ಗುಳೆ ಹೋಗಿದ್ದ ಮತದಾರರಿಗೆ 1 ದಿನದ ರಾಜ ಮರ್ಯಾದೆ: ಊಟೋಪಚಾರದ ಜೊತೆ ಖರ್ಚು ವೆಚ್ಚ ಭರಿಸಿದ ಅಭ್ಯರ್ಥಿಗಳು

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋಗಿದ್ದವರಿಗೆ ಎಲೆಕ್ಷನ್​ ಅಭ್ಯರ್ಥಿಗಳು ರತ್ನಗಂಬಳಿ ಹಾಸಿ ಒಂದು ದಿನದ ಮಟ್ಟಿಗೆ ರಾಜ ಮರ್ಯಾದೆ ನೀಡಿರುವ ಘಟನೆ ಜಿಲ್ಲೆಯ ಇಳಕಲ್​ ಬಳಿಯ ಗುಳೇದಗುಡ್ಡ ಗ್ರಾಮದಲ್ಲಿ ನಡೆದಿದೆ.

ಗುಳೆ ಹೋಗಿದ್ದ ಮತದಾರರಿಗೆ 1 ದಿನದ ರಾಜ ಮರ್ಯಾದೆ: ಊಟೋಪಚಾರದ ಜೊತೆ ಖರ್ಚು ವೆಚ್ಚ ಭರಿಸಿದ ಅಭ್ಯರ್ಥಿಗಳು
ಮತದಾನ ಮಾಡಲು ತವರೂರಿಗೆ ವಾಪಸ್​ ಆದ ಗ್ರಾಮಸ್ಥರು
Follow us
preethi shettigar
| Updated By: KUSHAL V

Updated on:Dec 27, 2020 | 1:57 PM

ಬಾಗಲಕೋಟೆ: ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಗುಳೆ ಹೋಗಿದ್ದವರಿಗೆ ಎಲೆಕ್ಷನ್​ ಅಭ್ಯರ್ಥಿಗಳು ರತ್ನಗಂಬಳಿ ಹಾಸಿ ಒಂದು ದಿನದ ಮಟ್ಟಿಗೆ ರಾಜ ಮರ್ಯಾದೆ ನೀಡಿರುವ ಘಟನೆ ಜಿಲ್ಲೆಯ ಇಳಕಲ್​ ಬಳಿಯ ಗುಳೇದಗುಡ್ಡ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಚುನಾಣೆಯ ಎರಡನೇ ಹಂತ ನಡೆಯುತ್ತಿರುವ ಬೆನ್ನಲ್ಲೇ ಮಂಗಳೂರು, ಬೆಂಗಳೂರು, ಗೋವಾ, ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಗ್ರಾಮಸ್ಥರು ಮತದಾನ ಮಾಡಿ ವಾಪಸ್​ ಹೋಗಲು ಅಭ್ಯರ್ಥಿಗಳು ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಗುಳೆ ಹೋದ ಗ್ರಾಮಸ್ಥರಿಗೆ ಓಡಾಟದ ಖರ್ಚುವೆಚ್ಚವನ್ನು ಕೊಡುವ ಭರವಸೆಯನ್ನು ಸಹ ನೀಡಿದ್ದರು.

ಬಾಗಲಕೋಟೆ ಜಿಲ್ಲೆ ಇಳಕಲ್, ಗುಳೇದಗುಡ್ಡ ಬಸ್ ನಿಲ್ದಾಣಕ್ಕೆ ಬಂದ ಮತದಾರರು

ಈ ನಿಟ್ಟಿನಲ್ಲಿ, ಇಳಕಲ್, ಗುಳೇದಗುಡ್ಡ ಬಸ್ ನಿಲ್ದಾಣಗಳಲ್ಲಿ ನೂರಾರು ಜನರು ಬಂದು ಇಳಿದಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಮತದಾನಕ್ಕಾಗಿ ಜನರು ತೆರಳಿದ್ದು, ಇಳಕಲ್ ಬಸ್ ನಿಲ್ದಾಣದಿಂದ ಪಕ್ಕದ ರಾಯಚೂರು ಜಿಲ್ಲೆಗೆ ಹೋಗುವ ಜನರು ಸಹ ಇದರಲ್ಲಿ ಇದ್ದಾರೆ. ಊರುಗಳಿಗೆ ವಾಪಸ್​ ಆದವರಿಗೆ ಗುಳೇದಗುಡ್ಡ ಕ್ಯಾಂಟೀನ್​ನಲ್ಲಿ ಉಪಾಹಾರದ ವ್ಯವಸ್ಥೆ ಮಾಡಿ ಬಳಿಕ ಗ್ರಾಮಗಳಿಗೆ ಜನರನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಸಹ ಮಾಡಲಾಗಿತ್ತು. ಈ ಬಗ್ಗೆ ಗುಳೆ ಹೋದ ಜನರಲ್ಲಿ ವಿಚಾರಿಸಿದಾಗ ಬಂದು ಹೋಗವ ವಾಹನದ ಚಾರ್ಜ್, ಊಟ, ತಿಂಡಿಗಾಗಿ 2,000 ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ, ನಾವು ಮತದಾನ ಮಾಡಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಹೋಟೆಲ್​ನಲ್ಲಿ ಮತದಾರರಿಗೆ ಉಪಾಹಾರ ವ್ಯವಸ್ಥೆ

ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿಗಳಿಗೆ ಊರು ಬಿಟ್ಟವರೇ ಟಾ​ರ್ಗೆಟ್ ..!

Published On - 1:57 pm, Sun, 27 December 20