ಮೆಕ್ಕೆಜೋಳ ಬೆಳೆಗಾರರಿಗೆ ಪ್ಯಾಕೇಜ್ ಘೋಷಣೆ: ಸಿಎಂ ಬತ್ತಳಿಕೆಯಲ್ಲಿ ಏನೇನಿದೆ?

ಮೆಕ್ಕೆಜೋಳ ಬೆಳೆಗಾರರಿಗೆ ಪ್ಯಾಕೇಜ್ ಘೋಷಣೆ: ಸಿಎಂ ಬತ್ತಳಿಕೆಯಲ್ಲಿ ಏನೇನಿದೆ?

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲು ಸಾಲಾಗಿ ಆರ್ಥಿಕ ಪ್ಯಾಕೇಜ್​ಗಳನ್ನು ಕೊಡಮಾಡುತ್ತಿವೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಹಿಂದೆ ಬಿದ್ದಿಲ್ಲ. ಈಗಾಗಲೇ ಎರಡ್ಮೂರು ಪ್ಯಾಕೇಜ್​ಗಳನ್ನು ಘೋಷಿಸಿದ್ದು, ಇದೀಗ ಮತ್ತೊಂದು ಕೊಡುಗೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರ ಸುದ್ದಿಗೋಷ್ಠಿ ವಿವರ ಹೀಗಿದೆ. ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂ: ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಆದರೂ ಮೆಕ್ಕೆಜೋಳ ಬೆಳಗಾರರಿಗೆ ಲಾಭ ಸಿಕ್ಕಿಲ್ಲ. ನಮ್ಮಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆಗಾರರು ಇದ್ದಾರೆ. ಮೆಕ್ಕೆಜೋಳ ಬೆಳೆಗಾರರಿಗೆ ತಲಾ […]

sadhu srinath

|

May 15, 2020 | 4:34 PM

ಬೆಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲು ಸಾಲಾಗಿ ಆರ್ಥಿಕ ಪ್ಯಾಕೇಜ್​ಗಳನ್ನು ಕೊಡಮಾಡುತ್ತಿವೆ. ಇದರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಹಿಂದೆ ಬಿದ್ದಿಲ್ಲ. ಈಗಾಗಲೇ ಎರಡ್ಮೂರು ಪ್ಯಾಕೇಜ್​ಗಳನ್ನು ಘೋಷಿಸಿದ್ದು, ಇದೀಗ ಮತ್ತೊಂದು ಕೊಡುಗೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರ ಸುದ್ದಿಗೋಷ್ಠಿ ವಿವರ ಹೀಗಿದೆ.

ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂ:

ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಆದರೂ ಮೆಕ್ಕೆಜೋಳ ಬೆಳಗಾರರಿಗೆ ಲಾಭ ಸಿಕ್ಕಿಲ್ಲ. ನಮ್ಮಲ್ಲಿ 10 ಲಕ್ಷ ಮೆಕ್ಕೆಜೋಳ ಬೆಳೆಗಾರರು ಇದ್ದಾರೆ. ಮೆಕ್ಕೆಜೋಳ ಬೆಳೆಗಾರರಿಗೆ ತಲಾ 5 ಸಾವಿರ ರೂಪಾಯಿ ನೀಡಲಾಗುವುದು. ಇದರಿಂದ 500 ಕೋಟಿ ರೂಪಾಯಿ ಹೊರೆಯಾಗುತ್ತದೆ. ಆದ್ರೆ ಇದರಿಂದ ಮೆಕ್ಕೆಜೋಳ ಬೆಳೆಗಾರರಿಗೆ ತೃಪ್ತಿಯಾಗುತ್ತದೆ.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ:

40,250 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ. ನೀಡಲಾಗುತ್ತೆ. ಸಹಕಾರ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುತ್ತೇವೆ. ಇದಕ್ಕೆ ಹನ್ನೆರಡೂವರೆ ಸಾವಿರ ಕೋಟಿ ರೂಪಾಯಿಯಾಗುತ್ತದೆ. ಕುರಿ, ಮೇಕೆ ಮೃತಪಟ್ಟರೆ 5 ಸಾವಿರ ರೂಪಾಯಿ ಪರಿಹಾರ ನೀಡುತ್ತೇವೆ. ಈ ಹಿಂದೆ ನೀಡಲಾಗುತ್ತಿದ್ದ ಪರಿಹಾರವನ್ನು ಮುಂದುವರಿಸಿದ್ದೇವೆ.

ಇನ್ಯಾವ ವರ್ಗಕ್ಕೂ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ:

ಪ್ಯಾಕೇಜ್​ಗೆ ಇನ್ನಷ್ಟು ಶ್ರಮಿಕ ವರ್ಗವನ್ನ ಸೇರಿಸಬೇಕು ಅನ್ನೋ ಬೇಡಿಕೆ ಬಂದಿದೆ. ಆದ್ರೆ ಇನ್ಯಾವ ವರ್ಗಕ್ಕೂ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ. ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಇನ್ಯಾವ ವರ್ಗಕ್ಕೂ ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ. ತನ್ನ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಎಲ್ಲವನ್ನೂ ಮಾಡಿದ್ದೇನೆ. ಮುಂದೆ ಮತ್ತಷ್ಟು ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.

Follow us on

Related Stories

Most Read Stories

Click on your DTH Provider to Add TV9 Kannada