Google Search 2020 | ಕರ್ನಾಟಕದ ಜನತೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಿದ್ದು ಏನು?

ಪ್ರತಿ ವರ್ಷ ಜನರು ತಿಳದುಕೊಳ್ಳಲು ಬಯಸುತ್ತಿದ್ದ ವಿಷಯಗಳು ವೈವಿಧ್ಯಮಯವಾಗಿರುತ್ತಿದ್ದವು. ಆದರೆ ಈ ಬಾರಿ queries ವಿಭಾಗದಲ್ಲಿ ಕೊರೊನಾ ಸಂಬಂಧಿತ ವಿಷಯಗಳೇ ಸಿಂಹಪಾಲು ಪಡೆದಿವೆ. ಅದನ್ನು ಹೊರತುಪಡಿಸಿದರೆ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೆಚ್ಚು ಜನರು ಹುಡುಕಿದ್ದಾರೆ.

Google Search 2020 | ಕರ್ನಾಟಕದ ಜನತೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಿದ್ದು ಏನು?
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 5:44 PM

ಬೆಂಗಳೂರು: ಹಿಂದೆ ಯಾವುದೇ ಒಂದು ವಿಷಯದ ಬಗ್ಗೆ ಮಾಹಿತಿಯನ್ನು ಪಡೆಯಬೇಕಾದರೆ ಅನೇಕ ಪುಸ್ತಕಗಳನ್ನು ಓದಬೇಕಿತ್ತು, ಗ್ರಂಥಾಲಯಗಳನ್ನು ಹುಡುಕಬೇಕಿತ್ತು, ವಿದ್ವಾಂಸರನ್ನು ಭೇಟಿಯಾಗಬೇಕಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ನಾವು ಇರುವ ಸ್ಥಳದಲ್ಲೇ ಯಾವುದೇ ವಿಷಯವನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು. ಇದಕ್ಕೆ ಕಾರಣ ಅಂತರ್ಜಾಲ ಲೋಕದಲ್ಲಿ ಆದ ಹಲವಾರು ಆವಿಷ್ಕಾರಗಳು.

ಮಾಹಿತಿ ಹುಡುಕಾಟದ ಮೊದಲ ಮೆಟ್ಟಿಲು ಎನಿಸಿದೆ ಗೂಗಲ್. ಗೊಂದಲಗಳನ್ನು ನಿವಾರಣೆ ಮಾಡುವಲ್ಲಿ ಗೂಗಲ್ ಎತ್ತಿದ ಕೈ. ಕಲಿಯುಗದ ಜನರು ತಮ್ಮನ್ನು ತಾವು ನಂಬುವುದಕ್ಕಿಂತ ಹೆಚ್ಚಾಗಿ ಗೂಗಲ್​ ಅನ್ನು ನಂಬುತ್ತಾರೆ. ಅಡುಗೆ ಮಾಡುವುದು ಹೇಗೆ? ಮೇಕಪ್ ಮಾಡಿಕೊಳ್ಳುವುದು ಹೇಗೆ? ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವ ದಾರಿ ಯಾವುದು? ಗಿಡ ನೆಡುವುದು ಹೇಗೆ? ಸೀರೆ ಉಡುವುದು ಹೇಗೆ.. ಈ ರೀತಿಯ ನೂರಾರು ಗೊಂದಲಗಳ ನಿವಾರಕ ಈ ಗೂಗಲ್.

ದಿನದಲ್ಲಿ ಒಂದು ಬಾರಿಯಾದರೂ ಗೂಗಲ್ ಒಪನ್ ಮಾಡಿ ನೋಡದೆ ಇದ್ದರೆ ಸಮಾಧಾನವೇ ಇಲ್ಲ ಎನ್ನುವ ಜನರ ಸಂಖ್ಯೆಯೂ ದೊಡ್ಡದಿದೆ. ಗೂಗಲ್​ ಅನ್ನು ನಂಬಿ ನಡೆಯುವವರ ಪಟ್ಟಿಯಲ್ಲಿ ಕರ್ನಾಟಕವು ಹಿಂದೆ ಉಳಿದಿಲ್ಲ. ಈ ಬಾರಿ ಕರ್ನಾಟಕದ ಜನತೆ ಗೂಗಲ್​ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿರುವ ವಿಷಯ ಯಾವುದು?

ಈ ವರ್ಷ ಕೊರೊನಾ ಕಾರಣದಿಂದಾಗಿಯೋ ಏನೋ ಕ್ವಾರಂಟೈನ್ (Quarantine) ಬಗ್ಗೆಯೇ ಹೆಚ್ಚು ಜನರು ಸರ್ಚ್ ಮಾಡಿದ್ದಾರೆ. ನಂತರದ ಸ್ಥಾನದಲ್ಲಿ ಸೇವಾ ಸಿಂಧು (SEVA SINDHU) ಇದೆ. ಮನೆಯಲ್ಲೇ ಕುಳಿತು ಓದಿನ ವಿಷಯದ ಬಗ್ಗೆ ಕಾಳಜಿ ವಹಿಸಬೇಕಾಗಿರುವ ಈಗಿನ ಪರಿಸ್ಥಿತಿಯಲ್ಲಿ ಕೆಸಿಇಟಿ ಪರೀಕ್ಷೆಯ (KCET 2020  Admission exam) ಬಗ್ಗೆಯೂ ಜನರು ಹೆಚ್ಚು ಸರ್ಚ್​ ಮಾಡಿದ್ದಾರೆ. ಸಿನಿಮಾದ ಬಗ್ಗೆಯೂ ಜನರು ಹೆಚ್ಚು ಗಮನಕೊಟ್ಟಿದ್ದು ವೈಲ್ಡ್ ಕರ್ನಾಟಕ ​​-2019 (Wild Karnataka 2019 film) ಚಿತ್ರವು 4ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿ  ಕರ್ನಾಟಕ ಬಂದ್ (Karnataka Bandh-Topic)​ ಕೂಡ ಗೂಗಲ್ ಸರ್ಚ್​ನಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.

ವೈಲ್ಡ್ ಕರ್ನಾಟಕ ಸಿನಿಮಾದ ಪೋಸ್ಟರ್

ಹೆಚ್ಚು ತಿಳಿದುಕೊಳ್ಳಲು ಬಯಸಿದ್ದು ಕೋವಿಡ್ ಬಗ್ಗೆ ಪ್ರತಿ ವರ್ಷ ಜನರು ತಿಳದುಕೊಳ್ಳಲು ಬಯಸುತ್ತಿದ್ದ ವಿಷಯಗಳು ವೈವಿಧ್ಯಮಯವಾಗಿರುತ್ತಿದ್ದವು. ಆದರೆ ಈ ಬಾರಿ queries ವಿಭಾಗದಲ್ಲಿ ಕೊರೊನಾ ಸಂಬಂಧಿತ ವಿಷಯಗಳೇ ಸಿಂಹಪಾಲು ಪಡೆದಿವೆ. ಅದನ್ನು ಹೊರತುಪಡಿಸಿದರೆ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹೆಚ್ಚು ಜನರು ಹುಡುಕಿದ್ದಾರೆ.

ಕರ್ನಾಟಕ ಕೋವಿಡ್ (karnataka covid), ಕರ್ನಾಟಕ ಕೊರೊನಾ ವೈರಸ್ (karnataka coronavirus), ಕೊರೊನಾ ಇನ್ ಕರ್ನಾಟಕ (corona in karnataka) ಟಾಪ್​-3 query ಪದಗಳಾಗಿವೆ. ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಂಬಂಧಿಸಿದಂತೆ sslc result 2020, sslc result karnataka 2020 ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿವೆ.

ಗೂಗಲ್​ನಲ್ಲಿ ಕರ್ನಾಟಕದ ಜನರು ಹೆಚ್ಚು ಹುಡುಕಿರುವ ಟಾಪಿಕ್​ಗಳು

ಗೂಗಲ್​ಗೆ ಕರ್ನಾಟಕದ ಜನರು ಹೆಚ್ಚು ಈ ವಿಷಯಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಕೊರೊನಾದ ಬಿಸಿ ಗೂಗಲ್​ಗೂ ಕೂಡ ತಟ್ಟಿದ್ದು, ಜನ ಹೆಚ್ಚಾಗಿ ಕೊರೊನಾ ಸೋಂಕು, ಕೊರೊನಾದ ಸದ್ಯದ ಪರಿಸ್ಥಿತಿ ಮತ್ತು ಕೊರೊನಾದ ಹರಡುವಿಕೆಯ ಬಗ್ಗೆ ಸರ್ಚ್​ ಮಾಡಿದ್ದಾರೆ.

ಭಾರತದಲ್ಲಿ ಡಿಜಿಟಲ್​ ಕ್ರಾಂತಿ: ಗೂಗಲ್‌ನಿಂದ 75,000 ಕೋಟಿ ರೂ. ಹೂಡಿಕೆ

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ