ಪಠ್ಯಪುಸ್ತಕದಲ್ಲಿ ಬಸವಣ್ಣನವರ ನೈಜ ಚರಿತ್ರೆ ಅಳವಡಿಕೆ: ಸಿಎಂಗೆ ಲಿಂಗಾಯತ ಒಕ್ಕೂಟದಿಂದ ಕೃತಜ್ಞತೆ ಪತ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2024 | 10:57 PM

ಈಗಿನ 9ನೇ ತರಗತಿಯ ಸಮಾಜ ವಿಜ್ಞಾನ-1 ಪರಿಷ್ಕೃತ ಪಠ್ಯದಲ್ಲಿ ಪಠ್ಯ ಪರಿಷ್ಕರಣ ಸಮಿತಿಯು ಬಸವಣ್ಣನವರನ್ನು 'ಜಾಗತಿಕ ಮಟ್ಟದ ಚಿಂತಕ' ಎಂದು ಬಿಂಬಿಸಿದ್ದಾರೆ. ಬಸವಣ್ಣನವರ ಘನ ಬದುಕಿಗೆ ಹಾಗೂ ಇತಿಹಾಸಕ್ಕೆ ಚ್ಯುತಿ ಬಾರದಂತೆ ಎಳೆ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿಯೇ ಬರೆದಿದ್ದಾರೆ. ಇದೊಂದು ಚರಿತ್ರಾರ್ಹ ಬೆಳವಣಿಗೆ ಎಂದು ಸಿದ್ದರಾಮಯ್ಯಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಕೃತಜ್ಞತೆ ಸಲ್ಲಿಸಲಾಗಿದೆ.

ಪಠ್ಯಪುಸ್ತಕದಲ್ಲಿ ಬಸವಣ್ಣನವರ ನೈಜ ಚರಿತ್ರೆ ಅಳವಡಿಕೆ: ಸಿಎಂಗೆ ಲಿಂಗಾಯತ ಒಕ್ಕೂಟದಿಂದ ಕೃತಜ್ಞತೆ ಪತ್ರ
ಪಠ್ಯಪುಸ್ತಕದಲ್ಲಿ ಬಸವಣ್ಣನವರ ನೈಜ ಚರಿತ್ರೆ ಅಳವಡಿಕೆ: ಸಿಎಂಗೆ ಲಿಂಗಾಯತ ಒಕ್ಕೂಟದಿಂದ ಕೃತಜ್ಞತೆ ಪತ್ರ
Follow us on

ಬೆಂಗಳೂರು, ಜುಲೈ 08: 9ನೇ ತರಗತಿಯ ಸಮಾಜ ವಿಜ್ಞಾನ-1 ಪರಿಷ್ಕೃತ ಶಾಲಾ ಪಠ್ಯಪುಸ್ತಕದಲ್ಲಿ ಬಸವಣ್ಣನವರ (Basavanna) ನೈಜ ಚರಿತ್ರೆ ಅಳವಡಿಸಿದ ಹಿನ್ನೆಲೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಲಾಗಿದೆ. ಬಸವಣ್ಣನವರನ್ನು ಜಾಗತಿಕ ಮಟ್ಟದ ಚಿಂತಕ ಎಂದು ಬಿಂಬಿಸಿದ್ದಾರೆ. ಬಸವಣ್ಣನವರ ಘನ ಬದುಕಿಗೆ ಹಾಗೂ ಇತಿಹಾಸಕ್ಕೆ ಚ್ಯುತಿ ಬಾರದಂತೆ ಎಳೆ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಪುಸ್ತಕದಲ್ಲಿ ಬರೆದಿದ್ದಾರೆ ಇದೊಂದು ಚರಿತ್ರಾರ್ಹ ಬೆಳವಣಿಗೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಸವಣ್ಣನವರು ನಿಜಾರ್ಥದಲ್ಲಿ ಜಾತ್ಯತೀತ ನಾಯಕರೆಂಬುದು ಪಠ್ಯ ಪರಿಷ್ಕರಣ ತಜ್ಞರು ಇತಿಹಾಸ, ಸಂವಿಧಾನ ಪ್ರಜ್ಞೆ ಜನಪರ ಕಾಳಜಿಗೆ ಸಾಕ್ಷಿ. ಬಸವಣ್ಣನವರ ಈ ಪಠ್ಯ ಅಳವಡಿಸಿದ ಸಿಎಂ ಸಿದ್ದರಾಮಯ್ಯನವರು ಮತ್ತು ಪಠ್ಯ ಪರಿಷ್ಕರಣ ಸಮಿತಿಗೆ ಕೃತಜ್ಞತೆಗಳು ಸಲ್ಲಿಸಲಾಗಿದೆ.

ಇದನ್ನೂ ಓದಿ: 9ನೇ ತರಗತಿಯ ಬಸವಣ್ಣನ ಪಠ್ಯ ಮತ್ತೆ ಪರಿಷ್ಕರಣೆ: ಸಿಎಂಗೆ ಪತ್ರ ಬರೆದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

9ನೇ ತರಗತಿಯ ಸಮಾಜ ವಿಜ್ಞಾನ-1 ಪರಿಷ್ಕೃತ ಶಾಲಾ ಪಠ್ಯಪುಸ್ತಕದಲ್ಲಿ ಬಸವಣ್ಣನವ ಪರಿಚಯದಲ್ಲಿ ಕೆಲ ತಪ್ಪು ಮಾಹಿತಿಗಳು ನೀಡಿಲಾಗಿತ್ತು. ಹೀಗಾಗಿ ಇತ್ತೀಚೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೇ ಅದನ್ನು ಸರಿಪಡಿಸುವಂತೆ ಸಿಎಂ ಸಿದ್ದರಾಮಯ್ಯಗೆ ಸಂಸ್ಥೆ  ಪರವಾಗಿ ಡಾ. ಮಹಾಂತಲಿಂಗ ಶಿವಾರ್ಚಾರ್ಯ ಸ್ವಾಮೀಜಿಗಳು ಕೂಡ ಪತ್ರ ಬರೆದಿದ್ದರು.

ಇದನ್ನೂ ಓದಿ: ಸದ್ದಿಲ್ಲದೇ ಶಾಲಾ ಪಠ್ಯ ಪುಸ್ತಕ ಪರಿಷ್ಕರಿಸಿದ ಶಿಕ್ಷಣ ಇಲಾಖೆ, ಏನೆಲ್ಲಾ ಬದಲಾವಣೆ? ಇಲ್ಲಿದೆ ವಿವರ

ಸದ್ಯ ಬಸವಣ್ಣನವರ ನೈಜ ಚರಿತ್ರೆಯನ್ನು 9ನೇ ತರಗತಿಯ ಸಮಾಜ ವಿಜ್ಞಾನ-1 ಪರಿಷ್ಕೃತ ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಹೀಗಾಗಿ ಸಿದ್ದರಾಮಯ್ಯಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸಿಎಂಗೆ ಕೃತಜ್ಞತೆ ಸಲ್ಲಿಸಲಾಗಿದೆ.

ಪತ್ರದಲ್ಲೇನಿದೆ?

ವಿಶ್ವಗುರು ಬಸವಣ್ಣನವರು ವ್ಯಕ್ತಿಯಲ್ಲ, ಸಾಂಸ್ಕೃತಿಕ ಶಕ್ತಿ. ಜಾತ್ಯತೀತ ನಿಲುವಿನ ಸಮಸಮಾಜ ನಿರ್ಮಾಪಕರು ಹಾಗೂ ವಿಶ್ವಮಾನವ ಪ್ರಜ್ಞೆಯ ಪ್ರತೀಕವಾದ ಜಾಗತಿಕ ನಾಯಕ ಎಂಬುದನ್ನು ಮನಗಂಡ ತಾವು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಮಾನ್ಯತೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದವರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸುವ ಮೂಲಕ ಸಮಸಮಾಜ ನಿರ್ಮಾಣದ ಬದ್ದತೆ ಮೆರೆದವರು. ಸದಾ ಹೊಸತನ್ನು ನುಡಿಯುವುದು ಮತ್ತು ನುಡಿದಂತೆ ನಡೆಯುವ ತಾವು. ತಮ್ಮ ಸರ್ಕಾರ ಬಸವತತ್ವವನ್ನು ನಿಜಾಚರಣೆಯಲ್ಲಿ ತಂದವರು.

ವಿಶೇಷವಾಗಿ ಈಗಿನ 9ನೇ ತರಗತಿಯ ಸಮಾಜ ವಿಜ್ಞಾನ-1 ಪರಿಷ್ಕೃತ ಪಠ್ಯದಲ್ಲಿ ಪಠ್ಯ ಪರಿಷ್ಕರಣ ಸಮಿತಿಯು ಬಸವಣ್ಣನವರನ್ನು ‘ಜಾಗತಿಕ ಮಟ್ಟದ ಚಿಂತಕ’ ಎಂದು ಬಿಂಬಿಸಿದ್ದಾರೆ. ಬಸವಣ್ಣನವರ ಘನ ಬದುಕಿಗೆ ಹಾಗೂ ಇತಿಹಾಸಕ್ಕೆ ಚ್ಯುತಿ ಬಾರದಂತೆ ಎಳೆ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿಯೇ ಬರೆದಿದ್ದಾರೆ. ಇದೊಂದು ಚರಿತ್ರಾರ್ಹ ಬೆಳವಣಿಗೆ. ಬಸವಣ್ಣನವರು ನಿಜಾರ್ಥದಲ್ಲಿ ಜಾತ್ಯಾತೀತ ನಾಯಕರೆಂಬುದು ಪಠ್ಯ ಪರಿಷ್ಕರಣ ತಜ್ಞರ ಇತಿಹಾಸ ಮತ್ತು ಸಂವಿಧಾನ ಪ್ರಜ್ಞೆ ಜನಪರ ಕಾಳಜಿಗೆ ಸಾಕ್ಷಿಯಾಗಿದೆ. ಬಸವಣ್ಣನವರ ಈ ಪಠ್ಯ ಭಾಗ ಅಳವಡಿಸಿದ ತಮಗೆ ಮತ್ತು ಪಠ್ಯ ಪರಿಷ್ಕರಣ ಸಮಿತಿಗೆ ಕೃತಜ್ಞತೆ ಸಲ್ಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.