Bangalore: ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

| Updated By: Rakesh Nayak Manchi

Updated on: Sep 20, 2022 | 9:22 PM

ಒತ್ತುವರಿ ತೆರವು ಮಾಡುವಂತೆ ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ ಮೆಂಟ್ ಮಾಲೀಕರಿಗೆ ಬೆಂಗಳೂರು ತಹಶೀಲ್ದಾರ್ ಕೋರ್ಟ್ ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

Bangalore: ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
ಒತ್ತುವರಿ ತೆರವುಗೊಳಿಸುವಂತೆ ತಹಶೀಲ್ದಾರ್ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ
Follow us on

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ನಗರದ ಕೆಲವು ಕಡೆಗಳಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳು ಹಾಗೂ ನಿವಾಸಿಗಳ ನಡುವೆ ಜಟಾಪಟಿಗಳು ನಡೆಯುತ್ತಿವೆ. ಆದರೂ ಅಧಿಕಾರಿಗಳು ಮಾತ್ರ ತೆರವು ಕಾರ್ಯ ನಡೆಸಿಯೇ ಸಿದ್ಧ ಎಂದು ಪಣ ತೊಟ್ಟಿದ್ದಾರೆ. ಅದರಂತೆ ತಹಶೀಲ್ದಾರ್ ಹೈಕೋರ್ಟ್ ಒತ್ತುವರಿ ಮಾಡಿಕೊಂಡವರು ತಮ್ಮ ಸ್ವಂತ ಖರ್ಚಿನಲ್ಲೇ ಒತ್ತುವರಿ ತೆರವು ಮಾಡಬೇಕು ಎಂದು ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ ಮೆಂಟ್ ಮಾಲೀಕರಿಗೆ ಆದೇಶ ನೀಡಿತ್ತು. ಆದರೆ ಈಗ ತಹಶೀಲ್ದಾರ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ (High Court) ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆವರೆಗೂ ಯಾವುದೇ ಕಾರ್ಯಾಚರಣೆ, ಕ್ರಮ ಕೈಗೊಳ್ಳದಂತೆ ಕೋರ್ಟ್ ಸೂಚಿಸಿದ್ದು, ಆ ಮೂಲಕ  ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ ಮೆಂಟ್ ಮಾಲೀಕರಿಗೆ ನಿಟ್ಟುಸಿರುವ ಬಿಡುವಂತಾಗಿದೆ.

ತಹಶೀಲ್ದಾರ್ ಕೋರ್ಟ್ ಆದೇಶ ಏನಿತ್ತು?

ಒತ್ತುವರಿ ತೆರವು ಮಾಡುವಂತೆ ಬೆಂಗಳೂರು ತಹಶೀಲ್ದಾರ್ ಕೋರ್ಟ್ ಆದೇಶ ಮಾಡಿರುವ ಹಿನ್ನೆಲೆ ಬಾಗಮಾನೆ ಟೆಕ್ ಪಾರ್ಕ್ ಮತ್ತು ಪೂರ್ವಾ ಪಾರ್ಕಿಡ್ಜ್ ಸಂಕಷ್ಟ ಎದುರಾಗಿತ್ತು. ಸರ್ವೇ ನಂಬರ್ 35/1, 35/2, 35/3, 38/2, ಮತ್ತು ಸರ್ವೇ ನಂಬರ್ 85 ರಲ್ಲಿನ ಒತ್ತುವರಿ ತೆರವು ಮಾಡುವಂತೆ ಕೋರ್ಟ್ ಆದೇಶ ಹೊರಡಿಸಿದ್ದು, ಒತ್ತುವರಿದಾರರೆ ತಮ್ಮ ಸ್ವಂತ ಖರ್ಚಿನಲ್ಲೇ ತೆರವು ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದಲ್ಲಿ ಬಿಬಿಎಂಪಿ ಸರ್ವೆಯರ್ ನೆರವಿನಿಂದ ತೆರವುಗೊಳಿಸಬೇಕು, ಅದಕ್ಕಾಗುವ ಖರ್ಚನ್ನು ಕೂಡ ಒತ್ತುವರಿದಾರರೇ ಭರಿಸಬೇಕು.  ಒಂದೊಮ್ಮೆ ಒತ್ತುವರಿದಾರರು ತೆರವು ಮಾಡದಿದ್ದರೆ ಸರ್ಕಾರ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಅಲ್ಲದೆ ಒತ್ತುವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್ ಹೇಳಿದೆ. ಅದರಂತೆ ಬಾಗಮಾನೆ ಮತ್ತು ಪೂರ್ವ ಪ್ರಾಕಿಡ್ಜ್​ಗೆ ಸಂಕಷ್ಟ ಎದುರಾಗಿದೆ.

ಮತ್ತಷ್ಟು ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:22 pm, Tue, 20 September 22