ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಸದ್ಯದಲ್ಲೇ ಬೆಲೆ ಏರಿಕೆ ಬಿಸಿ! ಯಾಕೆ ಗೊತ್ತಾ?

|

Updated on: Feb 29, 2020 | 10:49 AM

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಊಟದ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಊಟ, ಉಪಾಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಪ್ಲ್ಯಾನ್ ನಡೆಸಿದ್ದು, ಶೀಘ್ರದಲ್ಲೇ ಉಪಾಹಾರದ ಬೆಲೆ 5ರೂಪಾಯಿಯಿಂದ 10ರೂ.ಗೆ ಏರಿಕೆ ಹಾಗೂ ಊಟದ ಬೆಲೆ 10 ರೂ.ನಿಂದ 15 ರೂ.ಗೆ ಏರಿಕೆ ಮಾಡುವ ಸಾಧ್ಯತೆಯಿದೆ. ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ಇಂದಿರಾ ಕ್ಯಾಂಟೀನ್ ಊಟದ ದರ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿದೆ. […]

ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ ಸದ್ಯದಲ್ಲೇ ಬೆಲೆ ಏರಿಕೆ ಬಿಸಿ! ಯಾಕೆ ಗೊತ್ತಾ?
Follow us on

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟೀನ್ ಊಟದ ದರ ಪರಿಷ್ಕರಣೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಊಟ, ಉಪಾಹಾರ ದರ ಪರಿಷ್ಕರಣೆಗೆ ಬಿಬಿಎಂಪಿ ಪ್ಲ್ಯಾನ್ ನಡೆಸಿದ್ದು, ಶೀಘ್ರದಲ್ಲೇ ಉಪಾಹಾರದ ಬೆಲೆ 5ರೂಪಾಯಿಯಿಂದ 10ರೂ.ಗೆ ಏರಿಕೆ ಹಾಗೂ ಊಟದ ಬೆಲೆ 10 ರೂ.ನಿಂದ 15 ರೂ.ಗೆ ಏರಿಕೆ ಮಾಡುವ ಸಾಧ್ಯತೆಯಿದೆ.

ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲು ಇಂದಿರಾ ಕ್ಯಾಂಟೀನ್ ಊಟದ ದರ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿದೆ. ಗುತ್ತಿಗೆದಾರ ಸದ್ಯ ಒಂದು ಊಟಕ್ಕೆ 22 ರೂಪಾಯಿ ಚಾರ್ಜ್ ಮಾಡುತ್ತಿದ್ದು, ಸರ್ಕಾರ12 ರೂಪಾಯಿ ಸಬ್ಸಿಡಿ ನೀಡುತ್ತಿದೆ. ಊಟಕ್ಕೆ ಗ್ರಾಹಕರಿಂದ 10 ರೂಪಾಯಿ ಪಡೆಯಲಾಗ್ತಿದೆ. ಈಗ ಸರ್ಕಾರದ ಸಬ್ಸಿಡಿ ಹೊರೆ ಇಳಿಸಲು ಊಟದ ಬೆಲೆ ಏರಿಕೆ ಮಾಡಲು ಚಿಂತನೆ ನಡೆಸಿದೆ.

ಇದರಿಂದ ಬಹುತೇಕ ಸಬ್ಸಿಡಿ ಹೊರೆ ಕಡಿಮೆಯಾಗಲಿದೆ. ಕಳೆದ ಒಂದು ವರ್ಷದಿಂದ ಸರ್ಕಾರ ಇಂದಿರಾ ಕ್ಯಾಂಟೀನ್​ಗೆ ಅನುದಾನ ನೀಡಿಲ್ಲ. ಬಿಬಿಎಂಪಿಯೇ ನಿರ್ವಹಣೆ ಮಾಡುತ್ತಿರುವ ಕಾರಣ ಆರ್ಥಿಕ ಹೊರೆಯಾಗಿದೆ. ಈ ಬಾರಿ ಇಂದಿರಾ ಕ್ಯಾಂಟೀನ್​ಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದ್ದು, ಹೊಸ ಗುತ್ತಿಗೆ ಜೊತೆ ಹೊಸ ದರ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

Published On - 9:26 am, Sat, 29 February 20