ಬೀದಿನಾಯಿಗಳಿಗೆ ಊಟ ಹಾಕೋರು ಒಮ್ಮೆ ಈ ಸುದ್ದಿ ಓದಿ; ಇನ್ಮುಂದೆ ಬಿಬಿಎಂಪಿಯ ಈ ರೂಲ್ಸ್ ಪಾಲಿಸ್ಬೇಕು

| Updated By: ಆಯೇಷಾ ಬಾನು

Updated on: May 08, 2024 | 12:39 PM

ಬೆಂಗಳೂರು ಮಂದಿ ತಮಗೆ ಇಷ್ಟ ಬಂದಾಗ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಊಟ ಹಾಕ್ತಿದ್ದು ಅದನ್ನು ತಿನ್ನಲು ಗುಂಪು ಸೇರುವ ನಾಯಿಗಳು ತಮ್ಮ ಪಕ್ಕ ಚಲಿಸುವ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಹೀಗಾಗಿ ಬೀದಿ ನಾಯಿಗಳಿಗೆ ಊಟ ಹಾಕಲು ಊಟದ ಸಮಯ ಮತ್ತು ಸ್ಥಳವನ್ನು ಬಿಬಿಎಂಪಿ ನಿಗದಿ ಮಾಡಿದೆ. ಈ ರೂಲ್ಸ್ ಪಾಲಿಸುವಂತೆ ಮನವಿ ಮಾಡಿದೆ.

ಬೀದಿನಾಯಿಗಳಿಗೆ ಊಟ ಹಾಕೋರು ಒಮ್ಮೆ ಈ ಸುದ್ದಿ ಓದಿ; ಇನ್ಮುಂದೆ ಬಿಬಿಎಂಪಿಯ ಈ ರೂಲ್ಸ್ ಪಾಲಿಸ್ಬೇಕು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮೇ.08: ಬೆಂಗಳೂರಿನ ಬೀದಿನಾಯಿಗಳ (Stray Dog) ಹೊಟ್ಟೆ ತುಂಬಿಸ್ತಿದ್ದ ಶ್ವಾನಪ್ರಿಯರಿಗೆ ಶಾಕ್ ಕೊಡಲು ಪಾಲಿಕೆ (BBMP) ಸಜ್ಜಾಗಿದೆ. ಮನೆ ಬಳಿಯೋ, ಅಂಪಾರ್ಟ್ ಮೆಂಟ್​ಗಳ ಖಾಲಿ ಜಾಗದಲ್ಲೋ ಬೀದಿನಾಯಿಗೆ ಊಟ ಹಾಕ್ತಿದ್ದವರು ಇನ್ಮುಂದೆ ಬಿಬಿಎಂಪಿ ಹೇಳೋ ಟೈಮ್ ನಲ್ಲಿ, ಸೂಚಿಸೋ ಜಾಗದಲ್ಲೇ ಬೀದಿನಾಯಿಗಳಿಗೆ ಊಟ ಹಾಕೋಕೆ ಸಜ್ಜಾಗಬೇಕಿದೆ. ಏನಿದು ಬಿಬಿಎಂಪಿಯ ಹೊಸ ರೂಲ್ಸ್ ಅಂತೀರಾ ಈ ಸುದ್ದಿ ಓದಿ.

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಬೀದಿನಾಯಿಗಳು ತಮ್ಮದೇ ಆದ ಗ್ಯಾಂಗ್ ಕಟ್ಟ್ಕೊಂಡು ಓಡಾಡಿಕೊಂಡಿವೆ. ಹೀಗೆ ಬೀದಿಗೆ ಸೆಕ್ಯುರಿಟಿಗಾರ್ಡ್ ನಂತಿರೋ ಬೀದಿನಾಯಿಗಳಿಗೆ ಪ್ರೀತಿಯಿಂದಲೋ ಅಥವಾ ವ್ಯರ್ಥವಾಗುತ್ತೆ ಅಂತಲೋ ಊಟ ಹಾಕ್ತಿದ್ದ ಬೆಂಗಳೂರಿಗರು ಇನ್ಮುಂದೆ ಈ ರೂಲ್ಸ್ ಪಾಲಿಸಬೇಕು. ನಾಯಿಗಳಿಗೆ ಊಟ ಹಾಕೋದಕ್ಕೂ ರೂಲ್ಸ್ ಮಾಡೋಕೆ ಬಿಬಿಎಂಪಿ ಪ್ಲಾನ್ ಮಾಡಿದೆ. ಎಲ್ಲೆಂದರಲ್ಲಿ, ಇಷ್ಟ ಬಂದ ಸಮಯದಲ್ಲಿ ಬೀದಿನಾಯಿಗಳಿಗೆ ಊಟ ಹಾಕಬಾರದು ಎಂದು ಪಾಲಿಕೆ ಹೊಸ ರೂಲ್ಸ್ ತರೋಕೆ ಹೊರಟಿದೆ.

ಇದನ್ನೂ ಓದಿ: ಬಿಸಿಲನ ಜೊತೆಗೆ ತರಕಾರಿ ಬೆಲೆಯೂ ಏರಿಕೆ: ಗ್ರಾಹಕರಿಗೆ ಹುಳಿಯಾದ ನಿಂಬೆಹಣ್ಣು ದರ

ಬೀದಿಗಳಲ್ಲಿ ಊಟ ಹಾಕುವಾಗ ನಾಯಿಗಳು ಗುಂಪು ಸೇರುತ್ತವೆ, ಈ ವೇಳೆ ಶ್ವಾನಗಳು ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅಟ್ಯಾಕ್ ಮಾಡೋ ಸಾಧ್ಯತೆ ಇರೋದರಿಂದ, ಊಟ ನೀಡೋದಕ್ಕೆ ಸಮಯ ಹಾಗೂ ಜಾಗ ನಿಗಧಿ ಮಾಡೋದಕ್ಕೆ ಪಾಲಿಕೆ ಸಜ್ಜಾಗಿದೆ. ಬೆಳಗಿನ ಜಾವ 3 ರಿಂದ 4 ಗಂಟೆ ಅಥವಾ ರಾತ್ರಿ ಜನರ ಓಡಾಟ ಕಡಿಮೆ ಇದ್ದಾಗ ಮಾತ್ರ ಬೀದಿನಾಯಿಗಳಿಗೆ ಊಟ ಹಾಕುವಂತೆ ಪಾಲಿಕೆ ಸಲಹೆ ನೀಡ್ತಿದೆ. ಅಲ್ಲದೇ ಏರಿಯಾಗಳಲ್ಲಿ, ಅಪಾರ್ಟ್ ಮೆಂಟ್ ಗಳ ಮುಂದೆ ಎಲ್ಲಿ, ಯಾವಾಗ ನಾಯಿಗಳಿಗೆ ಊಟ ಹಾಕಬೇಕು ಅಂತಾ ಬೋರ್ಡ್ ಹಾಕೋಕು ಕೂಡ ಪಾಲಿಕೆ ಚಿಂತನೆ ನಡೆಸ್ತಿದೆ.

ಸದ್ಯ ಬೆಂಗಳೂರಲ್ಲಿ ಬೀದಿನಾಯಿಗಳ ದಾಳಿ ಪ್ರಕರಣ ಕಡಿಮೆಯಾಗಲು ಕ್ರಮವಹಿಸಿದ್ದ ಪಾಲಿಕೆ, ಇದೀಗ ಬೀದಿನಾಯಿಗಳಿಗೆ ಊಟ ಹಾಕೋದರಿಂದ ಆಗೋ ಸಮಸ್ಯೆಗೆ ಬ್ರೇಕ್ ಹಾಕೋಕೆ ಮುಂದಾಗಿದೆ. ಸದ್ಯ ಪಾಲಿಕೆಯ ಈ ಪ್ಲಾನ್ ಎಷ್ಟರಮಟ್ಟಿಗೆ ಜಾರಿಯಾಗುತ್ತೆ, ಸಿಟಿ ಮಂದಿ ಎಷ್ಟರ ಮಟ್ಟಿಗೆ ಅದನ್ನ ಪಾಲಿಸ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:17 am, Wed, 8 May 24