ಲಂಚ ಪಡೆದ BBMP ಹಿರಿಯ ಅರೋಗ್ಯಾಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Dec 12, 2020 | 10:42 AM

ಎಣ್ಣೆ ಗಿರಣಿ ತೆರೆಯಲು ಒರ್ವ ವ್ಯಕ್ತಿ ದಾಸಹಳ್ಳಿ ವಲಯದ ಬಿಬಿಎಂಪಿ ಕಛೇರಿಯಲ್ಲಿ ಅರ್ಜಿ ಹಾಕಿದ್ದರು. ಶೀಘ್ರವಾಗಿ ಕೆಲಸ ಅಗಬೇಕು ಎಂದರೆ ಲಂಚ ನೀಡುವಂತೆ ಪ್ರವೀಣ್ ಕುಮಾರ್ ಒತ್ತಾಯಿಸಿದ್ದು, ಅರ್ಜಿದಾರನಿಂದ ಮೊದಲು ಮೂರು ಸಾವಿರ ಹಣ ಪಡೆದಿದ್ದರು.

ಲಂಚ ಪಡೆದ BBMP ಹಿರಿಯ ಅರೋಗ್ಯಾಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಅರೆಸ್ಟ್
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ದಾಸಹಳ್ಳಿ ವಲಯದ ಬಿಬಿಎಂಪಿ ಹಿರಿಯ ಅರೋಗ್ಯ ಅಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಅನ್ನು ಲಂಚ ಪಡೆದ ಆರೋಪದಡಿ ಎಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಎಣ್ಣೆ ಗಿರಣಿ ತೆರೆಯಲು ಒರ್ವ ವ್ಯಕ್ತಿ ದಾಸರಹಳ್ಳಿ ವಲಯದ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಹಾಕಿದ್ದರು. ಶೀಘ್ರವಾಗಿ ಕೆಲಸ ಅಗಬೇಕು ಎಂದರೆ ಲಂಚ ನೀಡುವಂತೆ ಪ್ರವೀಣ್ ಕುಮಾರ್ ಒತ್ತಾಯಿಸಿದ್ದು, ಅರ್ಜಿದಾರನಿಂದ ಮೊದಲು ಮೂರು ಸಾವಿರ ಹಣ ಪಡೆದಿದ್ದರು.

ಒಟ್ಟು 12 ಸಾವಿರ ಲಂಚ ನೀಡುವಂತೆ ನಿಸರ್ಗ ನಿಧಿ ಎಣ್ಣೆ ಗಿರಣಿ ಮಾಲಿಕನಿಗೆ ಒತ್ತಾಯ ಹೇರಿದ್ದ ಹಿರಿಯ ಅರೋಗ್ಯ ಅಧಿಕಾರಿ ಪ್ರವೀಣ್ ಏಳು ಸಾವಿರ ಲಂಚದ ಹಣ ಪಡೆಯುವ ವೇಳೆಯಲ್ಲಿ ಟ್ರಾಪ್ ಮಾಡಿ ಸಾಕ್ಷಿ ಸಮೇತ ಎಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಹೊಂಡ-ಗುಂಡಿಗಳಿಂದ ಅಪಘಾತವಾದರೆ BBMP ನೀಡುತ್ತೆ ಪರಿಹಾರ; ಇದನ್ನು ಪಡೆಯೋದು ಹೇಗೆ?