ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಒಟಿಎಸ್​ಗೆ ಎರಡು ದಿನ ಬಾಕಿ: ಡಿ 1ರಿಂದ ದುಪ್ಪಟ್ಟು ದಂಡ ವಸೂಲಿ ಎಚ್ಚರಿಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2024 | 10:08 PM

ಬಿಬಿಎಂಪಿಯ ಆಸ್ತಿ ತೆರಿಗೆ ಬಾಕಿ ವಸೂಲಿಗೆ ನೀಡಲಾದ ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ಅವಕಾಶ ನವೆಂಬರ್ 30ಕ್ಕೆ ಮುಕ್ತಾಯವಾಗುತ್ತಿದೆ. ನವೆಂಬರ್ 30ರ ನಂತರ ದಂಡ ಮತ್ತು ಬಡ್ಡಿಯೊಂದಿಗೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ. 6381 ವಾಣಿಜ್ಯ ಮಳಿಗೆಗಳನ್ನು ಸೀಜ್ ಮಾಡಲಾಗಿದ್ದು, 82 ಸಾವಿರ ಬ್ಯಾಂಕ್ ಖಾತೆಗಳನ್ನು ಜೋಡಿಸಲಾಗಿದೆ.

ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಒಟಿಎಸ್​ಗೆ ಎರಡು ದಿನ ಬಾಕಿ: ಡಿ 1ರಿಂದ ದುಪ್ಪಟ್ಟು ದಂಡ ವಸೂಲಿ ಎಚ್ಚರಿಕೆ
ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಒಟಿಎಸ್​ಗೆ ಎರಡು ದಿನ ಬಾಕಿ: ಡಿ 1 ರಿಂದ ದುಪ್ಪಟ್ಟು ದಂಡ ವಸೂಲಿ ಎಚ್ಚರಿಕೆ
Follow us on

ಬೆಂಗಳೂರು, ನವೆಂಬರ್​ 28: ಬಿಬಿಎಂಪಿಯ (BBMP) ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವರಿಗೆ ನೀಡಿದ ಒನ್ ಟೈಮ್ ಸೆಟಲ್ ಮೆಂಟ್ ಅವಕಾಶ ಮುಗಿಯುವುದಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಸದ್ಯ ಅದೆಷ್ಟು ಭಾರಿ ನೋಟಿಸ್ ನೀಡಿದರೂ ಬಾಕಿ ತೆರೆಗೆ ವಸೂಲಿ ಮಾಡಲಾಗದೇ ಸುಸ್ತಾಗಿದ್ದ ಪಾಲಿಕೆ, ಇದೀಗ ಆಸ್ತಿ ತೆರಿಗೆ ಬಾಕಿದಾರರಿಗೆ ಒಟಿಎಸ್ ಅವಕಾಶ ಕೊಟ್ಟರೂ ಟಾರ್ಗೆಟ್ ರೀಚ್ ಆಗದೇ ಕಂಗಾಲಾಗಿದೆ. ಇತ್ತ ನವೆಂಬರ್ 30ಕ್ಕೆ ಸರ್ಕಾರ ನೀಡಿದ್ದ ಒಟಿಎಸ್ ಚಾನ್ಸ್ ಮುಕ್ತಾಯವಾಗ್ತಿದ್ದು, ಇನ್ನು ತೆರಿಗೆ ಪಾವತಿಸದವರಿಗೆ ಪಾಲಿಕೆ ಡಿಸೆಂಬರ್ 1 ರಿಂದ ದುಪ್ಪಟ್ಟು ಹೊರೆ ಬೀಳುವ ಎಚ್ಚರಿಕೆ ನೀಡಿದೆ.

ಒಟಿಎಸ್ ಅವಕಾಶ ಮುಗಿಯೋಕೆ ಇನ್ನೇರಡು ದಿನವಷ್ಟೇ ಬಾಕಿ

ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೇ ಕಳ್ಳಾಟವಾಡುತ್ತಿದ್ದವರ ವಿರುದ್ಧ ಪಾಲಿಕೆ ಸಮರ ಸಾರಿತ್ತು. ಇತ್ತ ಕಳೆದ ಎರಡ್ಮೂರು ತಿಂಗಳ ಹಿಂದೆ ಒಂದಷ್ಟು ತೆರಿಗೆದಾರರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದ ಪಾಲಿಕೆ, ಬಳಿಕ ಡಿಸಿಎಂ ಸೂಚನೆಯಂತೆ ಒನ್ ಟೈಮ್ ಸೆಟಲ್ ಮೆಂಟ್​ಗೆ ಅವಕಾಶ ಕೊಟ್ಟಿತ್ತು. ಸದ್ಯ ಆಸ್ತಿ ತೆರಿಗೆ ಬಾಕಿ ಪಾವತಿಗೆ ನೀಡಿದ್ದ ಒಟಿಎಸ್ ಅವಕಾಶ ಮುಗಿಯೋಕೆ ಇನ್ನೇರಡು ದಿನವಷ್ಟೇ ಬಾಕಿ ಉಳಿದಿದೆ. ಇತ್ತ ಇದುವರೆಗೆ 3,751ಕೋಟಿ ರೂಪಾಯಿಯಷ್ಟೇ ಬಾಕಿ ವಸೂಲಿ ಮಾಡಿರುವ ಪಾಲಿಕೆ, 4 ಕೋಟಿ ರೂ. ಟಾರ್ಗೆಟ್ ರೀಚ್ ಮಾಡೋಕೆ ಆಗಿಲ್ಲ. ಸದ್ಯ ಇದೀಗ ಯಾರೆಲ್ಲಾ ಇನ್ನೂ ಆಸ್ತಿ ತೆರಿಗೆ ಕಟ್ಟಿಲ್ಲ ಅವರಿಗೆ ದಂಡ ವಿಧಿಸುವುದರ ಜೊತೆಗೆ ಹಣ ವಸೂಲಿ ಮಾಡುವುದಾಗಿ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.​

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರು: ಹೊಸ ಕ್ರಮ ಕೈಗೊಳ್ಳಲು ಮುಂದಾದ ಬಿಬಿಎಂಪಿ

ಇನ್ನು ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ಆಸ್ತಿ ತೆರಿಗೆ ಮೇಲೆ ವಿಧಿಸಲಾಗುತ್ತಿದ್ದ ದುಪಟ್ಟು ದಂಡ ಹಾಗೂ ಬಡ್ಡಿಯನ್ನ ಈ ಯೋಜನೆಯಡಿ ರಿಯಾಯಿತಿಯನ್ನು ಎಂಟು ತಿಂಗಳು ನೀಡಲಾಗಿದೆ. ಪ್ರಸಕ್ತ ವರ್ಷದ ಆಸ್ತಿ ತೆರಿಗೆ ಪಾವತಿದಾರರಿಗೆ ನೀಡಲಾಗುವ ಶೇಕಡ 5ರಷ್ಟು ರಿಯಾಯಿತಿಯನ್ನ ಜೂನ್ ವರೆಗೆ ನೀಡಲಾಗಿತ್ತು.

ಇದೀಗ ಮಾರ್ಚ್‌ ವೇಳೆಗೆ 5,210 ಕೋಟಿ ರೂ. ವಸೂಲಿ ಮಾಡುವ ಗುರಿ ಹೊಂದಿರುವ ಪಾಲಿಕೆಗೆ ಇದೀಗ ಒಟಿಎಸ್ ಮುಕ್ತಾಯವಾಗೋಕೆ ಕೌಂಟ್ ಡೌನ್ ಶುರುವಾಗಿರೋದು ಬಾಕಿ ಹಣ ವಸೂಲಿ ಮಾಡುವ ಕ್ರಮಗಳ ಬಗ್ಗೆ ಚಿಂತೆ ತಂದಿಟ್ಟಿದೆ. ಸದ್ಯ ಈಗಾಗಲೇ ಹಲವು ತೆರಿಗೆಬಾಕಿದಾರರಿಗೆ ನೋಟಿಸ್ ನೀಡಿ ಸುಸ್ತಾಗಿರೋ ಪಾಲಿಕೆಗೆ ಇದೀಗ ಮಾರ್ಚ್ ಒಳಗೆ ಉಳಿದ ಬಾಕಿ ತೆರಿಗೆ ವಸೂಲಿಯ ಟಾಸ್ಕ್ ಎದುರಾಗಿದೆ.

ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿ ನೋಟಿಸ್

ಸದ್ಯ ಆಸ್ತಿ ತೆರಿಗೆ ಪಾವತಿ ಮಾಡದ ಕಾರಣಕ್ಕಾಗಿ ಈವರೆಗೆ 6381 ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕಿ ಸೀಜ್ ಮಾಡಿ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ. ಜತೆಗೆ ಅತಿ ಹೆಚ್ಚಿನ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ವಸತಿ ಹಾಗೂ ಇನ್ನಿತರೆ ಆಸ್ತಿಗಳ ಮಾಲೀಕರ 82 ಸಾವಿರ ಬ್ಯಾಂಕ್ ಖಾತೆಯನ್ನು ಬಿಬಿಎಂಪಿಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ. ಇದೀಗ ಒಟಿಎಸ್ ಅವಕಾಶ ಕೂಡ ಮುಗಿಯುತ್ತಿರೋದರಿಂದ ಇನ್ನೂ ತೆರಿಗೆ ಬಾಕಿ ಕಟ್ಟದವರ ವಿರುದ್ಧ ಪಾಲಿಕೆ ಮತ್ತೆ ಯಾವ ಕ್ರಮಕೈಗೊಳ್ಳುತ್ತೆ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.