RTO ನಿವೃತ್ತ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ, 63 ಲಕ್ಷ ದಂಡ! ದಂಡ ಪಾವತಿಸದಿದ್ರೆ ಪತ್ನಿ ಆಸ್ತಿಯ ಮುಟ್ಟುಗೋಲಿಗೆ ಆದೇಶ
ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು ಅವರು ಸುದೀರ್ಘ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ರೆ ಆರೋಪಿ ಅಥವಾ ಪತ್ನಿಯ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಸಹ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ: ನಿವೃತ್ತಿಯಾಗಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗೆ 4 ವರ್ಷ ಜೈಲು ಶಿಕ್ಷೆ ಮತ್ತು 63 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬೆಳಗಾವಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಸಾರಿಗೆ ಅಧಿಕಾರಿ ಪಿ. ಶಾಂತಕುಮಾರ ಶಿಕ್ಷೆಗೆ ಒಳಗಾದ ನಿವೃತ್ತ ಅಧಿಕಾರಿ. ಶಾಂತಕುಮಾರ ಪ್ರಸ್ತುತ ಬೆಳಗಾವಿ ನಗರದ ಆಂಜನೇಯ ನಗರದಲ್ಲಿ ವಾಸವಾಗಿದ್ದಾರೆ. ಶಾಂತಕುಮಾರ ಮೂಲತಃ ಕೋಲಾರ ಜಿಲ್ಲೆಯ ಕೆಜಿಎಫ್‌ದವರು.
ಬೀದರ ಜಿಲ್ಲೆಯ ಹುಮನಾಬಾದ್ ಆರ್‌ಟಿಓ ಆಗಿದ್ದಾಗ ಭ್ರಷ್ಟಾಚಾರ ನಡೆಸಿದ್ದರು. ತಮ್ಮ ಸೇವಾ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿ ಅಕ್ರಮ ಆಸ್ತಿ ಸಂಪಾದನೆ ಮಾಡಿಕೊಂಡಿದ್ದರು. ಈ ಸಂಬಂಧ ಗುಪ್ತ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಎಸ್ಪಿ ಆರ್.ಕೆ. ಪಾಟೀಲ್ ಅವರು ಶಾಂತಕುಮಾರ ಮನೆಯ ಮೇಲೆ ದಾಳಿ ಮಾಡಿ, ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.
ಲೋಕಾಯುಕ್ತ ಅಧಿಕಾರಿಗಳು 2010 ಮೇ 3 ರಂದು ಪಿ. ಶಾಂತಕುಮಾರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆ ನಡೆಸಿದ್ದ ಬೆಳಗಾವಿ ಲೋಕಾಯುಕ್ತ ಎಸ್ಪಿ ಆರ್. ಬಿ. ಹವಾಲ್ದಾರ್ ಅವರು 1.14 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಮೋಹನ ಪ್ರಭು ಅವರು ಸುದೀರ್ಘ ವಿಚಾರಣೆಯ ಬಳಿಕ ಇಂದು ತೀರ್ಪು ಪ್ರಕಟಿಸಿದ್ದಾರೆ. ದಂಡ ಪಾವತಿಸದಿದ್ರೆ ಆರೋಪಿ ಅಥವಾ ಪತ್ನಿಯ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಸಹ ಆದೇಶ ಹೊರಡಿಸಿದ್ದಾರೆ.
ಅಶ್ಲೀಲ ವಿಡಿಯೋ ಕಳಿಸಿ ಹಿರಿಯ ಪೊಲೀಸ್ ಅಧಿಕಾರಿಗೇ ಬ್ಲ್ಯಾಕ್ ಮೇಲ್!
ಬೆಂಗಳೂರು: ಅಶ್ಲೀಲ ವಿಡಿಯೋ ಕಳಿಸಿ ಪೊಲೀಸ್ ಅಧಿಕಾರಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೈಬರ್ ವಂಚಕರಿಂದ ವಿಐಪಿ ಸೆಕ್ಯೂರಿಟಿ ಎಸಿಪಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ಇದಾಗಿದೆ. ವಂಚಕರು ಮೊದಮೊದಲು ವಾಟ್ಸಪ್ ಮೂಲಕ ಹಾಯ್, ಹಲೋ ಅಂತ ಮೇಸೆಜ್ ಕಳಿಸಿದ್ದರು. ವಂಚಕರ ಆ ಮೊಬೈಲ್ ಸಂಖ್ಯೆಯಿದ್ದ ವಾಟ್ಸ್ಯಾಪ್ ಡಿಸ್ಪ್ಲೇ ಇಮೇಜ್ಗೆ ಹುಡುಗಿಯ ಫೋಟೋ ಹಾಕಲಾಗಿತ್ತು. ಡಿಪಿ ಪೋಟೋ ಎಸಿಪಿಗೆ ಸಂಬಂಧಿಯಾಗಿರುವ ಯುವತಿಯೊಬ್ಬರ ಮುಖಚರ್ಯೆಗೆ ಹೋಲುವಂತಿತ್ತು. ಹೀಗಾಗಿ ಯಾವುದೇ ಅನುಮಾನಪಡದೆ ಸಂತ್ರಸ್ತ ಎಸಿಪಿ, ವಾಟ್ಸ್ಯಾಪ್ ಸಂದೇಶಕ್ಕೆ ಪ್ರತಿಕ್ರಿಯಿಸಿಬಿಟ್ಟಿದ್ದಾರೆ.
‘ಹೊಸ ಸಿಮ್ ಕಾರ್ಡ್ ತೆಗೆದುಕೊಂಡಿದ್ದೀರಾ?’ ಎಂದು ತಮ್ಮ ಸಂಬಂಧಿ ಯುವತಿಯನ್ನು ಎಸಿಪಿ ಪ್ರಶ್ನಿಸಿದ್ದಾರೆ. ಅದಾದ ಮೆಲೆ ವಂಚಕರು ಎಸಿಪಿಯ ಮೊಬೈಲ್‌ಗೆ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು ಮುಂದೆ ಎಸಿಪಿ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿದ್ದಾರೆ. ಎಸಿಪಿ ಕುತೂಹಲದಿಂದ ವಿಡಿಯೋ ಕರೆ ಸ್ವೀಕರಿಸಿದಾಗ ಯುವತಿಯೊಬ್ಬಳು ಮಾತನಾಡಿದ್ದಳು. ಆ ಯುವತಿ ನಗ್ನಳಾಗಿ ತನ್ನ ದೇಹ ಪ್ರದರ್ಶಿಸಿದ್ದಳು. ಇದರಿಂದ ಗಾಬರಿಯಾದ ಎಸಿಪಿ ಕಾಲ್ ಕಟ್ ಮಾಡಿದ್ದಾರೆ.
ಇಷ್ಟೆಲ್ಲಾ ಆದ ಮೆಲೆ, ನಗ್ನ ಯುವತಿಯ ಜತೆ ವಿಡಿಯೋ ಕರೆಯಲ್ಲಿ ಸಂಭಾಷಣೆ ನಡೆಸಿರುವ ದೃಶ್ಯಾವಳಿಯನ್ನು ಚಿತ್ರೀಕರಿಸಿಕೊಂಡಿದ್ದೇವೆ. ಆ ವಿಡಿಯೋ ಫೇಸ್‌ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತೇವೆ ಎಂದು ಕಿರಾತಕರು ಬೆದರಿಕೆ ಹಾಕಿದ್ದಾರೆ. ಬಳಿಕ, ತಾವು ಪೊಲೀಸ್ ಎಂದೂ ಹೇಳಿಕೊಂಡು ಬೆದರಿಕೆ ಹಾಕಿದ್ದರು ಅದೇ ಕಿಡಿಗೇಡಿಗಳು! ಸೈಬರ್ ಖದೀಮರ ಕಿರುಕುಳ ತಾಳಲಾರದೇ ಕೊನೆಗೆ ಕೇಂದ್ರ ವಿಭಾಗದ ಸಿಇಎನ್ ಠಾಣೆಗೆ ಬಾಧಿತ ಎಸಿಪಿ ದೂರು ನೀಡಿದ್ದಾರೆ. ಸೆಂಟ್ರಲ್ ಸಿಇಎನ್ ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published On - 9:28 pm, Tue, 20 September 22