ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ಋಣಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಹಿಂದೂ ಧರ್ಮದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಆರ್ಥಿಕ ಸ್ಥಿತಿಯ ದೇವತೆಯಾದ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ವಾಸ್ತು ನಿಯಮಗಳನ್ನು ಅನುಸರಿಸುವುದು ಮುಖ್ಯ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಶುಕ್ರವಾರ ಮತ್ತು ಮಂಗಳವಾರದಂದು ಪೊರಕೆ ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಮನೆಯು ಯಾವಾಗಲೂ ಲಕ್ಷ್ಮಿ ದೇವಿಯ ಆಶೀರ್ವಾದದಿಂದ ಕೂಡಿರುತ್ತದೆ. ಆ ಮನೆಯು ಅವರನ್ನು ಅದೃಷ್ಟವಂತರನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಮನೆಯಲ್ಲಿ ಪೊರಕೆ ವಿಚಾರದಲ್ಲಿ ಈ ನಿಯಮಗಳನ್ನು ಪಾಲಿಸದಿದ್ದರೆ ಆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ.
ಪಂಚಕದಲ್ಲಿ ( ಪಂಚಕ ದಿನಗಳಲ್ಲಿ) ಪೊರಕೆ ಕೊಳ್ಳುವುದು ಅಶುಭ. ಹಿಂದೂ ಧರ್ಮದಲ್ಲಿ, ಪಂಚಕ ಅವಧಿಯನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬೇಡಿ. ಅದು ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಆ ದಿನಗಳಲ್ಲಿ ಹೊಸ ಪೊರಕೆಯನ್ನು ಖರೀದಿಸುವುದರಿಂದ ಸಂತೋಷ ಮತ್ತು ಶಾಂತಿ ಕಳೆದುಹೋಗುತ್ತದೆ. ಶನಿವಾರದಂದು ಪೊರಕೆಯನ್ನು ಶುಕ್ಲ ಪಕ್ಷದಲ್ಲಿ ಮಾತ್ರ ಖರೀದಿಸಬೇಕು. ಶುಕ್ಲ ಪಕ್ಷದಲ್ಲಿ ಹೊಸ ಪೊರಕೆಯನ್ನು ಎಂದಿಗೂ ಖರೀದಿಸಬೇಡಿ. ಇದು ದುರಾದೃಷ್ಟದ ಸಂಕೇತವಾಗಿದೆ. (ಪಂಚಕ್ ಎಂದರೆ ಐದರ ಗುಂಪು, ಅಂದರೆ ಪಂಚ ಸಮೂಹ. ಜ್ಯೋತಿಷ್ಯಶಾಸ್ತ್ರದಲ್ಲಿ, ಪಂಚಕ ಯೋಗ ಅಥವಾ ಕಾಲವು ಹಿಂದೂ ಕ್ಯಾಲೆಂಡರ್‌ನ ಪ್ರತಿ ತಿಂಗಳು ಸಂಭವಿಸುವ ಐದು ದಿನಗಳ ಅವಧಿಯಾಗಿದೆ. ಈ ಕಾಲ ಅಥವಾ ಅವಧಿಯಲ್ಲಿ, ಚಂದ್ರನು ಕುಂಭ ರಾಶಿಯಿಂದ ಮೀನಕ್ಕೆ ಸಾಗುತ್ತಾನೆ ಮತ್ತು ಸರಿಸುಮಾರು 5 ದಿನಗಳವರೆಗೆ ಮುಂದುವರಿಯುತ್ತಾನೆ)
ವಾರದ ಮೊದಲ ದಿನ ಅಂದರೆ ಸೋಮವಾರ ಕೂಡ ಪೊರಕೆ ಕೊಳ್ಳುವುದು ಅತ್ಯಗತ್ಯ ತಪ್ಪು. ವಾಸ್ತು ಶಾಸ್ತ್ರದ ಪ್ರಕಾರ ಈ ದಿನ ಪೊರಕೆ ಕೊಳ್ಳುವುದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ನೀವು ಸಾಲದ ಹೊರೆಯನ್ನು ಸಹ ಹೊರಬೇಕಾಗಬಹುದು. ಮೇಲಾಗಿ ಹಬ್ಬ ಹರಿದಿನಗಳು, ಮನೆಯಲ್ಲಿ ಯಾರದೇ ಹುಟ್ಟುಹಬ್ಬ, ರೋಹಿಣಿ ನಕ್ಷತ್ರ, ಹಸ್ತಾ ನಕ್ಷತ್ರ, ಪುಷ್ಯಮಿ, ಉತ್ತರಾಭಾದ್ರ, ಅನುರಾಧಾ ನಕ್ಷತ್ರಗಳಂದು ಪೊರಕೆ ಕೊಳ್ಳಬಾರದು ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಹಾನಿಗೊಳಗಾದ ಪೊರಕೆಯನ್ನು ಸೋಮವಾರ, ಬುಧವಾರ, ಗುರುವಾರ ಮತ್ತು ಭಾನುವಾರದಂದು ಮಾತ್ರ ಎಸೆಯಬೇಕು. ಮಂಗಳವಾರ, ಶುಕ್ರವಾರ ಮತ್ತು ಶನಿವಾರದಂದು ಪೊರಕೆ ಎಸೆಯುವುದು ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ
ವಾಸ್ತು ಪಂಡಿತರ ಪ್ರಕಾರ, ಹಣವನ್ನು ಬಚ್ಚಿಟ್ಟಂತೆ ಮನೆಯಲ್ಲಿ ಪೊರಕೆಯನ್ನು ಮರೆಮಾಡಬೇಕು ಎಂದು ಹೇಳಲಾಗುತ್ತದೆ. ಪೊರಕೆಯನ್ನು ತೆರೆದಿಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಬೇರೆಯವರ ಗಮನಕ್ಕೆ ಬಾರದಂತೆ, ಮನೆಯಲ್ಲಿ ಪೊರಕೆ ಇಡಬೇಕು. ಪೊರಕೆಯನ್ನು ತೆರೆದ ಸ್ಥಳದಲ್ಲಿಟ್ಟರೆ, ಮನೆಯಲ್ಲಿನ ಧನಾತ್ಮಕ ಶಕ್ತಿಯನ್ನು ತೆಗೆದುಹಾಕಿದಂತಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)