ಸ್ಪೀಡ್ ಲಿಮಿಟ್ ಇಲ್ಲದೆ ಆ್ಯಂಬುಲೆನ್ಸ್​ಗಳ ಓಡಾಟ, ಜೀವ ಉಳಿಸಬೇಕಾದ ಜೀವರಕ್ಷಕ ವಾಹನದಿಂದ ಅಪಘಾತ

| Updated By: Rakesh Nayak Manchi

Updated on: Aug 18, 2022 | 8:56 AM

ಕೆಲವೊಂದು ಆ್ಯಂಬುಲೆನ್ಸ್​ಗಳು ವೇಗದ ಮಿತಿ ಇಲ್ಲದೆ ಶರವೇಗದಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಜೀವ ಉಳಿಸಬೇಕಾಗಿದ್ದ ಆ್ಯಂಬುಲೆನ್ಸ್​ಗಳು ಅಪಘಾತಕ್ಕೀಡಾಗುತ್ತಿವೆ. ಬೆಂಗಳೂರು ನಗರದಲ್ಲಿ ವೇಗವಾಗಿ ಬಂದ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಸ್ಪೀಡ್ ಲಿಮಿಟ್ ಇಲ್ಲದೆ ಆ್ಯಂಬುಲೆನ್ಸ್​ಗಳ ಓಡಾಟ, ಜೀವ ಉಳಿಸಬೇಕಾದ ಜೀವರಕ್ಷಕ ವಾಹನದಿಂದ ಅಪಘಾತ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಆ್ಯಂಬುಲೆನ್ಸ್​ಗಳು ವೇಗದ ಮಿತಿ ಇಲ್ಲದೆ ಓಡಾಡುತ್ತಿರುವ ಹಿನ್ನೆಲೆ ಅಪಘಾತದಂತಹ ದುರ್ಘಟನೆಗಳು ಹೆಚ್ಚಾಗತೊಡಗಿವೆ. ಇದರಿಂದಾಗಿ ಜೀವ ಉಳಿಸಬೇಕಾಗಿರುವ ಆ್ಯಂಬುಲೆನ್ಸ್ ಕೆಲವೊಮ್ಮೆ ಜೀವಕ್ಕೆ ಕುತ್ತು ತರುವಂತಹ ಸನ್ನಿವೇಶಕ್ಕೆ ಒಳಗಾಗುತ್ತದೆ. ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಟೋಲ್​ಗೇಟ್ ಬಳಿ ಪಲ್ಟಿ ಹೊಡೆದ ಘಟನೆಯ ನಂತರ ಇದೀಗ ಮತ್ತೊಂದು ಅವಘಡ ಸಂಭವಿಸಿದೆ. ವೇಗವಾಗಿ ಬಂದ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆಯೊಂದು ನಗರದ ಮತ್ತಿಕೆರೆ ಬಸ್ ನಿಲ್ದಾಣ ಬಳಿ ಸಂಭವಿಸಿದೆ.

ಕೆಲವೊಂದು ಆ್ಯಂಬುಲೆನ್ಸ್​ಗಳಲ್ಲಿ ವೇಗದ ಮಿತಿ ಇಲ್ಲದೆ ಶರವೇಗದಲ್ಲಿ ಚಲಾಯಿಸಲಾಗುತ್ತಿದೆ. ಅದರಂತೆ ಮತ್ತಿಕೆರೆ ಬಸ್ ನಿಲ್ದಾಣದ ಬಳಿ ತಡರಾತ್ರಿ 11.30ರ ಸುಮಾರಿಗೆ ವೇಗವಾಗಿ ಬಂದ ಆ್ಯಂಬುಲೆನ್ಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಕ್ಟಿವಾ ಸಪೂರ್ಣ ಜಖಂ ಗೊಂಡಿದ್ದುಮ ಅದೃಷ್ಟವಶಾತ್ ದ್ವಿಚಕ್ರ ವಾಹನದಲ್ಲಿದ್ದ ಸುಹಾಸಿನಿ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಜುಲೈ 20ರಂದು ಆ್ಯಂಬುಲೆನ್ಸ್ ದುರಂತವೊಂದು ಸಂಭವಿಸಿತ್ತು. ಶರವೇಗದಲ್ಲಿ ನುಗ್ಗಿದ ಆ್ಯಂಬುಲೆನ್ಸ್, ನೋಡ ನೋಡುತ್ತಲೇ ಟೋಲ್​ನ ಗೋಡೆಗೆ ಅಪ್ಪಳಿಸಿತ್ತು. ಆ್ಯಂಬುಲೆನ್ಸ್​ನಲ್ಲಿದ್ದವರು ಹಾರಿ ನೆಲಕ್ಕೆ ಬಿದ್ದಿದ್ದರು. ಈ ದುರ್ಘಟನೆಯಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದರು. ಹಾಗೂ ಆ್ಯಂಬುಲೆನ್ಸ್ ಚಾಲಕ ರೋಷನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಹೊನ್ನಾವರ ಮೂಲದ ಗಜಾನನ ಗಣಪತಿ ನಾಯ್ಕ್ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ, ಅವರನ್ನು ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಅಂಬುಲೆನ್ಸ್ ಡ್ರೈವರ್ ರೋಷನ್ ವೇಗವಾಗಿ ವಾಹನ ಓಡಿಸಿದ್ದಾರೆ. ಆದರೆ ಉಡುಪಿ ಜಿಲ್ಲೆ ಬೈಂದೂರಿನ ಶೀರೂರು ಟೋಲ್ ಗೇಟ್‌ನಲ್ಲಿ ಘನಘೋರ ದುರಂತ ಸಂಭವಿಸಿದೆ.  ಸೈರನ್ ಮಾಡುತ್ತ ಬರುತ್ತಿದ್ದ ಆ್ಯಂಬುಲೆನ್ಸ್ ನೋಡಿದ ಟೋಲ್ ಸಿಬ್ಬಂದಿಯೂ ಗೇಟ್​ಗಳನ್ನು ತೆಗೆಯುವ ಕಾರ್ಯ ನಡೆಸಿತಾದರೂ ದಾರಿಯಲ್ಲೇ ಮಲಗಿದ್ದ ಹಸುಗಳು ಕಾಣುತ್ತಿದ್ದಂತೆ ಚಾಲಕ ಆ್ಯಂಬುಲೆನ್ಸ್ ಬ್ರೇಕ್ ಹಾಕಲು ಮುಂದಾಗಿದ್ದಾನೆ. ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ದುರ್ಘಟನೆ ನಡೆದಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 am, Thu, 18 August 22