ಬೆಂಗಳೂರು: ಕೊರೊನಾ ಹಾಟ್ಸ್ಪಾಟ್ ಆಗಿರುವ ಹೊಂಗಸಂದ್ರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಹೊಂಗಸಂದ್ರದ ಮಣಿಪಾಲ್ ಕೌಂಟಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಕ್ವಾರಂಟೈನ್ನಲ್ಲಿದ್ದವರಿಗೆ ನಡುಕ ಶುರುವಾಗಿದೆ. ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ: ಮೃತ ಮಹಿಳೆಗೆ ಲೋ ಬಿಪಿ ಇತ್ತು. ಹೀಗಾಗಿ ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಮೇ 19ಕ್ಕೆ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದು, ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ ಬರಲಿದೆ. ಕೊರೊನಾ ಪಾಸಿಟಿವ್ ಬಂದ್ರೆ ಅಧಿಕಾರಿಗಳಿಗೆ ಮತ್ತಷ್ಟು ಟೆನ್ಷನ್ […]
ಬೆಂಗಳೂರು: ಕೊರೊನಾ ಹಾಟ್ಸ್ಪಾಟ್ ಆಗಿರುವ ಹೊಂಗಸಂದ್ರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಹೊಂಗಸಂದ್ರದ ಮಣಿಪಾಲ್ ಕೌಂಟಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಕ್ವಾರಂಟೈನ್ನಲ್ಲಿದ್ದವರಿಗೆ ನಡುಕ ಶುರುವಾಗಿದೆ.
ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ:
ಮೃತ ಮಹಿಳೆಗೆ ಲೋ ಬಿಪಿ ಇತ್ತು. ಹೀಗಾಗಿ ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಮೇ 19ಕ್ಕೆ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದು, ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ ಬರಲಿದೆ. ಕೊರೊನಾ ಪಾಸಿಟಿವ್ ಬಂದ್ರೆ ಅಧಿಕಾರಿಗಳಿಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಲಿದೆ. ವರದಿ ಏನು ಹೇಳುತ್ತೆ ಎಂದು ಕಾದು ನೋಡ ಬೇಕಿದೆ.