ಕ್ವಾರಂಟೈನ್​ಗೆ ಒಪ್ಪದ 25 ಮಂದಿ ಬೆಂಗಳೂರಿನಿಂದ ದೆಹಲಿಗೆ ವಾಪಸ್

ಬೆಂಗಳೂರು: ಕ್ವಾರಂಟೈನ್​ಗೆ ಒಪ್ಪದ ಹಿನ್ನೆಲೆಯಲ್ಲಿ 25 ಜನರನ್ನು ಬಂದ ಊರುಗಳಿಗೆ ವಾಪಸ್ ಕಳುಹಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು 25 ಮಂದಿಗೆ ರಿಟರ್ನ್ ಟಿಕೆಟ್ ನೀಡಿ ಊರುಗಳಿಗೆ ಕಳುಹಿಸಿದ್ದಾರೆ. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದವರಲ್ಲಿ ಕೆಲವರು ಹೋಟೆಲ್ ಕ್ವಾರಂಟೈನ್​ಗೆ ವಿರೋಧಿಸಿದ್ರು. ಕ್ವಾರಂಟೈನ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪ್ರತಿಭಟನೆ ನಡೆಸಿದ್ರು. ವಾಪಸ್ ನಮ್ಮೂರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ರು. ಹೀಗಾಗಿ ಬಿಬಿಎಂಪಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ನಿನ್ನೆ ಬೆಂಗಳೂರಿನಿಂದ ದೆಹಲಿಗೆ ಹೋದ ಶ್ರಮಿಕ್ ರೈಲಿನಲ್ಲಿ […]

ಕ್ವಾರಂಟೈನ್​ಗೆ ಒಪ್ಪದ 25 ಮಂದಿ ಬೆಂಗಳೂರಿನಿಂದ ದೆಹಲಿಗೆ ವಾಪಸ್
ಸಾಧು ಶ್ರೀನಾಥ್​

Updated on: May 15, 2020 | 11:44 AM

ಬೆಂಗಳೂರು: ಕ್ವಾರಂಟೈನ್​ಗೆ ಒಪ್ಪದ ಹಿನ್ನೆಲೆಯಲ್ಲಿ 25 ಜನರನ್ನು ಬಂದ ಊರುಗಳಿಗೆ ವಾಪಸ್ ಕಳುಹಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು 25 ಮಂದಿಗೆ ರಿಟರ್ನ್ ಟಿಕೆಟ್ ನೀಡಿ ಊರುಗಳಿಗೆ ಕಳುಹಿಸಿದ್ದಾರೆ.

ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದವರಲ್ಲಿ ಕೆಲವರು ಹೋಟೆಲ್ ಕ್ವಾರಂಟೈನ್​ಗೆ ವಿರೋಧಿಸಿದ್ರು. ಕ್ವಾರಂಟೈನ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪ್ರತಿಭಟನೆ ನಡೆಸಿದ್ರು. ವಾಪಸ್ ನಮ್ಮೂರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ರು. ಹೀಗಾಗಿ ಬಿಬಿಎಂಪಿ ಹಾಗೂ ರೈಲ್ವೇ ಇಲಾಖೆ ಅಧಿಕಾರಿಗಳು ನಿನ್ನೆ ಬೆಂಗಳೂರಿನಿಂದ ದೆಹಲಿಗೆ ಹೋದ ಶ್ರಮಿಕ್ ರೈಲಿನಲ್ಲಿ 25 ಮಂದಿಯನ್ನು ಸಿಕಂದರಾಬಾದ್​ಗೆ ವಾಪಸ್ ಕಳುಹಿಸಿದ್ದಾರೆ.

Published On - 8:38 am, Fri, 15 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us