ಬೆಂಗಳೂರು, ಜುಲೈ 04: ವಿವಿಧ ಬೇಡಿಕೆಗಳ ಪೂರೈಕೆ ಆಗ್ರಹಿಸಿ ಇಂದು ಶಾಂತಿನಗರದ (Shanti Nagar) ಬಿಟಿಎಸ್ ರೋಡ್ ಬ್ಲಾಕ್ ಮಾಡಿ ಆಟೋ, ಕ್ಯಾಬ್ (Auto, Cab) ಚಾಲಕರಿಂದ ಸಾರಿಗೆ ಇಲಾಖೆ ಮುಖ್ಯ ಕಚೇರಿ ಮುತ್ತಿಗೆ ಹಾಕಲಾಗಿದೆ. ಸಾವಿರಾರು ಆಟೋ, ಕ್ಯಾಬ್ ಗಳನ್ನು ಚಾಲಕರು ರೋಡ್ಗೆ ಅಡ್ಡಲಾಗಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಬ್ಬಿಣದ ಪೈಪ್ಗಳನ್ನು ಕಟ್ ಮಾಡಿಕೊಂಡು ಕಚೇರಿ ಒಳಗೆ ಚಾಲಕರು ನುಗ್ಗಿದ್ದಾರೆ. ಪೋಲಿಸರು ಎಷ್ಟೇ ಪ್ರಯತ್ನ ಪಟ್ಟರು ಚಾಲಕರನ್ನು ತಡೆಯಲು ಆಗಲಿಲ್ಲ. ತಡೆಯಲು ಹೋದ ಪೋಲಿಸರನ್ನು ಕೂಡ ತಳ್ಳಿ ಚಾಲಕರು ನುಗ್ಗಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಫೆಬ್ರವರಿಯಲ್ಲಿಯೇ ಓನ್ ಸಿಟಿ ಓನ್ ರೇಟ್ ಆದೇಶವನ್ನು ಹೊರಡಿಸಿದೆ. ಆದೇಶ ಆಗಿ ಆರು ತಿಂಗಳಾದರೂ ಯಾವುದೇ ಅಗ್ರಿಗೇಟರ್ ಕಂಪನಿಗಳು ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಆರ್ಟಿಓ ಅಧಿಕಾರಿಗಳು ಆದೇಶ ಪಾಲನೆ ಮಾಡದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚಾಲಕರು ಆರ್ಟಿಓ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರುಗಳದ್ದೇ ಹವಾ! ಮಹಿಳಾ ಆಟೋ ಪ್ರಯಾಣಿಕರೂ ನಿರಾಳ
ಪ್ರಯಾಣಿಕರಿಗೆ ತೊಂದರೆ ಆಗಬಾರದು, ಪ್ರಯಾಣಿಕರಿಂದ ದುಪ್ಪಟ್ಟು ದರ ತೆಗೆದುಕೊಳ್ಳಬಾರದು ಎಂದು ಈಗಾಗಲೇ ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ ಓಲಾ, ಉಬರ್ ಸೇರಿದಂತೆ ಅಗ್ರಿಗೇಟರ್ ಲೈಸೆನ್ಸ್ ಪಡೆದ ಕಂಪನಿಗಳು ದುಪ್ಪಟ್ಟು ದರವನ್ನು ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: Tv9 Impact: ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್
ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಇದರ ಲಾಭವನ್ನು ಚಾಲಕರಿಗೂ ಕೊಡಿತ್ತಿಲ್ಲ. ಇದರಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ವಾಹನಗಳನ್ನು ಖರೀದಿ ಮಾಡಿರುವ ಚಾಲಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕೂಡಲೇ ಈ ಅಗ್ರಿಗೇಟರ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ಮಾಡಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Thu, 4 July 24