Rekha Kadiresh: ರೇಖಾ ಕದಿರೇಶ್ ಹಾಡಹಗಲು ಹತ್ಯೆಯಾಗಿದ್ದು ಹೇಗೆ? ಸಂಚಲನ ಮೂಡಿಸಿದೆ ವಿಡಿಯೋ

ರೇಖಾ ಕದಿರೇಶ್ ಹತ್ಯೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳ ಪೈಕಿ ಮೂವರು ಕಚೇರಿ ಮುಂಭಾಗ ಸ್ಪಾಟ್ ನಲ್ಲಿ ರೇಖಾ ಕದಿರೇಶ್ ಮೇಲೆ ಮಾರಕಾಸ್ತ್ರ ಹಿಡಿದು ಆಕ್ರಮಣ ಮಾಡುತ್ತಾರೆ. ಕಚೇರಿ ಪಕ್ಕದ ಪ್ಯಾಸೇಜ್​ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ರೇಖಾ ಕದಿರೇಶ್ ಚೀರಾಡಿ ಬೇಡಿದರೂ ಕೇಳದೇ, ಬಿಡದ ಹಂತಕರ ಪಡೆ ಅವರನ್ನು ಸುತ್ತುವರೆಯುತ್ತದೆ.

Rekha Kadiresh: ರೇಖಾ ಕದಿರೇಶ್ ಹಾಡಹಗಲು ಹತ್ಯೆಯಾಗಿದ್ದು ಹೇಗೆ? ಸಂಚಲನ ಮೂಡಿಸಿದೆ ವಿಡಿಯೋ
ವಿಡಿಯೋದ ಚಿತ್ರಾವಳಿಗಳು
Follow us
TV9 Web
| Updated By: guruganesh bhat

Updated on: Jun 25, 2021 | 7:00 PM

ಬೆಂಗಳೂರು: ಇಡೀ ನಗರವನ್ನೇ ಬೆಚ್ಚಿಬೀಳಿಸಿದ್ದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಹಾಡಹಗಲೇ ಕೊಲೆಯದ್ದು ಎಂದು ಹೇಳಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ವೀಕ್ಷಿಸಿದರೆ ರೇಖಾ ಕದಿರೇಶ್ ಅವರ ಹತ್ಯೆಗೆ ಮುಂಚೆಯೇ ಸಂಚು ರೂಪಿಸಲಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ನಿನ್ನೆ ಬೆಳಗ್ಗೆ 10:00 ರಿಂದ10:25 ರ ವೇಳೆಗೆ ಬಿಬಿಎಂಪಿ ವಾರ್ಡ್ ನಂ.138 ರ ಛಲವಾದಿ ಪಾಳ್ಯದ ಅಂಜನಪ್ಪ ಗಾರ್ಡನ್ ರೇಖಾ ಕದಿರೇಶ್ ತಮ್ಮ ಕಚೇರಿ ಮುಂಭಾಗದಲ್ಲಿ ಆಹಾರ ವಸ್ತು ವಿತರಣೆ ಮಾಡುತ್ತಿರುವಾಗ ಈ ಹತ್ಯೆ ಸಂಭವಿಸಿದೆ ಎಂದು ಹೇಳಲಾಗಿದೆ.

ವಿಡಿಯೋದಲ್ಲಿ ಇರುವುದೇನು? ರೇಖಾ ಕದಿರೇಶ್ ಹತ್ಯೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳ ಪೈಕಿ ಮೂವರು ಕಚೇರಿ ಮುಂಭಾಗ ಸ್ಪಾಟ್ ನಲ್ಲಿ ರೇಖಾ ಕದಿರೇಶ್ ಮೇಲೆ ಮಾರಕಾಸ್ತ್ರ ಹಿಡಿದು ಆಕ್ರಮಣ ಮಾಡುತ್ತಾರೆ. ಕಚೇರಿ ಪಕ್ಕದ ಪ್ಯಾಸೇಜ್​ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ರೇಖಾ ಕದಿರೇಶ್ ಚೀರಾಡಿ ಬೇಡಿದರೂ ಕೇಳದೇ, ಬಿಡದ ಹಂತಕರ ಪಡೆ ಅವರನ್ನು ಸುತ್ತುವರೆಯುತ್ತದೆ. ಅದೇ ಜಾಗದಲ್ಲಿ ದುಷ್ಕರ್ಮಿ ರೇಖಾ ಕದಿರೇಶ್ ಮೇಲೆ ಕುಳಿತು ಬರೋಬ್ಬರಿ ಏಳು ಬಾರಿ ಒಬ್ಬನೇ ಕುತ್ತಿಗೆಗೆ ಮನಸೋಇಚ್ಚೆ ಇರಿದಿದ್ದಾನೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ನೋಡನೋಡುತ್ತಿದ್ದಂತೆಯೇ ಕೊಲೆ ನಡೆದು ಹೋಗುತ್ತೆ‌. ಓರ್ವ ವ್ಯಕ್ತಿ ದೊಡ್ಡ ಪಾತ್ರೆ ಹಿಡಿದು ರೇಖಾ ಕದಿರೇಶ್ ರಕ್ಷಣೆಗೆ ಧಾವಿಸುತ್ತಾನೆ. ಆದರೆ ಮಾರಕಾಸ್ತ್ರ ಹಿಡಿದಿದ್ದ ಮತ್ತೋರ್ವ ದುಷ್ಕರ್ಮಿ, ಬಿಂದಿಗೆಯಿಂದ ರಕ್ಷಣೆಗೆ ಧಾವಿಸಿದ ವ್ಯಕ್ತಿ ಮೇಲೆ ಪ್ರಹಾರ ಮಾಡುತ್ತಾನೆ. ರೇಖಾ ಕದಿರೇಶ್ ಕುತ್ತಿಗೆಗೆ ಇರಿಯುತ್ತಿರುವ ವೇಳೆ ಮಗದೊಬ್ಬ ದುಷ್ಕರ್ಮಿ ಆಕೆ ತಪ್ಪಿಸಿಕೊಳ್ಳದಂತೆ ತಡೆಯುವ ಸಲುವಾಗಿ ರೇಖಾ ತಲೆ ಬಳಿಯೇ ನಿಂತು ಅಡ್ಡಗಟ್ಟಿ ನಿಂತಿರುತ್ತಾನೆ. ಕೆಲವೇ ಕ್ಷಣಗಳಲ್ಲಿ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆಸಿದ ಮೂವರು ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗುತ್ತಾರೆ. ಈ ಇಡೀ ಲೈವ್ ಮರ್ಡರ್ ದೃಶ್ಯಾವಳಿ ಸ್ಥಳೀಯರೊಬ್ಬರು ಮನೆಯ ಮೇಲ್ಬಾಗದಲ್ಲಿ ನಿಂತು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ರೇಖಾ ಕದಿರೇಶ್ ಅಂತ್ಯಸಂಸ್ಕಾರ: ರೇಖಾ ಕೊಲೆ ಆರೋಪಿಗಳಿಗಿದೆ ಅಪರಾಧದ ಇತಿಹಾಸ ಬಿಬಿಎಂಪಿ ಮಾಜಿ ಸದಸ್ಯೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪೀಟರ್ ಮತ್ತು ಸೂರ್ಯ ಈ ಹಿಂದೆಯೂ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಮಾಹಿತಿ ಪತ್ತೆಯಾಗಿದೆ. ಆರೋಪಿ ಪೀಟರ್ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಮತ್ತೊಬ್ಬ ಆರೋಪಿ ಸೂರ್ಯ 4 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಪೀಟರ್ ವಿರುದ್ಧ ವಿರುದ್ಧ 3 ಕೊಲೆ ಪ್ರಕರಣ, 1 ಹಲ್ಲೆ ಪ್ರಕರಣ, 2 ಡಕಾಯಿತಿ ಪ್ರಕರಣಗಳು ದಾಖಲಾಗಿವೆ. 4 ಕೇಸ್‌ಗಳಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಸೂರ್ಯನ ವಿರುದ್ಧ 2 ಕೊಲೆ ಕೇಸ್, 2 ಕೊಲೆ ಯತ್ನ ಪ್ರಕರಣಗಳಿವೆ.

ರೇಖಾ ಕದಿರೇಶ್ ಶವಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಟಿ.ಆರ್.ಮಿಲ್ ಚಿತಾಗಾರದಲ್ಲಿ ಮೃತ ರೇಖಾ ಕದಿರೇಶ್​ ಶವಸಂಸ್ಕಾರ ಶುಕ್ರವಾರ ನಡೆಯಿತು. ರೇಖಾ ಕದಿರೇಶ್​​ ಚಿತೆಗೆ ಮಗ ಅಗ್ನಿಸ್ಪರ್ಶ ಮಾಡಿದ. ಬಿಬಿಎಂಪಿ ಛಲವಾದಿಪಾಳ್ಯ ವಾರ್ಡ್​ ಸದಸ್ಯೆಯಾಗಿದ್ದ ರೇಖಾ ಕದಿರೇಶ್​ ನಿನ್ನೆ ಬೆಳಿಗ್ಗೆ ಕೊಲೆಯಾಗಿದ್ದರು.

ಮಾಜಿ ಕಾರ್ಪೊರೇಟರ್‌ ರೇಖಾ ಕದಿರೇಶ್​ ಹತ್ಯೆ ಪ್ರಕರಣದ ತನಿಖೆಗೆಂದು ಪೊಲೀಸರು 6 ವಿಶೇಷ ತಂಡಗಳನ್ನು ರಚಿಸಿದ್ದರು. ಕಾಟನ್​ಪೇಟೆ ಇನ್​ಸ್ಪೆಕ್ಟರ್ ಚಿದಾನಂದ ಮೂರ್ತಿ, ಸಿಟಿಮಾರ್ಕೆಟ್ ಇನ್​ಸ್ಪೆಕ್ಟರ್ ಕುಮಾರಸ್ವಾಮಿ, ಕಾಮಾಕ್ಷಿಪಾಳ್ಯ ಇನ್​ಸ್ಪೆಕ್ಟರ್ ಪ್ರಶಾಂತ್, ಉಪ್ಪಾರಪೇಟೆ ಇನ್​ಸ್ಪೆಕ್ಟರ್ ಶಿವಸ್ವಾಮಿ, ಕಲಾಸಿಪಾಳ್ಯ ಇನ್​ಸ್ಪೆಕ್ಟರ್ ಚಂದ್ರಕಾಂತ್, ಚಾಮರಾಜಪೇಟೆ ಇನ್​ಸ್ಪೆಕ್ಟರ್ ಲೋಕಾಪುರ ನೇತೃತ್ವದ ತಂಡಗಳು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದವು.

ಮಾಗಡಿ ರಸ್ತೆ ಸುಂಕದಕಟ್ಟೆ ಬಳಿ ಮದ್ಯಪಾನ ಮಾಡುತ್ತಿದ್ದ ಆರೋಪಿಗಳು ಸಬ್​ಇನ್​ಸ್ಪೆಕ್ಟರ್ ಕರಿಯಣ್ಣ ಮತ್ತು ಹೆಡ್ ಕಾನ್​ಸ್ಟೆಬಲ್ ಚಂದ್ರಶೇಖರ್ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ ಪೊಲೀಸರು, ಅರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡು ಲಕ್ಷ್ಮೀ ಅಸ್ಪತ್ರೆಗೆ ದಾಖಲು ಮಾಡಿದರು. ಮಾಗಡಿ ರಸ್ತೆ ಠಾಣೆಯ ಇನ್​ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ನಿರ್ವಹಿಸಿತು.

ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆಗಡುಕರ ಪತ್ತೆಗೆ 6 ತಂಡ ರಚಿಸಿದ್ದ ಪೊಲೀಸರು: ರಾತ್ರಿಯಿಡೀ ಆರೋಪಿಗಳ ಬೆನ್ನುಬಿದ್ದು ಹುಡುಕಿದ್ದರು

ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆಗೈದವರನ್ನು 24 ಗಂಟೆಯಲ್ಲಿ ಬಂಧಿಸುತ್ತೇವೆ: ಸಿಎಂ ಯಡಿಯೂರಪ್ಪ

(How is BBMP former Corporator Rekha Kadiresh assassinated here is the photos)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್