ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಂತಲ್ಲೇ ಮೈ ನಡುಗುವಂಥಾ ಭೀಕರ ಹತ್ಯೆ ನಡೆದಿದೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಬರ್ಬರ ಹತ್ಯೆ ಹಿಂದಿನ ಒಂದೊಂದೇ ಸೀಕ್ರೆಟ್ ರಿವೀಲ್ ಆಗ್ತಿದೆ. ಒಂದೇ ಏಟಿಗೆ ನೆಲಕ್ಕೆ ಬಿದ್ದವಳ ಮೇಲೆ 17 ಬಾರಿ ಚುಚ್ಚಿ ಚುಚ್ಚಿ ಸಾಯಿಸಿರೋದ್ಯಾಕೆ ಅನ್ನೋ ಒಂದೇ ಪ್ರಶ್ನೆಗೆ ಹತ್ತಾರು ಉತ್ತರಗಳು ಆಚೆ ಬರ್ತಿವೆ. ರಾಜಕೀಯ ದ್ವೇಷ, ಕುಟುಂಬದ ಕಚ್ಚಾಟ, ಹಣದ ವ್ಯವಹಾರ.. ಹೀಗೆ ಹಲವು ಕಾರಣಗಳು ವ್ಯಕ್ತವಾಗುತ್ತಿವೆ.
ಸದ್ಯ ಕಾಟನ್ ಪೇಟೆ ಪೊಲೀಸರು ಕದಿರೇಶ್ ಕುಟುಂಬದವರ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಂಧಿಸಲಾದ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಯಲ್ಲಿ ಕುಟುಂಬಸ್ಥರ ಕೈವಾಡ ಇರೊ ಶಂಕೆ ವ್ಯಕ್ತವಾಗಿದೆ. ಎಲ್ಲಾ ಆಯಾಮದಲ್ಲಿ ತನಿಖೆ ಮುಂದುವರೆದಿದೆ.
ರೇಖಾ ವಿರುದ್ಧ ಪೀಟರ್ನ ಛೂ ಬಿಟ್ಟು ಮರ್ಡರ್ ಸ್ಕೆಚ್
ಅಂದಹಾಗೆ ಚುನಾವಣಾ ವಿಚಾರವಾಗಿ ರೇಖಾ ಮೇಲೆ ಹಗೆ ಸಾಧಿಸ್ತಿದ್ದ ಮಾಲಾ ಆ್ಯಂಡ್ ಫ್ಯಾಮಿಲಿ, ಮುಂದಿನ ಚುನಾವಣೆ ಅಷ್ಟರಲ್ಲಿ ಒಂದ್ ಗತಿ ಕಾಣಿಸ್ಬೇಕು ಅಂತಾ ದಿನ ಲೆಕ್ಕಾ ಹಾಕ್ತಾ ಕೂತಿದ್ರು. ಆದ್ರೆ ಪೀಟರ್ ಇರೋವರೆಗೂ ನಮ್ ಕೆಲ್ಸ ಆಗಲ್ಲ ಅಂತಾ ತಲೆ ತಲೆ ಚಚ್ಚಿಕೊಳ್ತಿದ್ರು. ಆಗ ಭರ್ಜರಿ ಪ್ಲ್ಯಾನ್ ಮಾಡಿದ, ಕದಿರೇಶ್ ಸಹೋದರಿ ಮಾಲಾ ದಾಳ ಉರುಳಿಸಿದ್ದಾರಂತೆ. ಆಗ ಸಿಕ್ಕವನೇ ಈ ಪೀಟರ್.. ಈ ಫ್ಯಾಮಿಲಿ ರಾಜಕಾರಣಿಗಳು ನಂಬಿಕಸ್ಥ ಪೀಟರ್‌ನನ್ನೇ ರೇಖಾ ವಿರುದ್ಧ ಛೂ ಬಿಟ್ಟಿದ್ದಾರೆ. ಪೀಟರ್ ಕರೆದು ಆತನ ತಲೆಗೆ ಇಲ್ಲಸಲ್ಲದ್ದನ್ನ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೀಟರ್ ರೇಖಾಳನ್ನ ಬೀದಿಯಲ್ಲಿ ಕೊಚ್ಚಿಹಾಕಲು ಸ್ಕೆಚ್ ಹಾಕಿಬಿಟ್ಟಿದ್ದ.
ರೇಖಾ ಹತ್ಯೆ ಹಿಂದೆ ಕದಿರೇಶ್ ಸಹೋದರಿ ಮಾಲಾ ಮಸಲತ್ತು?
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಸಂಬಂಧ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪೊಲೀಸರು, ರೇಖಾರ ಅತ್ತಿಗೆ ಮಾಲಾ, ಮಾಲಾರ ಪುತ್ರ, ಪುತ್ರಿ ಹಾಗೂ ಸೊಸೆಯನ್ನ ಸ್ಟೇಷನ್ಗೆ ಎತ್ತಾಕ್ಕೊಂಡು ಬಂದಿದ್ದಾರೆ. ಹತ್ಯೆ ಹಿಂದಿರೋ ರಿಯಲ್ ಕಹಾನಿ ಬಾಯಿಬಿಡಿಸೋ ಕಾರ್ಯ ಶುರುವಾಗಿದೆ. ವಾರ್ಡ್ ಮೇಲಿನ ಹಿಡಿತ, ಏರಿಯಾದಲ್ಲಿ ರೇಖಾ ಪಾಪ್ಯುಲಾರಿಟಿ, ಮುಂದಿನ ಚುನಾವಣೆಗೆ ವಾರ್ಡ್ ವಶಕ್ಕೆ ಯತ್ನ ಸೇರಿದಂತೆ ಅತಿದೊಡ್ಡ ರಾಜಕೀಯ ಸ್ಕೆಚ್ ರೇಖಾ ಹತ್ಯೆ ಹಿಂದೆ ಇದೆ ಎನ್ನಲಾಗಿದೆ.
ಹೀಗೆ ಕುಟುಂಬದ ರಾಜಕೀಯ ಜಿದ್ದಾಜಿದ್ದಿಗೆ ಅಂತ್ಯ ಹಾಡ್ಬೇಕು ಅಂದ್ರೆ ರೇಖಾ ಕತೆ ಫಿನಿಷ್ ಆಗ್ಬೇಕು. ಇದಕ್ಕಾಗಿ ಹೆಣೆದಿರೋ ತಂತ್ರ ಮಾತ್ರ ಭೀಕರ ಹತ್ಯೆಯಲ್ಲಿ ಮುಗಿದುಹೋಗಿದೆ. ಹಾಗಾದ್ರೆ ಮಾಲಾ ಫ್ಯಾಮಿಲಿಗೆ ಇದ್ದ ದ್ವೇಷವೇನು..? ಪೀಟರ್ ಯಾವ ಕಾರಣಕ್ಕೆ ರೇಖಾ ಕೊಲ್ಲೋ ನಿರ್ಧಾರಕ್ಕೆ ಬಂದ ಅನ್ನೋದರ ಮಾಹಿತಿ ಇಲ್ಲಿದೆ.
ದ್ವೇಷ.. ಸಿಟ್ಟು.. ರೇಖಾ ಕೊಲೆ..!
ಮುಂಬರುವ ಬಿಬಿಎಂಪಿ ಚುನಾವಣೆಗೆ ನಿಲ್ಲಲು ರೇಖಾ ಕದಿರೇಶ್ ರೆಡಿಯಾಗಿದ್ರು. ಈ ಬಾರಿಯೂ ಬಿಜೆಪಿಯಿಂದ್ಲೇ ರೇಖಾಗೆ ಟಿಕೆಟ್ ಕನ್ಫರ್ಮ್ ಆಗಿತ್ತು. ಆದ್ರೆ, ಇತ್ತ ಕದಿರೇಶ್ ಸಹೋದರಿ ಮಾಲಾ ಬಿಎಸ್‌ಪಿಯಿಂದ ಚುನಾವಣೆ ಸ್ಪರ್ಧಿಸಲು ಪ್ಲ್ಯಾನ್ ಮಾಡಿದ್ಲು. ಇದರ ಜೊತೆಗೆ ತನಗೆ ಆಗದಿದ್ರೆ ಮಗಳು ಕಸ್ತೂರಿಯನ್ನ ಅಖಾಡಕ್ಕಿಳಿಸ್ಬೇಕು ಇಲ್ಲ, ಅರುಳ್ ಪತ್ನಿ ಪೂರ್ಣಿಮಾಳನ್ನ ನಿಲ್ಲಿಸ್ಬೇಕು ಅಂತಾ ತಯಾರಿ ಮಾಡಿದ್ಲು ಮಾಲಾ. ಆದ್ರೆ, ಮಾಲಾಳ ಈ ಪ್ಲ್ಯಾನ್‌ಗೆ ರೇಖಾ ಏರಿಯಾದಲ್ಲಿ ಗಳಿಸಿದ್ದ ವರ್ಚಸ್ಸು ಅಡ್ಡಿಯಾಗಿತ್ತು. ರೇಖಾ ನಮ್ಮ ಪೊಲಿಟಿಕಲ್ ಪ್ಲ್ಯಾನ್ ಅಡ್ಡಿಯಾಗ್ತಿದ್ದಾಳೆ ಅಂತಾ ಕೆರಳಿದ್ದ ಮಾಲಾ ಮತ್ತು ಅರುಳ್, ರೇಖಾಳನ್ನು ಮುಗಿಸೋ ಪ್ಲ್ಯಾನ್ ಮಾಡಿದ್ರಂತೆ. ಇದೇ ಟೈಮ್‌ಗೆ ರೇಖಾ ಜೊತೆಗೆ 18 ಲಕ್ಷ ರೂಪಾಯಿ ಟೆಂಡರ್ ವಿಚಾರವಾಗಿ ಜಗಳ ಮಾಡಿಕೊಂಡಿದ್ದ ಪೀಟರ್ ಕತ್ತಿ ಮಸೀತಿದ್ದ. ಪೀಟರ್ ಮನಸ್ತಾಪವನ್ನೇ ಮಾಲಾ ಫ್ಯಾಮಿಲಿ ಕೊಲೆ ಅಸ್ತ್ರವಾಗಿ ಬಳಸಿದ್ದಾರೆ. ಪೀಟರ್‌ನನ್ನ ಕರೆದು ಕದಿರೇಶ್ ಕೊಲ್ಲಿಸಿದ್ದು ರೇಖಾ ಅಂತಾ ನಂಬಿಸಿದ್ದಾರೆ. ಪೀಟರ್ನನ್ನೇ ಮುಂದೆ ಬಿಟ್ಟು ರೇಖಾರನ್ನ ಮುಗಿಸೋ ಸ್ಕೆಚ್ ಹಾಕಿದ್ದಾರೆ. ಹೀಗೆ ತಂತ್ರಗಾರಿಕೆ ವರ್ಕೌಟ್ ಮಾಡಿ ರೇಖಾ ಕದಿರೇಶ್ ಕಥೆ ಮುಗಿಸಿರಬಹುದು ಅಂತಾ ಪೊಲೀಸರು ಅನುಮಾನ ಪಟ್ಟಿದ್ದಾರೆ.
ಒಟ್ನಲ್ಲಿ ಛಲವಾದಿ ಪಾಳ್ಯ ವಾರ್ಡ್ ವಶಕ್ಕೆ ನಡೆದ ಫ್ಯಾಮಿಲಿ ಫೈಟ್ನ ಭಾಗವಾಗೇ ರೇಖಾ ಭೀಕರ ಹತ್ಯೆ ನಡೆದಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಸದ್ಯ ರೇಖಾ ಅತ್ತಿಗೆ ಮಾಲಾ ಮತ್ತು ಕುಟುಂಬಕ್ಕೆ ಪೊಲೀಸರು ಫುಲ್ ಗ್ರಿಲ್ ಮಾಡ್ತಿದ್ದಾರೆ. ರೇಖಾ ಮರ್ಡರ್ ಹಿಂದಿನ ಎಲ್ಲಾ ಸೀಕ್ರೆಟ್ ಇಂದು ಸಂಜೆಯೊಳಗೆ ರಿವೀಲ್ ಆಗೋ ಎಲ್ಲಾ ಸಾಧ್ಯತೆ ಇದೆ.
ಇದನ್ನೂ ಓದಿ: Rekha Kadiresh: ರೇಖಾ ಕದಿರೇಶ್ ಹಾಡಹಗಲು ಹತ್ಯೆಯಾಗಿದ್ದು ಹೇಗೆ? ಸಂಚಲನ ಮೂಡಿಸಿದೆ ವಿಡಿಯೋ