ಉತ್ತರ ಕನ್ನಡದ ಮಹಿಳೆಯಿಂದ ಅಂಗಾಂಗ ದಾನ; ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯ ಲಿವರ್ ಏರ್‌ಲಿಫ್ಟ್
ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಮಹಿಳೆಯ ಮೆದುಳು ನಿಷ್ಕೃಯಗೊಂಡಿತ್ತು. ಮಹಿಳೆಯನ್ನು ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಧಾರವಾಡ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್ನ್ನು ಏರ್‌ಲಿಫ್ಟ್ ಧಾರವಾಡದ ಎಸ್ಡಿಎಂ ಆಸ್ಪತ್ರೆಯಿಂದ ಬೆಂಗಳೂರಿಗೆ ಮೂಲಕ ರವಾನಿಸಲಾಗಿದೆ. ಲೀವರ್ನ್ನು ಹುಬ್ಬಳಿಯ ವಿಮಾನ ನಿಲ್ದಾಣಕ್ಕೆ ರವಾನಿಸಲು ಗ್ರೀನ್ ಕಾರಿಡಾರ್ ಮೂಲಕ ಅಂಬ್ಯುಲೆನ್ಸ್‌ಗೆ ಪೊಲೀಸರು ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅಂಗಾಗ ದಾನ ಮಾಡಿದ ಮಹಿಳೆಯ ಜತೆ ಪೊಲೀಸ್ ಇಲಾಖೆಯೂ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದೆ.
ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಗ ದಾನ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಮಹಿಳೆಯೋರ್ವರ ಅಂಗಾಗ ದಾನಕ್ಕೆ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಎರಡು ದಿನಗಳ ಹಿಂದೆ ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಮಹಿಳೆಯ ಮೆದುಳು ನಿಷ್ಕೃಯಗೊಂಡಿತ್ತು. ಮಹಿಳೆಯನ್ನು ಧಾರವಾಡ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಯ ಎರಡು ಕಣ್ಣು, ಎರಡು ಕಿಡ್ನಿಗಳನ್ನು ಆಸ್ಪತ್ರೆಯಲ್ಲೇ ಬಳಕೆ ಮಾಡಲಾಗಿದೆ. ಮಹಿಳೆಯ ಲಿವರ್ ಮಾತ್ರ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ ಏರ್‌ಲಿಫ್ಟ್ ಮೂಲಕ ರವಾನಿಸಲಾಗಿದೆ.
ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಗ ದಾನಕ್ಕೆ ನಿರ್ಧರಿಸಿದ ಉತ್ತರ ಕನ್ನಡ ಮೂಲದ ಶಿರಸಿ ಮಹಿಳೆ ಹಲವರ ಬಾಳಿಗೆ ಹೊಸ ಅರ್ಥ ಕಲ್ಪಿಸಿಕೊಟ್ಟಿದ್ದಾರೆ. ಮಹಿಳೆಯ ಮನೆಯವರು ಕೈಗೊಂಡ ದೃಢ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಇತ್ತೀಚಿಗಷ್ಟೇ ಅಂಗಾಗ ದಾನ ಮಾಡಿದ್ದ ನಟ ಸಂಚಾರಿ ವಿಜಯ್ ಇತ್ತೀಚಿಗಷ್ಟೇ ಆಕಸ್ಮಿಕ ಅಪಘಾತದಲ್ಲಿ ಅಕಾಲಿಕವಾಗಿ ಪ್ರಾಣತೆತ್ತ ಯುವ ಪ್ರತಿಭಾವಂತ ನಟ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು. ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನ ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಸಂಚಾರಿ ವಿಜಯ್ ಅವರ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಯಶಸ್ವಿಯಾಗಿತ್ತು ಮಹಿಳೆಯೊಬ್ಬರಿಗೆ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ಮಾಡಲಾಗಿದೆ. 34 ವರ್ಷದ ಮಹಿಳೆಗೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್ ನಡೆದಿದೆ. ಇನ್ನು ನಟ ಸಂಚಾರಿ ವಿಜಯ್ ಅವರ ಕಣ್ಣುಗಳು ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಜೋಡಣೆಯಾಗಿದೆ.
ಇದನ್ನೂ ಓದಿ:
2023ರ ಚುನಾವಣೆಯಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರದು: ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ Income Tax Exemptions: ಕೊವಿಡ್ ವೆಚ್ಚಕ್ಕೆ ಆದಾಯ ತೆರಿಗೆ ವಿನಾಯಿತಿ ಅಂದರೇನು? ಇಲ್ಲಿದೆ ಮಾಹಿತಿ
(Successfully Airlifted liver organ donated women Dharwad to Bengaluru)