ಅಕ್ರಮ-ಸಕ್ರಮ: ಬೆಂಗಳೂರು ನಿಮ್ಮ ಅಪ್ಪಂದಾ? ಸಿಎಂ ಮುಂದೆ ಕಿತ್ತಾಡಿಕೊಂಡ್ರು

ಬೆಂಗಳೂರು: ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಕ್ರಮ-ಸಕ್ರಮ ಜಾರಿ ವಿಚಾರವಾಗಿ ಇಬ್ಬರು ಹಿರಿಯ ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಕ್ಯಾಬಿನೆಟ್ ಸಭೆ ಅನ್ನೋದನ್ನೂ ಮರೆತು ಬೆಂಗಳೂರು ಯಾರ ಅಪ್ಪಂದು..? ಬೆಂಗಳೂರು ನಿಮ್ಮ ಅಪ್ಪಂದಾ..? ನಮ್ಮ ಅಪ್ಪಂದಾ..? ನಿನಗೇನಾದರೂ ಗೊತ್ತೇನಯ್ಯಾ ಬೆಂಗಳೂರು ಕಷ್ಟ..? ಎಂದು ಇಬ್ಬರು ಮಹಾ ನಾಯಕರು ಟಾಕ್ ವಾರ್ ನಡೆಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ ನಡುವೆ ಮಾತಿನ ಚಕಮಕಿಯಾಗಿದೆ. ಬೆಂಗಳೂರು ಕಷ್ಟ ನಮಗಷ್ಟೇ ಗೊತ್ತು ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಈ […]

ಅಕ್ರಮ-ಸಕ್ರಮ: ಬೆಂಗಳೂರು ನಿಮ್ಮ ಅಪ್ಪಂದಾ? ಸಿಎಂ ಮುಂದೆ ಕಿತ್ತಾಡಿಕೊಂಡ್ರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us
ಸಾಧು ಶ್ರೀನಾಥ್​
|

Updated on:May 15, 2020 | 12:11 PM

ಬೆಂಗಳೂರು: ಕೊರೊನಾ ಸಂಕಷ್ಟ ಸಂದರ್ಭದಲ್ಲೂ ಅಕ್ರಮ-ಸಕ್ರಮ ಜಾರಿ ವಿಚಾರವಾಗಿ ಇಬ್ಬರು ಹಿರಿಯ ಸಚಿವರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಕ್ಯಾಬಿನೆಟ್ ಸಭೆ ಅನ್ನೋದನ್ನೂ ಮರೆತು ಬೆಂಗಳೂರು ಯಾರ ಅಪ್ಪಂದು..? ಬೆಂಗಳೂರು ನಿಮ್ಮ ಅಪ್ಪಂದಾ..? ನಮ್ಮ ಅಪ್ಪಂದಾ..? ನಿನಗೇನಾದರೂ ಗೊತ್ತೇನಯ್ಯಾ ಬೆಂಗಳೂರು ಕಷ್ಟ..? ಎಂದು ಇಬ್ಬರು ಮಹಾ ನಾಯಕರು ಟಾಕ್ ವಾರ್ ನಡೆಸಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಜೆ.ಸಿ. ಮಾಧುಸ್ವಾಮಿ ನಡುವೆ ಮಾತಿನ ಚಕಮಕಿಯಾಗಿದೆ. ಬೆಂಗಳೂರು ಕಷ್ಟ ನಮಗಷ್ಟೇ ಗೊತ್ತು ಎಂದು ಸಚಿವ ಸೋಮಣ್ಣ ಹೇಳಿದ್ದಾರೆ. ಈ ವೇಳೆ ಬೆಂಗಳೂರು ಏನು ನಿಮ್ಮಪ್ಪಂದಾ, ಬೆಂಗಳೂರು ಎಲ್ಲರದ್ದು ಕಾನೂನು ವಿಚಾರ ಏನಿದೆ ಅದನ್ನು ಹೇಳುತ್ತಿದ್ದೇನೆ ಎಂದು ಸೋಮಣ್ಣ ವಿರುದ್ಧ ಸಚಿವ ಮಾಧುಸ್ವಾಮಿ ನಿಗಿನಿಗಿ ಕೆಂಡಕಾರಿದ್ದಾರೆ.

ಸೋಮಣ್ಣ-ಮಾಧುಸ್ವಾಮಿ ಇಬ್ಬರ ಕಿತ್ತಾಟದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಕ್ಕಾಬಿಕ್ಕಿಯಾಗಿದ್ದಾರೆ. ಈ ರೀತಿ ಕಿತ್ತಾಡಿದ್ರೆ ಸರ್ಕಾರದ ಇಮೇಜ್ ಏನಾಗಬೇಕು? ಹಿರಿಯ ಸಚಿವರೇ ಕಿತ್ತಾಡ್ತಿದ್ದಾರೆ ಅಂತಾ ಜನ ಆಡಿಕೊಳ್ತಾರೆ. ಜಗಳ ನಿಲ್ಲಿಸಿ ಸುಮ್ಮನಿರುವಂತೆ ಬಿಎಸ್​ವೈ ಪರಿಪರಿಯಾಗಿ ಬೇಡಿಕೊಂಡರು. ಯಡಿಯೂರಪ್ಪ ರಿಕ್ವೆಸ್ಟ್​ಗೂ ಹಿರಿಯ ಸಚಿವರು ಕಿವಿಗೊಡಲಿಲ್ಲ. ಕೊನೆಗೆ ಇಬ್ಬರ ಜಗಳದಲ್ಲಿ ಮೂಕ ಪ್ರೇಕ್ಷಕನಾಗಿ ಸುಮ್ಮನೆ ಕುಳಿತರು.

Published On - 11:32 am, Fri, 15 May 20