ಕೆಪಿಸಿಸಿ ಕಾರ್ಯದರ್ಶಿ ವಿರುದ್ದ ಲೈಂಗಿಕ ಕಿರುಕುಳ ಆರೋಪ: ಖಾಸಗಿ ಶಾಲೆ ಶಿಕ್ಷಕಿಯಿಂದ ದೂರು
ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ತಮ್ಮ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಕೆಲ ಶಿಕ್ಷಕಿಯರು, ಸಿಬ್ಬಂದಿಗೂ ಕಿರುಕುಳ ನೀಡಲಾಗಿದ್ದು, ಛೇಂಬರ್‌ಗೆ ಕರೆದು ತನ್ನ ಜತೆ ಸಹಕರಿಸುವಂತೆ ಕೈಹಿಡಿದು ಎಳೆದಾಡಿ ಕೆಟ್ಟ ಪದಗಳಿಂದ ಗುರಪ್ಪನಾಯ್ಡು ನಿಂದಿಸಿರುವುದಾಗಿ ಆರೋಪ ಮಾಡಲಾಗಿದೆ.
ಬೆಂಗಳೂರು, ನವೆಂಬರ್ 28: ಕೆಪಿಸಿಸಿ ಕಾರ್ಯದರ್ಶಿ ಗುರಪ್ಪನಾಯ್ಡು ವಿರುದ್ದ ಶಿಕ್ಷಕಿಗೆ (teacher) ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಬಿಜಿಎಸ್ ಬ್ಲೂಮ್ ಫೀಲ್ಡ್ ಚೇರ್ಮನ್ ಆಗಿರುವ ಗುರಪ್ಪ ನಾಯ್ಡ ತ್ಯಾಗರಾಜನಗರದ ತಮ್ಮ ಖಾಸಗಿ ಶಾಲೆಯ ಶಿಕ್ಷಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಲಾಗಿದೆ. ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲೆಯಲ್ಲಿ ಕೆಲಸ ಮಾಡುವ ಕೆಲ ಶಿಕ್ಷಕಿಯರು, ಸಿಬ್ಬಂದಿಗೂ ಕಿರುಕುಳ ನೀಡಲಾಗಿದ್ದು, ಛೇಂಬರ್‌ಗೆ ಕರೆದು ತನ್ನ ಜತೆ ಸಹಕರಿಸುವಂತೆ ಕೈಹಿಡಿದು ಎಳೆದಾಡಿ ಕೆಟ್ಟ ಪದಗಳಿಂದ ಗುರಪ್ಪನಾಯ್ಡು ನಿಂದಿಸಿರುವುದಾಗಿ ಆರೋಪ ಮಾಡಲಾಗಿದೆ.
ಶೌಚಾಲಯಕ್ಕೆ ಬರುವ ಮಹಿಳೆಯರಿಗೆ ಪುಂಡರಿಂದ ಲೈಂಗಿಕ ಕಿರುಕುಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನರಗನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಪುಂಡರ ಹಾವಳಿ ಹೆಚ್ಚಾಗಿತ್ತು. ದಿನಪೂರ್ತಿ ಹೊಲದಲ್ಲಿ ಕೆಲಸ ಜಾನುವಾರುಗಳ ಹಾರೈಕೆ ಅಂತ ಕೆಲಸ ಮಾಡಿ ಮನೆಗೆ ಬರುವ ಜನರು ನಿದ್ದೆಗೆ ಜಾರ್ತಿದ್ದಂತೆ ಮನೆ ಬಳಿಗೆ ಬರುವ ಪುಂಡರು ಮನೆ ಬಾಗಿಲುಗಳನ್ನ ಹೊಡೆದು ಪರಾರಿ ಆಗಿದ್ದರಂತೆ.
ಇದನ್ನೂ ಓದಿ: ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಖಾಸಗಿ ಶಾಲೆ ಮಾಲೀಕ ಪೊಲೀಸ್ ವಶಕ್ಕೆ
ಇನ್ನೂ ಇದೇ ರೀತಿ ಇತ್ತೀಚಿಗೆ ದಿನಗಳಿಂದೆಯೇ ತಡರಾತ್ರಿ ಶೌಚಾಲಯಕ್ಕೆ ಹೋಗೋಕ್ಕೆ ಅಂತ ಮನೆಯಿಂದ ಹೊರಗಡೆ ಬಂದಿದ್ದ ಮಹಿಳೆಯ ಬಾಯನ್ನ ಹಿಂದಿನಿಂದ ಬಂದ ಕಿಡಿಗೇಡಿಗಳು ಮುಚ್ಚಿಕೊಂಡು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದರು. ಆದರೆ ಈ ವೇಳೆ ಮಹಿಳೆ ಸರಗಳ್ಳತನ ಮಾಡಲು ಬಿಡದಿದಕ್ಕೆ ಆಕೆಯ ಮೇಲೆ ಹಲ್ಲೆ ನಡೆಸಿದ ಖದೀಮರು ನಂತರ ಆಕೆಯ ಬಟ್ಟೆಗಳನ್ನ ಹರಿದು ಪ್ರಜ್ನೆ ತಪ್ಪಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದರು.
ಒಟ್ಟಾರೆ ರಾತ್ರಿಯಾಗ್ತಿದ್ದಂತೆ ಗ್ರಾಮಕ್ಕೆ ಎಂಟ್ರಿ ಕೊಡುವ ಕಿಡಿಗೇಡಿಗಳು ಮಾಡ್ತಿರುವ ಪುಂಡಾಟಿಕೆಗೆ ಮಹಿಳೆಯರು ಸೇರಿದಂತೆ ಪುರುಷರು ಸಹ ಬೆಚ್ಚಿ ಬಿದ್ದಿದ್ದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಗ್ರಾಮಸ್ಥರು ದೂರು ನೀಡಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.