ಬಸವಕಲ್ಯಾಣ ಉಪ ಚುನಾವಣೆ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ; ಅಸಾದುದ್ದೀನ್ ಒವೈಸಿ

|

Updated on: Apr 06, 2021 | 10:46 PM

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳ ಹೆಚ್ಚಾಗಲಿ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಜಗಳ ಹೆಚ್ಚಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಒವೈಸಿ ಹೇಳಿದರು.

ಬಸವಕಲ್ಯಾಣ ಉಪ ಚುನಾವಣೆ: ಮುಂದಿನ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ; ಅಸಾದುದ್ದೀನ್ ಒವೈಸಿ
ಅಸಾದುದ್ದೀನ್​ ಓವೈಸಿ
Follow us on

ಬೀದರ್: ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಿಂದಲೂ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ (All India Majlis-e-Ittehadul Muslimeen – AIAIM) ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ಸಂಸದ ಅಸಾದುದ್ದೀನ್ ಒವೈಸಿ ಘೋಷಿಸಿದೆ. ಬಸವಕಲ್ಯಾಣ ಕ್ಷೇತ್ರದ ಎಐಎಐಎಂ ಅಭ್ಯರ್ಥಿ ಬಾಬಾ ಚೌಧರಿ ಪರ ಚೌಧರಿ ಕಾಂಪ್ಲೆಕ್ಸ್‌ನಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಒವೈಸಿ, ಕರ್ನಾಟಕ ರಾಜಕಾರಣದಲ್ಲಿಯೂ ಎಐಎಐಎಂ ಪಕ್ಷದ ಹೆಜ್ಜೆಗುರುತು ಮೂಡುವಂತೆ ಮಾಡಲು ಉತ್ಸುಕತೆ ತೋರಿಸಿದರು.

ಜೆಡಿಎಸ್‌ನಲ್ಲಿ ಒಂದೊಂದೇ ವಿಕೆಟ್‌ ಉರುಳುತ್ತಿದೆ. ಜೆಡಿಎಸ್ ಪಕ್ಷ ತನ್ನಿಂದ ತಾನೇ ಉರುಳಿ ಹೋಗುತ್ತೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಜಗಳ ಹೆಚ್ಚಾಗಲಿ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಜಗಳ ಹೆಚ್ಚಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಇದೇ ಸ್ಥಿತಿ ಮುಂದುವರಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಹೆಸರಿನಲ್ಲಿದಂತೆ ಆಗುತ್ತವೆ. ಬಸವಕಲ್ಯಾಣ ಇಬ್ಭಾಗ ಮಾಡುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳುತ್ತಾರೆ. ನನಗೆ ಬಸವಕಲ್ಯಾಣ ಇಬ್ಭಾಗ ಮಾಡುವ ಅಗತ್ಯವಿಲ್ಲ ಎಂದು ಒವೈಸಿ ಹೇಳಿದರು.

ಏಪ್ರಿಲ್‌ 17ರಂದು ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಕದನಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಶರಣು ಸಲಗಾರ, ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಶಾಸಕ ಬಿ.ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸಯ್ಯದ್ ಯೆಸ್ರಬ್ ಅಲಿ ಖಾದ್ರಿ ಸ್ಪರ್ಧಿಸಿದ್ದಾರೆ.

ಘಟಾನುಘಟಿ ನಾಯಕರು ಅಖಾಡಕ್ಕಿಳಿದು ತಮ್ಮ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳು ಬಸವಕಲ್ಯಾಣ ಕ್ಷೇತ್ರದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿವೆ. ಮುಸ್ಲಿಂ ಸಮುದಾಯದಲ್ಲಿ ದಿನದಿಂದ ಓವೈಸಿ ಅವರ ಎಐಎಐಎಂ ಜನಪ್ರಿಯವಾಗುತ್ತಿದೆ. ಈ ಬಾರಿ ಬಸವಕಲ್ಯಾಣದಲ್ಲಿ ಎಐಎಐಎಂ ಅಭ್ಯರ್ಥಿ ಎಷ್ಟುಮತ ಪಡೆಯುತ್ತಾರೆ ಎಂಬುದರ ಆಧಾರದ ಮೇಲೆ ರಾಜ್ಯದ ಜಾತ್ಯತೀತ ರಾಜಕಾರಣದ ಮುಂದಿನ ನಡೆಗಳು ಪ್ರಭಾವಿತಗೊಳ್ಳುವ ಸಾಧ್ಯತೆಯಿವೆ.

(Basavakalyan by Election Asaduddin Owaisi of AIMIM speech)

ಇದನ್ನೂ ಓದಿ: ಬಸವಕಲ್ಯಾಣ ಬಿಜೆಪಿ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ; 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ

ಇದನ್ನೂ ಓದಿ: ಬಸವಕಲ್ಯಾಣ ಬೈ ಎಲೆಕ್ಷನ್​​: ಜೆಡಿಎಸ್​ ಅಭ್ಯರ್ಥಿ ಘೋಷಣೆ; ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದು ತೋರಿಸುತ್ತೇವೆ-HDK

Published On - 10:07 pm, Tue, 6 April 21