ಬೈಕ್​ಗೆ ಬಸ್​ ಡಿಕ್ಕಿ: ಮತದಾನಕ್ಕೆಂದು ಹೋಗುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು

|

Updated on: Dec 27, 2020 | 2:19 PM

ಮತದಾನ ಮಾಡಲು ಹೋಗುತ್ತಿದ್ದ ವೇಳೆ ಮಹಿಳೆಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮರಣಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಯಲಚಹಳ್ಳಿ ಗೇಟ್​ ಬಳಿ ನಡೆದಿದೆ.

ಬೈಕ್​ಗೆ ಬಸ್​ ಡಿಕ್ಕಿ: ಮತದಾನಕ್ಕೆಂದು ಹೋಗುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವು
ಬಸ್​ಗೆ ಬೈಕ್ ಡಿಕ್ಕಿಯಾಗಿ ಮತದಾನಕ್ಕೆಂದು ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಮರಣ ಹೊಂದಿದ್ದಾಳೆ
Follow us on

ದೇವನಹಳ್ಳಿ: ಮತದಾನ ಮಾಡಲು ಹೋಗುತ್ತಿದ್ದ ವೇಳೆ ಮಹಿಳೆಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮರಣಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಯಲಚಹಳ್ಳಿ ಗೇಟ್​ ಬಳಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ಹೇಮಾವತಿ(25) ಮೃತ ದುರ್ದೈವಿ.

ಕೆ.ಆರ್​.ಪುರಂನಿಂದ ಕೋಲಾರಕ್ಕೆ ಮತದಾನ ಮಾಡಲು ಹೇಮಾವತಿ ತನ್ನ ಸಹೋದರನ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಳು. ಈ ವೇಳೆ, KSRTC ಬಸ್​ ಒಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಾಳೆ. ಡಿಕ್ಕಿಯ ರಭಸಕ್ಕೆ ಹೇಮಾವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಲಕೋಟೆ: ಬಸ್​ಗೆ ಡಿಕ್ಕಿ ಹೊಡೆದ ಬೈಕ್​: ಸವಾರ ಸ್ಥಳದಲ್ಲೇ ಸಾವು