ಬ್ಯಾಂಕ್​ಗೆ ವಂಚನೆ: ಬೆಂಗಳೂರಿನ ಕಂಪನಿಯೊಂದರ 105.5 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬ್ಯಾಂಕ್​ಗೆ ವಂಚನೆ ಸಂಬಂಧ ಬೆಂಗಳೂರಿನ ಭಾರತ್ ಇನ್ಫ್ರಾ ಎಕ್ಸ್​ಪೋರ್ಟ್ಸ್​​ ಆ್ಯಂಡ್ ಇಂಪೋರ್ಟ್ಸ್​ ಕಂಪನಿಯ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಬರೋಬ್ಬರಿ 105.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಬ್ಯಾಂಕ್​ಗೆ ವಂಚನೆ: ಬೆಂಗಳೂರಿನ ಕಂಪನಿಯೊಂದರ 105.5 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಇಡಿ (ಸಂಗ್ರಹ ಚಿತ್ರ)
Edited By:

Updated on: Sep 05, 2023 | 9:00 AM

ಬೆಂಗಳೂರು, (ಸೆಪ್ಟೆಂಬರ್ 05): ಬೆಂಗಳೂರಿನ(Bengaluru) ಭಾರತ್ ಇನ್ಫ್ರಾ ಎಕ್ಸ್​ಪೋರ್ಟ್ಸ್​​ ಆ್ಯಂಡ್ ಇಂಪೋರ್ಟ್ಸ್​ ಕಂಪನಿಯ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕ್​ಗೆ ವಂಚನೆ ಸಂಬಂಧ ಕಂಪನಿಯ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಬರೋಬ್ಬರಿ 105.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿದೆ. ಬೆಂಗಳೂರು ನಗರದಲ್ಲಿರುವ ರೆಸಿಡೆನ್ಷಿಯಲ್ ನಿವೇಶನಗಳು, ಕಮರ್ಷಿಯಲ್ ಪ್ರಾಪರ್ಟಿ, ಫಾರ್ಮ್​ಹೌಸ್ ಸೇರಿದಂತೆ 104.90 ಕೋಟಿ ಮೌಲ್ಯದ ಆಸ್ತಿ ಹಾಗೂ 14.5 ಲಕ್ಷ ನಗದು ಜಪ್ತಿ ಮಾಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾಗೆ 113.38 ಕೋಟಿ ರೂಪಾಯಿ ಸಾಲ ಉಳಿಸಿಕೊಂಡ ಆರೋಪ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ನೀಡಿದ ಆರೋಪ ಭಾರತ್ ಇನ್ಫ್ರಾ ಎಕ್ಸ್​ಪೋರ್ಟ್ಸ್​​ ಆ್ಯಂಡ್ ಇಂಪೋರ್ಟ್ಸ್​ ಕಂಪನಿ ಮೇಲೆ ಕೇಳಿಬಂದಿತ್ತು. ಈ ಸಂಬಂಧ ಕಂಪನಿ, ಪ್ರಮೋಟರ್ಸ್ ಮತ್ತು ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಈ ಪ್ರಕರಣದಲ್ಲಿ ಪ್ರವೇಶಿಸಿದ್ದ ಇಡಿ, ಕಳೆದ ಜೂನ್​ನಲ್ಲಿ ಕಂಪನಿಗೆ ಸೇರಿದ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಇದೀಗ ಕಂಪನಿಗೆ ಸೇರಿದ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us