕೂರು), ಶ್ರೀ ಷಡಕ್ಷರಿ ಮಠ (ತುಮಕೂರು), ಸಿದ್ದಗಂಗಾ ಮಠ (ತುಮಕೂರು), ಗವಿಮಠ (ಕೊಪ್ಪಳ), ಶ್ರೀ ಕೋರಿ ಸಿದ್ದೇಶ್ವರ ಮಠ (ನಾಲವಾರ), ರಂಭಾಪುರಿ ಜಗದ್ಗುರು ಪೀಠ (ಬಾಳೆಹೊನ್ನೂರು, ಚಿಕ್ಕಮಗಳೂರು).

ಬಿಬಿಎಂಪಿ ವಾರ್ಡ್​ ಮೀಸಲಾತಿಗೆ ಕಾಂಗ್ರೆಸ್ ವಿರೋಧ

ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್​ ಹೋರಾಟ ನಡೆಸಲು ನಿರ್ಧರಿಸಿದೆ. ಮೀಸಲಾತಿ ಪ್ರಶ್ನಿಸಿ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿದೆ. ಆದರೂ ಆಕ್ಷೇಪಣೆಗೆ ಬಿಜೆಪಿ ಮನ್ನಣೆ ನೀಡಿಲ್ಲವೆಂದು ಆರೋಪಿಸಿರುವ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಇಂದು (ಆಗಸ್ಟ್ 18) ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್​ನಿಂದ ಧರಣಿ ನಡೆಯಲಿದೆ. ಫ್ರೀಡಂಪಾರ್ಕ್​ನಿಂದ ಸಿಎಂ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು, ಸಂಸದರು, ಶಾಸಕರು, ಮಾಜಿ ಮೇಯರ್​ಗಳು, ಪಕ್ಷದ ಹಿರಿಯರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ

Published On - 8:56 am, Thu, 18 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್