AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೇ ಬೆಂಕಿ ಬಿದ್ರೂ ಮೊಬೈಲ್​ಗೆ ಮೆಸೇಜ್: ಕಾಡ್ಗಿಚ್ಚು ನಿಯಂತ್ರಣಕ್ಕೆ ಹೊಸ ಪ್ಲಾನ್!

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಕಳೆದ ಬೇಸಿಗೆಯಲ್ಲಿ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದಿತ್ತು. 4 ಸಾವಿರ ಹೆಕ್ಟೇರ್​ ಪ್ರದೇಶ ನಾಶವಾಗುವುದರ ಜೊತೆಗೆ ಅನೇಕ ಸಸ್ಯ ಹಾಗೂ ಜೀವ ಸಂಕುಲಗಳು ನಾಶವಾಗಿದ್ದವು. ಇದರಿಂದ ಈ ವರ್ಷ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಿಬ್ಬಂದಿ ವರ್ಗ ಎಚ್ಚೆತ್ತುಕೊಂಡಿದೆ. ಬೇಸಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲೇ ಬೆಂಕಿ ಬಿದ್ರೂ ಅಧಿಕಾರಿಗಳ ಮೊಬೈಲ್​ಗೆ ಮೆಸೇಜ್: ಇದರಲ್ಲಿ ಪ್ರಮುಖವಾಗಿ ಅರಣ್ಯದಲ್ಲಿ ಯಾವುದೇ ಕಡೆ ಬೆಂಕಿ ಬಿದ್ದರೂ […]

ಎಲ್ಲೇ ಬೆಂಕಿ ಬಿದ್ರೂ ಮೊಬೈಲ್​ಗೆ ಮೆಸೇಜ್: ಕಾಡ್ಗಿಚ್ಚು ನಿಯಂತ್ರಣಕ್ಕೆ ಹೊಸ ಪ್ಲಾನ್!
ಸಾಧು ಶ್ರೀನಾಥ್​
|

Updated on: Feb 28, 2020 | 7:11 PM

Share

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶ ಕಳೆದ ಬೇಸಿಗೆಯಲ್ಲಿ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದಿತ್ತು. 4 ಸಾವಿರ ಹೆಕ್ಟೇರ್​ ಪ್ರದೇಶ ನಾಶವಾಗುವುದರ ಜೊತೆಗೆ ಅನೇಕ ಸಸ್ಯ ಹಾಗೂ ಜೀವ ಸಂಕುಲಗಳು ನಾಶವಾಗಿದ್ದವು. ಇದರಿಂದ ಈ ವರ್ಷ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಿಬ್ಬಂದಿ ವರ್ಗ ಎಚ್ಚೆತ್ತುಕೊಂಡಿದೆ. ಬೇಸಿಗೆ ಸಮಯದಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚಿನ ನಿಯಂತ್ರಣಕ್ಕೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಎಲ್ಲೇ ಬೆಂಕಿ ಬಿದ್ರೂ ಅಧಿಕಾರಿಗಳ ಮೊಬೈಲ್​ಗೆ ಮೆಸೇಜ್: ಇದರಲ್ಲಿ ಪ್ರಮುಖವಾಗಿ ಅರಣ್ಯದಲ್ಲಿ ಯಾವುದೇ ಕಡೆ ಬೆಂಕಿ ಬಿದ್ದರೂ ಅಧಿಕಾರಿಗಳ ಮೊಬೈಲ್​ಗೆ ತಕ್ಷಣ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ. ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಅರಣ್ಯ ಇಲಾಖೆಯು ಕರ್ನಾಟಕ ರಿಮೋಟ್ ಸೆನ್ಸಿಂಗ್ ಏಜೆನ್ಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಏಜೆನ್ಸಿಯು ಸ್ಯಾಟಲೈಟ್ ಪಿಕ್ಚರ್​ಗಳನ್ನು ಆಧರಿಸಿ ಅರಣ್ಯದಲ್ಲಿ ಬೆಂಕಿ ಬಿದ್ದ ಪ್ರದೇಶದ ಬಗ್ಗೆ ಸಿಎಫ್, ಎಸಿಎಫ್, ಆರ್​ಎಫ್​ಒ ಹಾಗೂ ಡಿಆರ್​ಎಫ್​ಒಗಳ ಮೊಬೈಲ್​ಗಳಿಗೆ ತಕ್ಷಣ ಸಂದೇಶ ರವಾನಿಸಲಿದೆ. ಹೀಗೆ ಸಂದೇಶ ಬರುವುದರಿಂದ ಅರಣ್ಯಾಧಿಕಾರಿಗಳು ಎಚ್ಚೆತ್ತು ಆ ಪ್ರದೇಶಕ್ಕೆ ತಕ್ಷಣ ಧಾವಿಸಿ ಬೆಂಕಿ ನಂದಿಸಬಹುದು. ಬೆಂಕಿ ಹರಡದಂತೆ ಕ್ರಮಕೈಗೊಳ್ಳಬಹುದು.

ಒಂದು ವೇಳೆ ಬೆಂಕಿ ಆರದೇ ಇದ್ದರೂ ಆ ಬಗ್ಗೆಯೂ ಎಚ್ಚರಿಕೆ ಸಂದೇಶ ಬರಲಿದೆ. ಇಷ್ಟೇ ಅಲ್ಲದೆ ಬಂಡೀಪುರದ ನಡುವೆ ಹಾದು ಹೋಗುವ ರಸ್ತೆಗಳು ಅರಣ್ಯದಲ್ಲಿನ ಸಫಾರಿ ಮಾರ್ಗ, ಗೇಮ್ ರಸ್ತೆಗಳು ಸೇರಿದಂತೆ ಈ ಬಾರಿ 2500 ಕಿಲೋ ಮೀಟರ್‌ಗೂ ಹೆಚ್ಚು ಉದ್ದ ಬೆಂಕಿ ರೇಖೆ ನಿರ್ಮಿಸಲಾಗಿದೆ.

ಕೊಡಗು: ಇನ್ನು ಬಂಡೀಪುರದಂತೆ ಕೊಡಗಿನಲ್ಲೂ ಕಾಡ್ಗಿಚ್ಚಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಕೂಡಗಿನಲ್ಲೂ ರಿಮೋಟ್ ಸೆನ್ಸಿಂಗ್ ಮೂಲಕ ಮಾಹಿತಿ ಪಡೆಯಲಾಗುತ್ತೆ. ಒಂದು ವೇಳೆ‌ ಕಾಡಿನಲ್ಲಿ ಬೆಂಕಿ ಹೊತ್ತಿಕೊಂಡ್ರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊಬೈಲ್ ಮೆಸೇಜ್ ಹೋಗಲಿದೆ. ಹಾಗೇ ದಿನದ 24 ಗಂಟೆಯೂ ಅರಣ್ಯದ ಮೇಲೆ ಫೈರ್ ವಾಚರ್ಸ್ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಮುಗಿಲೆತ್ತರದ ವಾಚ್ ಟವರ್ ವಾಕಿಟಾಕಿ, ವಾಟ್ಸಪ್ ಗ್ರೂಪ್ ಮೂಲಕ ಕ್ಷಣ ಕ್ಷಣದ ಬೆಳವಣಿಗೆಯನ್ನೂ ಗಮನಿಸಲಾಗುತ್ತಿದೆ.

ಒಟ್ನಲ್ಲಿ, ಬೇಸಿಗೆಯ ಬಿಸಿಲಿಗೆ ಬೆಂದಿರೋ ಅರಣ್ಯಕ್ಕೆ ಕಾಡ್ಗಿಚ್ಚಿನ ಭಯ ಕಾಡ್ತಿದ್ದು, ವನ್ಯ ಪ್ರಾಣಿಗಳು ಆತಂಕದಲ್ಲಿವೆ. ಹೀಗಾಗಿ, ಕಳೆದ ಸಲ ನಡೆದ ದೊಡ್ಡ ಅನಾಹುತದಿಂದ ಎಚ್ಚೆತ್ತ ಅರಣ್ಯ ಇಲಾಖೆ ಈ ಸಲ ಅಂತಹ ಘಟನೆ ಆಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮತೆಗೆದುಕೊಂಡಿದೆ.