ಸಾಲ ಪಡೆದವರಿಂದಲೇ ನಿಂದನೆ ಆರೋಪ: ಹಿತರಕ್ಷಣಾ ವೇದಿಕೆ ಸದಸ್ಯೆ ಸೂಸೈಡ್!

ಕೊಡಗು: ಸಾಲ ಪಡೆದವರಿಂದಲೇ ಅವಾಚ್ಯ ಶಬ್ದಗಳಿಂದ ನಿಂದನೆ ಹಿನ್ನೆಲೆಯಲ್ಲಿ ಮಡಿಕೇರಿ ಹಿತರಕ್ಷಣಾ ವೇದಿಕೆ ಸದಸ್ಯೆ ಮಂಜುಳಾ(38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಮಂಜುಳಾ ಸಾಯುವ ಮುನ್ನ ಆಡಿಯೋ ರೆಕಾರ್ಡ್ ಮಾಡಿ ಮಗನಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿ ಸೂಸೈಡ್ ಮಾಡಿಕೊಂಡಿದ್ದಾರೆ. ಗಿರಿ ಎಂಬಾತನಿಗೆ 1.5 ಲಕ್ಷ ಹಣ ಮತ್ತು ಚಿನ್ನದ ಒಡವೆ ನೀಡಿದ್ದರು. ತಾಯಿ ಮುನಿಯಮ್ಮಳಿಂದ ಮಂಜುಳಾ ಹಣ ಕೊಡಿಸಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ನಿಂದನೆಯಿಂದ ಬೇಸತ್ತು ಮನೆಯಲ್ಲೇ […]

ಸಾಲ ಪಡೆದವರಿಂದಲೇ ನಿಂದನೆ ಆರೋಪ: ಹಿತರಕ್ಷಣಾ ವೇದಿಕೆ ಸದಸ್ಯೆ ಸೂಸೈಡ್!
Follow us
ಸಾಧು ಶ್ರೀನಾಥ್​
|

Updated on: Feb 21, 2020 | 1:45 PM

ಕೊಡಗು: ಸಾಲ ಪಡೆದವರಿಂದಲೇ ಅವಾಚ್ಯ ಶಬ್ದಗಳಿಂದ ನಿಂದನೆ ಹಿನ್ನೆಲೆಯಲ್ಲಿ ಮಡಿಕೇರಿ ಹಿತರಕ್ಷಣಾ ವೇದಿಕೆ ಸದಸ್ಯೆ ಮಂಜುಳಾ(38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಮಂಜುಳಾ ಸಾಯುವ ಮುನ್ನ ಆಡಿಯೋ ರೆಕಾರ್ಡ್ ಮಾಡಿ ಮಗನಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿ ಸೂಸೈಡ್ ಮಾಡಿಕೊಂಡಿದ್ದಾರೆ.

ಗಿರಿ ಎಂಬಾತನಿಗೆ 1.5 ಲಕ್ಷ ಹಣ ಮತ್ತು ಚಿನ್ನದ ಒಡವೆ ನೀಡಿದ್ದರು. ತಾಯಿ ಮುನಿಯಮ್ಮಳಿಂದ ಮಂಜುಳಾ ಹಣ ಕೊಡಿಸಿದ್ದರು. ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹೀಗಾಗಿ ನಿಂದನೆಯಿಂದ ಬೇಸತ್ತು ಮನೆಯಲ್ಲೇ ಮಂಜುಳಾ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ರವಿ, ಲತಾ, ಗಿರಿ ಎಂಬುವವರು ಕಾರಣ ಎಂದು ಆಡಿಯೋ ರೆಕಾರ್ಡ್ ಮಾಡಿದ್ದಾರೆ.

ಲತಾ, ರವಿ, ಗಿರಿ ಎಂಬುವವರ ಕಿರುಕುಳದಿಂದ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರೋಪಿಗಳನ್ನ ಬಂಧಿಸುವಂತೆ ಸಂಬಂಧಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.