ರಾಜಧಾನಿ ಬೆಂಗಳೂರಿನಲ್ಲಿ 13 ಕೊರೊನಾ ಕೇಸ್ ಪತ್ತೆ, ಬೇರೆ ಕಡೆ ಎಷ್ಟು?
ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಆರ್ಭಟ ಕಮ್ಮಿಯಾಗುತ್ತಲೇ ಇಲ್ಲ. ಕ್ರೂರಿಯ ರುದ್ರ ನರ್ತನಕ್ಕೆ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 45 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 13 ಕೇಸ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡ 16, ಉಡುಪಿ 5, ಹಾಸನ 3, ಬೀದರ್ 3, ಚಿತ್ರದುರ್ಗ 2, ಶಿವಮೊಗ್ಗ, ಕೋಲಾರ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ 1 ಕೇಸ್ ದೃಢಪಟ್ಟಿದೆ. ಇದುವರೆಗೂ ಕರ್ನಾಟಕದಲ್ಲಿ […]
ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಆರ್ಭಟ ಕಮ್ಮಿಯಾಗುತ್ತಲೇ ಇಲ್ಲ. ಕ್ರೂರಿಯ ರುದ್ರ ನರ್ತನಕ್ಕೆ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ. ಇಂದು ರಾಜ್ಯದಲ್ಲಿ ಹೊಸದಾಗಿ 45 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1032ಕ್ಕೆ ಏರಿಕೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಹೊಸದಾಗಿ 13 ಕೇಸ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡ 16, ಉಡುಪಿ 5, ಹಾಸನ 3, ಬೀದರ್ 3, ಚಿತ್ರದುರ್ಗ 2, ಶಿವಮೊಗ್ಗ, ಕೋಲಾರ, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ 1 ಕೇಸ್ ದೃಢಪಟ್ಟಿದೆ. ಇದುವರೆಗೂ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 35 ಜನರು ಬಲಿಯಾಗಿದ್ದು, 476 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ
ಶಿವಾಜಿನಗರಕ್ಕೆ ಹೌಸ್ ಕೀಪರ್ ಕಂಟಕವಾಗಿದ್ದು, ಸೋಂಕಿತ 653ರ ಸಂಪರ್ಕದಲಿದ್ದ 11 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 1017, 1018, 1019, 1020, 1021, 1022, 1023, 1024, 1025, 1026, 1027ನೇ ಸೋಂಕಿತರಿಗೆ ವೈರಸ್ ಅಟ್ಯಾಕ್ ಆಗಿದೆ. ಸೋಂಕಿತ 653ರ ಪ್ರಾಥಮಿಕ ಸಂಪರ್ಕದಲ್ಲಿದ್ದ 72 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು.
Published On - 12:37 pm, Fri, 15 May 20