ವಿಜಯಪುರ: ನಮ್ಮ ಪಕ್ಷದ ಸಂಘಟನೆಯನ್ನಷ್ಟೇ ನಾವು ನೋಡುವುದು. ನಾವು ಇನ್ನೊಂದು ಪಕ್ಷವನ್ನು ಮುಗಿಸಲ್ಲ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿಕೆ ನೀಡಿದ್ದಾರೆ. ಬಿಜೆಪಿ ಹಣ ಹಂಚುತ್ತಿದೆ ಎಂದು ಜಮೀರ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಲ್ಪನೆ ವಿಪರೀತ, ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದ್ದಾರೆ. ವಿಧಾನಸೌಧಕ್ಕೆ ಬೀಗಹಾಕಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಆ ತರ ಏನಿಲ್ಲ. ನಮ್ಮ ಸಚಿವರು ಹೋಗಿ ಬಂದು ಮಾಡುತ್ತಿದ್ದಾರೆ. ಯಾವುದೇ ಕೆಲಸಗಳು ನಿಂತಿಲ್ಲ. ಎಲ್ಲ ಕೆಲಸಗಳು ನಡೆಯುತ್ತಿವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ನಿನ್ನೆ 13 ಸಭೆಗಳನ್ನು ಮಾಡಿದ್ದಾರೆ ಅಂತ ವಿಜಯಪುರದಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Lakshman Savadi) ತಿಳಿಸಿದರು. ಇದೇ ವೇಳೆ ಶಾಸಕ ಜಮೀರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮ್ಮ ಹಳೆಯ ನೆನಪು ಮಾಡಿಕೊಂಡು ಹೇಳುತ್ತಾರೆ. ಜಮೀರ್ ಮೊದಲಿನಿಂದ ಅದೇ ಕರಾಮತ್ತಿನಲ್ಲಿ ಬಂದಿದ್ದಾರೆ ಎಂದು ಹೇಳಿದರು.
ವಿಧಾನಸೌಧಕ್ಕೆ ಬೀಗಹಾಕಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಮಾತನಾಡಿದ ಲಕ್ಷ್ಮಣ ಸವದಿ, ಅವರ ಸರ್ಕಾರ ಇದ್ದಾಗ ಹಾಗೆ ಮಾಡಿರಬೇಕು. ಮೂರ್ನಾಲ್ಕು ಜನ ಸಚಿವರು ಮಾತ್ರ ಇದ್ದಾರೆ. ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಚಿವರುಗಳು ಬಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
‘ಶಿವಾಜಿ ಸುರತ್ಕಲ್ 2’ ಚಿತ್ರದಲ್ಲಿ ಮೇಘನಾ ಗಾಂವ್ಕರ್ಗೆ ವಿಶೇಷ ಪಾತ್ರ; ರಮೇಶ್ ಅರವಿಂದ್ ಜತೆ ನಟಿಸುವ ಚಾನ್ಸ್
ಸ್ಮಾರ್ಟ್ ಸಿಟಿ ಯೋಜನೆ ಹುಬ್ಬಳ್ಳಿಗಷ್ಟೇ ಸೀಮಿತ ಆರೋಪ; ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನಿರ್ಮಿಸಲು ಆಗ್ರಹ