ಪೊಲೀಸರಿಗೆ ತಲೆನೋವಾದ ದೇಗುಲಗಳ ಸರಣಿ ಕಳ್ಳತನ! ತಮಿಳುನಾಡು ಕಳ್ಳರ ಕೈವಾಡ?

ಸಾಧು ಶ್ರೀನಾಥ್​

|

Updated on:May 15, 2020 | 3:19 PM

ಆನೇಕಲ್: ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳು ಬಂದ್ ಆಗಿವೆ. ದೇವಾಲಯಗಳಿಗೆ ಪ್ರವೇಶವಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಖದೀಮರು ಸರಣಿ ಕಳ್ಳತನ ಮಾಡಿ ತಮ್ಮ ಕೈಚಳಕ ತೋರಿಸಿದ ಘಟನೆ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆರೆಟಿಗನಬೆಲೆ ಬಳಿ ನಡೆದಿದೆ. ಖದೀಮರು ಗ್ರಾಮದಲ್ಲಿರುವ ಮಾರಮ್ಮ ದೇವಾಲಯ ಹಾಗೂ ಶನೇಶ್ವರ ದೇವಾಲಯಗಳ ಬಾಗಿಲು ಮುರಿದು ಉತ್ಸವ ಮೂರ್ತಿಗಳಿಗೆ ಹಾಕಿದ್ದ ಆಭರಣ, ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ ಆಗಿರುವುದರಿಂದಲೂ ಕರ್ನಾಟಕದ ಪೊಲೀಸರಿಗೆ ಈ ಕಳ್ಳತನ ಪ್ರಕರಣ ತಲೆನೋವಾಗಿ […]

ಪೊಲೀಸರಿಗೆ ತಲೆನೋವಾದ ದೇಗುಲಗಳ ಸರಣಿ ಕಳ್ಳತನ! ತಮಿಳುನಾಡು ಕಳ್ಳರ ಕೈವಾಡ?

ಆನೇಕಲ್: ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲಾ ದೇವಾಲಯಗಳು ಬಂದ್ ಆಗಿವೆ. ದೇವಾಲಯಗಳಿಗೆ ಪ್ರವೇಶವಿಲ್ಲ. ಇದೇ ಸಮಯವನ್ನು ಬಳಸಿಕೊಂಡ ಖದೀಮರು ಸರಣಿ ಕಳ್ಳತನ ಮಾಡಿ ತಮ್ಮ ಕೈಚಳಕ ತೋರಿಸಿದ ಘಟನೆ ಸಮಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೆರೆಟಿಗನಬೆಲೆ ಬಳಿ ನಡೆದಿದೆ.

ಖದೀಮರು ಗ್ರಾಮದಲ್ಲಿರುವ ಮಾರಮ್ಮ ದೇವಾಲಯ ಹಾಗೂ ಶನೇಶ್ವರ ದೇವಾಲಯಗಳ ಬಾಗಿಲು ಮುರಿದು ಉತ್ಸವ ಮೂರ್ತಿಗಳಿಗೆ ಹಾಕಿದ್ದ ಆಭರಣ, ಹುಂಡಿಯಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ ಆಗಿರುವುದರಿಂದಲೂ ಕರ್ನಾಟಕದ ಪೊಲೀಸರಿಗೆ ಈ ಕಳ್ಳತನ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.

ಅಲ್ಲದೆ ತಮಿಳುನಾಡಿನ ಕಳ್ಳರನ್ನು ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪದೇಪದೇ ದೇವಾಲಯಗಳ ಕಳ್ಳತನ ನಡೆಯುತ್ತಲೇ ಇದೆ. ಸದ್ಯ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada