ರಾಮನಗರ: ಕೊರೊನಾ ಲಾಕ್‌ಡೌನ್ ಮಧ್ಯೆಯೂ ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಅದ್ಧೂರಿಯಾಗಿ ಜಾತ್ರೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾರಮ್ಮ ದೇವಸ್ಥಾನದ ಅರ್ಚಕನ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣೆಗೆಯಾಗಿದೆ.
ಕೊಳಗೊಂಡನಹಳ್ಳಿಯಲ್ಲಿ ನಡೆದ ಜಾತ್ರೆಗೆ ಅಲ್ಲಿನ ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್.ಸಿ ಕಲ್ಮತ್ ಅವರ ಬಳಿ ಅನುಮತಿ ಪಡೆದಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅತಿ ಹೆಚ್ಚು ಜನ ಸೇರಲು ಹಾಗೂ ಜಾತ್ರೆ ನಡೆಸಲು ಅನುಮತಿ ನೀಡಿದ್ದಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತಹಶೀಲ್ದಾರ್ ಅವರ ವರದಿಯ ಹಿನ್ನೆಲೆಯಲ್ಲಿ ರಾಮನಗರ ಉಪ ಆಯುಕ್ತರು ಎನ್.ಸಿ ಕಲ್ಮತ್ ಅವರನ್ನು ಅಮಾನತುಗೊಳಿಸಿದ್ದಾರೆ.