ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಮೇಲೂ ಆಗಿದೆ. ಶುಕ್ರವಾರ ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗದಲ್ಲಿ ಮಳೆ ಸುರಿದಿತ್ತು. ಹಾಸನ ಭಾಗದಲ್ಲಂತೂ ಆಲಿಕಲ್ಲಿನ ಮಳೆಗೆ ರೈತರು ತತ್ತರಿಸಿ ಹೋಗಿದ್ದರು. ಇಂದು ಕೂಡ ರಾಜ್ಯದ ಅನೇಕ ಭಾಗದಲ್ಲಿ ಮಳೆ ಆಗಿದೆ. ಬೆಂಗಳೂರಿನಲ್ಲೂ ಸಂಜೆ ವೇಳೆಗೆ ಮಳೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಇದೆ. ಸೂರ್ಯ ಮೋಡದ ಜತೆ ಕಣ್ಣಾಮುಚ್ಚಾಲೆ ಆಡುತ್ತಿದ್ದರಿಂದ ನಗರದಲ್ಲಿ ಬಿಸಿಲು ಭೂಮಿಗೆ ತಾಗಿದ್ದು ತುಂಬಾನೇ ಕಡಿಮೆ. 5 ಗಂಟೆ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಮಳೆ ಆಗಿದೆ. ಸಂಜೆ 7 ಗಂಟೆ ಸುಮಾರಿಗೆ ಬೆಂಗಳೂರಿನ ಕೆಲ ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 7 ಗಂಟೆ ಹೊತ್ತಿಗೆ ಬಹುತೇಕರು ಕಚೇರಿಯಿಂದ ತೆರಳುತ್ತಿರುತ್ತಾರೆ. ಆ ಹೊತ್ತಿಗೆ ಮಳೆ ಆದರೆ, ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುವುದರಲ್ಲಿ ಅನುಮಾನ ಇಲ್ಲ.
ಅಂದಹಾಗೆ, ಇದೇ ವಾತಾವರಣ ಮುಂದಿನ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಂದರೆ, ಫೆಬ್ರವರಿ 21 ಹಾಗೂ ಫೆಬ್ರವರಿ 22ರಂದು ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಆಗಲಿದೆ.
Significant Weather Features are:
♦ A trough in westerlies runs from northeast Bihar to southeast Arabian Sea across Jharkhand, Chhattisgarh, Telangana, Rayalaseema, South Interior Karnataka and north Kerala in mid-tropospheric levels— India Meteorological Department (@Indiametdept) February 20, 2021
ಇನ್ನು, ಈ ಅವಧಿಯಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ಕೊರೊನಾ ವೈರಸ್ ನಿಧಾನವಾಗಿ ಕಡಿಮೆ ಆಗುತ್ತಿದ್ದರೂ ಬೆಂಗಳೂರಲ್ಲಿ ನಿತ್ಯ 200-300 ಕೇಸ್ಗಳು ದೃಢವಾಗುತ್ತಿವೆ. ಮಳೆಯಲ್ಲಿ ನೆನೆದು ಒದ್ದೆ ಆಗಿ ಜ್ವರ ಬಂದರೆ ಆತಂಕಕ್ಕೆ ಈಡಾಗುವ ಪರಿಸ್ಥಿತಿ ಬಂದೊದಗುತ್ತದೆ.
ಇದನ್ನೂ ಓದಿ: Weather Updates: ಇನ್ನೆರಡು ದಿನ ಕರ್ನಾಟಕದ ವಿವಿಧೆಡೆ ಮಳೆಯ ಸಾಧ್ಯತೆ: ಉತ್ತರಾಖಂಡದಲ್ಲಿ ಹಿಮಪಾತದ ಎಚ್ಚರಿಕೆ
Published On - 5:41 pm, Sat, 20 February 21