AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9ನೇ ತರಗತಿಯ ಬಸವಣ್ಣನ ಪಠ್ಯ ಮತ್ತೆ ಪರಿಷ್ಕರಣೆ: ಸಿಎಂಗೆ ಪತ್ರ ಬರೆದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

2016ರ ಬಳಿಕ ಮೂರನೇ ಬಾರಿಗೆ 9ನೇ ತರಗತಿ ಸಮಾಜವಿಜ್ಞಾನ ಪಠ್ಯದಲ್ಲಿ ಬಸವಣ್ಣನ ಪರಿಚಯವನ್ನು ಮತ್ತೆ ಪರಿಷ್ಕರಣೆ ಆಗುತ್ತಿದೆ. ಈ ಪಠ್ಯ ಪರಿಷ್ಕರಣೆಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೇಸರ ವ್ಯಕ್ತಪಡಿಸಿದೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯಗೆ ಸಂಸ್ಥೆಯ ಪರವಾಗಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದಿದ್ದಾರೆ.

9ನೇ ತರಗತಿಯ ಬಸವಣ್ಣನ ಪಠ್ಯ ಮತ್ತೆ ಪರಿಷ್ಕರಣೆ: ಸಿಎಂಗೆ ಪತ್ರ ಬರೆದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
9ನೇ ತರಗತಿಯ ಬಸವಣ್ಣನ ಪಠ್ಯ ಮತ್ತೆ ಪರಿಷ್ಕರಣೆ: ಸಿಎಂಗೆ ಪತ್ರ ಬರೆದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
Anil Kalkere
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 29, 2024 | 9:17 PM

Share

ಬೆಂಗಳೂರು, ಜೂನ್​ 29: 2016ರ ಬಳಿಕ 9ನೇ ತರಗತಿ ಸಮಾಜವಿಜ್ಞಾನ ಪಠ್ಯದಲ್ಲಿ ಬಸವಣ್ಣನ (Basavanna) ಪರಿಚಯ ಮೂರನೇ ಬಾರಿಗೆ ಪಠ್ಯ ಪರಿಷ್ಕರಣೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯಗೆ (Siddaramaiah) ಸಂಸ್ಥೆಯ ಪರವಾಗಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪತ್ರ ಬರೆದಿದ್ದಾರೆ.

ಪಠ್ಯ ಪರಿಷ್ಕರಣೆ ಮಾಡುವಾಗ ವೀರಶೈವ ಪದವನ್ನು ಕೈಬಿಡಲಾಗಿದೆ. ಇದು ಸರಿಯಲ್ಲ ಎಂದು ವಚನದ ಮೂಲಕ ಸಂಸ್ಥೆ ವಿವರಣೆ ನೀಡಿದೆ. ಬಸವಣ್ಣ ಅರಿವನ್ನೇ ಗುರುವಾಗಿಸಿಕೊಂಡಿದ್ದರು. ಪಠ್ಯದ ದೋಷ ಸರಿಪಡಿಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ  ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಸದ್ದಿಲ್ಲದೇ ಶಾಲಾ ಪಠ್ಯ ಪುಸ್ತಕ ಪರಿಷ್ಕರಿಸಿದ ಶಿಕ್ಷಣ ಇಲಾಖೆ, ಏನೆಲ್ಲಾ ಬದಲಾವಣೆ? ಇಲ್ಲಿದೆ ವಿವರ

ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ‘ವೀರಶೈವ’ ಪದವನ್ನು ತಗೆದು ಹಾಕಲಾಗಿದೆ. ಇದು ಸರಿಯಾದ ಪರಿಷ್ಕರಣೆಯಲ್ಲ. ಏಕೆಂದರೆ ಕರ್ನಾಟಕ ಸರಕಾರ ಪ್ರಸಿದ್ಧ ಸಂಶೋಧಕರಾಗಿದ್ದ ಡಾ. ಎಂ. ಎಂ. ಕಲಬುರಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟಿಸಿರುವ ಸಮಗ್ರ ವಚನ ಸಂಪುಟಗಳಲ್ಲಿ ಪ್ರಕಟವಾದ ವಚನಗಳನ್ನು ಒಮ್ಮೆ ಕುಲಂಕುಶವಾಗಿ ಪರಿಶೀಲಿಸಿ ನೋಡಿದಾಗ ಬಸಣ್ಣನವರಾದಿಯಾಗಿ 30ಜನ ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ‘ವೀರಶೈವ’ ಪದವನ್ನು ಬಳಸಿದ್ದಾರೆ. ಕೇವಲ 8 ಜನ ಶಿವಶರಣರು ತಮ್ಮ 10 ವಚನಗಳಲ್ಲಿ ಕೇವಲ 12 ಕಡೆ ಮಾತ್ರ ‘ಲಿಂಗಾಯತ’ ಪದವನ್ನು ಬಳಿಸಿದ್ದಾರೆ. ಆದರೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿಯೂ ‘ಲಿಂಗಾಯತ’ ಪದ ಬಳಸಿಲ್ಲ.

ಈ ವರ್ಷ ಪರಿಷ್ಕೃತಗೊಂಡಿರುವ ಪುಸ್ತಕದಲ್ಲಿ ಬಸವಣ್ಣನವರು ‘ಅರಿವನ್ನೇ ಗುರು’ವಾಗಿಸಿಕೊಂಡಿದ್ದರು ಬಸವಣ್ಣನವರು ಇಷ್ಟಲಿಂಗದ ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು ಎಂದು ಪ್ರಕಟಿಸಿದ್ದಾರೆ. ಇದು ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಬಸವಣ್ಣನವರು ತಮ್ಮ ವಚನಗಳಲ್ಲಿ ಪ್ರತಿಯೊಬ್ಬರಲ್ಲಿರುವ ಅಂತರಂಗದಲ್ಲಿರುವ ಪರಮಾತ್ಮನ ಅರಿವೇ ಗುರುವಾಗಬೇಕು. ಅರಿವು ಪ್ರತಿಯೊಬ್ಬರ ಬದುಕಿಗೆ ನಿತ್ಯ ದಾರಿದೀಪವಾಗಬೇಕೆಂದು ಪ್ರತಿಪಾಸಿದ್ದಾರೆಯೆ ಹೊರತು ತಮಗೆ ಗುರುವಿಲ್ಲ ತಮಗೆ ತಮ್ಮ ಅರಿವೇ ಗುರು ಎಂದು ಎಲ್ಲಿಯೂ ಯಾವ ಸಂದರ್ಭದಲ್ಲಿಯೂ ಹೇಳಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಸವಣ್ಣ ಕುರಿತ ಪಠ್ಯ 10 ದಿನಗಳಲ್ಲಿ ಬದಲಿಸಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಾಕೀತು

ಅವರು ಅವರಲ್ಲಿರುವ ಗುರುವಿನ ಬಗೆಗಿನ ಗೌರವವನ್ನು ತಮ್ಮ ಅನೇಕ ವಚನಗಳಲ್ಲಿ ನಿರೂಪಿಸಿದ್ದಾರೆ ಮತ್ತು ತಾವು ಗುರುವಿನಿಂದ ಇಷ್ಟಲಿಂಗವನ್ನು ಪಡೆದಿದ್ದೇನೆ ಎಂದು ಅನೇಕ ವಚನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ.

ಆದ್ದರಿಂದ ಕರ್ನಾಟಕ ಶಿಕ್ಷಣ ಇಲಾಖೆಯ 2024ರ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ಈ ರೀತಿ ಅವೈಜ್ಞಾನಿಕ ಮತ್ತು ಇತಿಹಾಸಕ್ಕೆ ಮತ್ತು ಸಾವಿರಾರು ವರುಷಗಳಿಂದ ನಡೆದುಕೊಂಡು ಬರುತ್ತಿದೆ. ಇದು ಒಂದು ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ನಿಜಜ್ಞಾನಪಿಪಾಸುಗಳಾದ ವಿದ್ಯಾರ್ಥಿಗಳ ತಲೆಯಲ್ಲಿ ತುಂಬದೇ ನೈಜ ವಿಚಾರಗಳನ್ನು ನೀಡುವ ಕೆಲಸ ಮಾಡಬೇಕೆಂದು ನಿರ್ದೇಶಿಸುವಂತೆ ಸಿಎಂ ಸಿದ್ದರಾಮಯ್ಯಗೆ ವಿನಂತಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.