Online liquor sale: ಆನ್​ಲೈನ್ ಮದ್ಯ ಮಾರಾಟಕ್ಕೆ‌ ಅನುಮತಿ ನೀಡಲು ಹೈಕೋರ್ಟ್ ನಕಾರ

Online liquor sale: ಆನ್​ಲೈನ್ ಮದ್ಯ ಮಾರಾಟಕ್ಕೆ‌ ಅನುಮತಿ ನೀಡಲು ಹೈಕೋರ್ಟ್​ ನಿರಾಕರಿಸಿದೆ. ಜೊತೆಗೆ, HIP ಬಾರ್ ಪ್ರೈ.ಲಿ. ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

  • TV9 Web Team
  • Published On - 18:27 PM, 20 Feb 2021
Online liquor sale: ಆನ್​ಲೈನ್ ಮದ್ಯ ಮಾರಾಟಕ್ಕೆ‌ ಅನುಮತಿ ನೀಡಲು ಹೈಕೋರ್ಟ್ ನಕಾರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಆನ್​ಲೈನ್ ಮದ್ಯ ಮಾರಾಟಕ್ಕೆ‌ ಅನುಮತಿ ನೀಡಲು ಹೈಕೋರ್ಟ್​ ನಿರಾಕರಿಸಿದೆ. ಜೊತೆಗೆ, HIP ಬಾರ್ ಪ್ರೈ.ಲಿ. ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಏನಿದು ಪ್ರಕರಣ?
ಆನ್​ಲೈನ್ ಮದ್ಯ ಮಾರಾಟಕ್ಕೆ ಅಧಿಕಾರ ಪತ್ರ ನೀಡಲಾಗಿತ್ತು. ನಂತರ ಅಬಕಾರಿ ಆಯುಕ್ತರು ಅಧಿಕಾರ ಪತ್ರ ಹಿಂಪಡೆದಿದ್ದರು. ಇದನ್ನು ಪ್ರಶ್ನಿಸಿ HIPಬಾರ್ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಈ ನಡುವೆ, ಪ್ರಾಯೋಗಿಕವಾಗಿ ಮಾತ್ರ ಅಧಿಕಾರ ಪತ್ರ ನೀಡಲಾಗಿತ್ತು. ಇದಕ್ಕೆ, ಸಾರ್ವಜನಿಕರು ಹಾಗೂ ಬಾರ್ ಪರವಾನಗಿದಾರರ ಆಕ್ಷೇಪವಿತ್ತು. ಅಬಕಾರಿ ಕಾಯ್ದೆಯಡಿ ಆನ್​ಲೈನ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಮತ್ತುಬರುವ ಪಾನೀಯಗಳ ಮಾರಾಟಕ್ಕೆ ಲೈಸೆನ್ಸ್ ಕಡ್ಡಾಯ. ಹೀಗಾಗಿ, ಆನ್​ಲೈನ್ ​​ಮದ್ಯ ಮಾರಾಟಕ್ಕಿದ್ದ ಅನುಮತಿ ರದ್ದುಪಡಿಸಲಾಯಿತು ಅಂತಾ ಹೈಕೋರ್ಟ್​ಗೆ ರಾಜ್ಯ ಸರ್ಕಾರ ಹೇಳಿಕೆ ಕೊಟ್ಟಿತ್ತು.

ಹೀಗಾಗಿ, ಅಬಕಾರಿ ಕಾಯ್ದೆಯಡಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಆನ್​ಲೈನ್​ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಬಿದ್ದಿದೆ. ನ್ಯಾ.ಸತೀಶ್ ಚಂದ್ರ ಶರ್ಮಾ, ನ್ಯಾ.ವಿ.ಶ್ರೀಷಾನಂದರವರಿದ್ದ ಪೀಠ ಆದೇಶ ನೀಡಿದೆ.

ಇದನ್ನೂ ಓದಿ: ದೃಶ್ಯಂ ಸಿನಿಮಾ ನೋಡಿ ದರೋಡೆಗೆ ಪ್ಲ್ಯಾನ್.. ಇದು ನಿಮ್ಮ ಊಹೆಗೂ ನಿಲುಕದಂಥ ‘ಶೂ’ ಮ್ಯಾನ್ ಥ್ರಿಲ್ಲರ್!