ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2024 | 6:16 PM

2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್​​ ಮಾವಿನ ಹಣ್ಣಿನ ಸಾಗಾಟಣೆ ಮಾಡುವ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ಬರೆದಿದೆ. ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಮಾವಿನ ಹಣ್ಣಿನ ಬೇಡಿಕೆ ಹೆಚ್ಚಾಗುತ್ತಿದ್ದು ಪೆರಿಷಬಲ್‌ ಸರಕುಗಳನ್ನು ರಫ್ತು ಮಾಡುವಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಯ ರಫ್ತು ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್​​
ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್​​
Follow us on

ದೇವನಹಳ್ಳಿ, ಆಗಸ್ಟ್​ 1: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (kempegowda international airport) 2024ನೇ ಸಾಲಿನಲ್ಲಿ 822 ಮೆಟ್ರಿಕ್ ಟನ್​​ ಮಾವಿನ ಹಣ್ಣಿನ (mango) ಸಾಗಾಟಣೆ ಮಾಡುವ ಮೂಲಕ ಈ ಬಾರಿ ದಾಖಲೆ ಬರೆದಿದೆ. ಕಳೆ ವರ್ಷ 685 ಮೆಟ್ರಿಕ್‌ ಟನ್‌ ಮಾವಿನ ಹಣ್ಣನ್ನು ರಫ್ತು ಮಾಡಿದ್ದು ಈ ಬಾರಿ ಒಟ್ಟು 27 ಲಕ್ಷ ಮಾವಿನ ಹಣ್ಣನ್ನು ರಫ್ತು ಮಾಡುವ ಮೂಲಕ ಹಿಂದಿನ ಋತುವಿಗೆ ಹೋಲಿಸಿದರೆ ಶೇ.59ರಷ್ಟು ಹೆಚ್ಚಳ ಕಂಡಿದೆ. ಸಾಗರೋತ್ತರ ಮಾರುಕಟ್ಟೆಗಳಲ್ಲಿ ಭಾರತೀಯ ಮಾವಿನ ಹಣ್ಣಿನ ಬೇಡಿಕೆ ಹೆಚ್ಚಾಗುತ್ತಿದ್ದು ಪೆರಿಷಬಲ್‌ ಸರಕುಗಳನ್ನು ರಫ್ತು ಮಾಡುವಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ರಫ್ತು ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಈ ಋತುವಿನಲ್ಲಿ ಯುಎಸ್​ಗೆ ಹೆಚ್ಚು ಮಾವಿನ ಹಣ್ಣುಗಳನ್ನು ರಫ್ತು ಮಾಡಲಾಗಿದ್ದು ಪ್ರಮುಖವಾಗಿ ವಾಷಿಂಗ್ಟನ್ ಡಲ್ಲಾಸ್ (ಐಎಡಿ), ಡಲ್ಲಾಸ್-ಫೋರ್ಟ್ ವರ್ತ್ (ಡಿಎಫ್‌ಡಬ್ಲ್ಯೂ) ಮತ್ತು ಸ್ಯಾನ್ ಫ್ರಾನ್ಸಿಸ್ಕೋ (ಎಸ್‌ಎಫ್‌ಒ) ನಂತಹ ವಿಮಾನ ನಿಲ್ದಾಣಗಳು ಭಾರತೀಯ ಮಾವು ಸಾಗಣೆಗೆ ಪ್ರಮುಖ ತಾಣಗಳಾಗಿ ಹೊರಹೊಮ್ಮಿವೆ. ಇದರ ಜೊತೆಗೆ, ಚಿಕಾಗೋ (ಒಆರ್‌ಡಿ), ಸಿಯಾಟಲ್ (ಸಿಇಎ), ದುಬೈ (ಡಿಎಕ್ಸ್‌ಬಿ), ಲಂಡನ್ (ಎಲ್‌ಎಚ್‌ಆರ್‌) ಮತ್ತು ಹೂಸ್ಟನ್ (ಐಎಎಚ್‌) ನಂತಹ ಪ್ರಮುಖ ವಿಮಾನ ನಿಲ್ದಾಣಗಳು ಸೇರಿದಂತೆ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಬೆಂಗಳೂರಿನಿಂದ ಮಾವಿನ ಹಣ್ಣು ರಫ್ತಾಗಿದೆ. ಆ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತೀಯರ ಬೆಳೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಿಗೆ ತಲುಪಿಸಲು ಸಮರ್ಥವಾಗಿದೆ.

ಬಿಐಎಎಲ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಹೇಳಿದ್ದಿಷ್ಟು 

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಬಿಐಎಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಕಿ ರಘುನಾಥ್ ಮಾತನಾಡಿ, “ಬಿಎಲ್‌ಆರ್ ಏರ್‌ಪೋರ್ಟ್‌, ತಾಂತ್ರಿಕವಾಗಿ ಸುಧಾರಿತ ಕೋಲ್ಡ್ ಸ್ಟೋರೇಜ್ ಸೌಲಭ್ಯವಾದ ಡಬ್ಲ್ಯುಎಫ್‌ಎಸ್ ಬಿಎಲ್‌ಆರ್ ಕೂಲ್‌ಪೋರ್ಟ್ ಪೂರೈಕೆಯು ಪೆರಿಷಬಲ್‌ ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಆ್ಯಂಥಮ್ ಸಾಂಗ್ ಬಿಡುಗಡೆ: ಇಲ್ಲಿದೆ ವಿಡಿಯೋ

ಮಾವಿನ ರಫ್ತುನ್ನು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಿಸುವ ಈ ಸಾಧನೆಯು ಭಾರತೀಯ ಮಾವಿನಹಣ್ಣಿಗೆ, ವಿಶೇಷವಾಗಿ ಎರಡು ಪ್ರಮುಖ ಅಂತಾರಾಷ್ಟ್ರೀಯ ತಾಣಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಪ್ರಧಾನ ಗೇಟ್‌ವೇ ಆಗಿ ನಮ್ಮ ಸ್ಥಾನವನ್ನು ಬಲಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದು: ಏರ್‌ಲೈನ್ಸ್‌ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಆಕ್ರೋಶ

ವ್ಯವಸ್ಥಾಪನಾ ಸಾಮರ್ಥ್ಯ, ಕಾರ್ಯತಂತ್ರದ ಪಾಲುದಾರಿಕೆ ಮತ್ತು ಕೃಷಿ ಕ್ಷೇತ್ರದ ಬೆಂಬಲದಿಂದ ಬೆಂಗಳೂರು ವಿಮಾನ ನಿಲ್ದಾಣವು ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳ ರಫ್ತಿನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆರ್ಥಿಕ ಬೆಳವಣಿಗೆಯಲ್ಲೂ ತನ್ನ ಪಾತ್ರವನ್ನು ಮುಂದುವರೆಸಿಕೊಂಡು ಸಾಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.