ಸಾರ್​..BMTC ಬಸ್​ಗಳನ್ನ ಮೆಕ್ಯಾನಿಕ್​ಗಳು ಚಲಾಯಿಸುತ್ತಿದ್ದಾರೆ -ಸಾರಿಗೆ ನೌಕರರ ಆರೋಪ

ಬಸ್​ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಚಾಲಕರು ಯಾರೂ ಬಸ್ ಚಾಲನೆ ಮಾಡುತ್ತಿಲ್ಲ. ಮೆಕ್ಯಾನಿಕ್​ಗಳು BMTC ಬಸ್​ಗಳನ್ನು ಚಲಾಯಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಸಾರಿಗೆ ನೌಕರರು ಹೇಳಿದ್ದಾರೆ.

ಸಾರ್​..BMTC ಬಸ್​ಗಳನ್ನ ಮೆಕ್ಯಾನಿಕ್​ಗಳು ಚಲಾಯಿಸುತ್ತಿದ್ದಾರೆ -ಸಾರಿಗೆ ನೌಕರರ ಆರೋಪ
‘ಸಾರ್​.. ಮೆಕ್ಯಾನಿಕ್​ಗಳು BMTC ಬಸ್​ಗಳನ್ನು ಚಲಾಯಿಸುತ್ತಿದ್ದಾರೆ’
KUSHAL V

|

Dec 12, 2020 | 9:47 AM

ಬೆಂಗಳೂರು: ಸದ್ಯ, ಬೆಳಗ್ಗೆಯಿಂದ 75 ಬಸ್​ಗಳು ಸಂಚಾರ ಆರಂಭಿಸಿವೆ ಎಂದು BMTC ಸಂಸ್ಥೆ ಮಾಹಿತಿ ನೀಡಿದೆ. BMTC ಸಾರಿಗೆ ನೌಕರರ ಧರಣಿ ನಡುವೆಯೂ 75 ಬಸ್ ಸಂಚಾರ ನಡೆಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಇತ್ತ, ಮೆಜೆಸ್ಟಿಕ್ ಬಸ್​​ ಸ್ಟ್ಯಾಂಡ್​ಗೆ ಜಂಬೂಸವಾರಿ ದಿಣ್ಣೆಯಿಂದ 4ನೇ ಬಸ್ ಆಗಮಿಸಿತು. ಜೊತೆಗೆ, ಎಲ್ಲಾ ಡಿಪೋಗಳಿಂದ ಬಸ್​ಗಳನ್ನ ಆಪರೇಟ್ ಮಾಡಲು ಡಿಪೋ ಮ್ಯಾನೇಜರ್​ಗಳಿಗೆ ಸೂಚನೆ ನೀಡಲಾಗಿದೆ. ಆಯಾ ಡಿಪೋ ಮ್ಯಾನೇಜರ್​ಗಳಿಂದ ಚಾಲಕ, ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಈ ನಡುವೆ, ಬಸ್​ಗಳನ್ನ ಓಡಿಸಲು ಕೆಲ ಚಾಲಕರು ಹಾಗೂ ನಿರ್ವಾಹಕರು ಮುಂದಾದರು.

ಸದ್ಯ, ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭವಾಗಿದ್ದು ದೀಪಾಂಜಲಿನಗರದಿಂದ ಸುಮನಹಳ್ಳಿಗೆ ಬಸ್​ ಸೇವೆ ಶುರುಮಾಡಲಾಗಿದೆ. ಪ್ರತಿ ಬಸ್​ನಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯನ್ನು ಕೂರಿಸಿ ಭದ್ರತೆ ಒದಗಿಸಲಾಗಿದೆ.

‘ಮೆಕ್ಯಾನಿಕ್​ಗಳು BMTC ಬಸ್​ಗಳನ್ನು ಚಲಾಯಿಸುತ್ತಿದ್ದಾರೆ’ ಇತ್ತ, ಬಸ್​ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಚಾಲಕರು ಯಾರೂ ಬಸ್ ಚಾಲನೆ ಮಾಡುತ್ತಿಲ್ಲ. ಮೆಕ್ಯಾನಿಕ್​ಗಳು BMTC ಬಸ್​ಗಳನ್ನು ಚಲಾಯಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಸಾರಿಗೆ ನೌಕರರು ಹೇಳಿದ್ದಾರೆ. ಜೊತೆಗೆ, ನಮ್ಮ ವಿರುದ್ಧ ಎಸ್ಮಾ ಜಾರಿ ಮಾಡಿದ್ರೂ ನಾವು ಎದುರಿಸ್ತೀವಿ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸ್ತೀವಿ ಎಂದು ಸ್ಯಾಲರಿ ಸ್ಲಿಪ್ ಕೈಯಲ್ಲಿ ಹಿಡಿದು ಸಿಬ್ಬಂದಿ ಯಶವಂತಪುರ ಡಿಪೋ ಬಳಿ ಪ್ರತಿಭಟನೆ ಮುಂದುವರಿಸಿದರು.

ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರದ ಮಾಸ್ಟರ್ ​ಪ್ಲ್ಯಾನ್: ರೆಡಿಯಾಯ್ತು 2 ತಂತ್ರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada