ವೇತನ ನೀಡದ್ದಕ್ಕೆ ಕಚೇರಿ ಧ್ವಂಸ: ನರಸಾಪುರದ iPhone ತಯಾರಿಕಾ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ

ವೇತನ ನೀಡಿಲ್ಲ ಎಂದು ಆರೋಪ ಮಾಡಿ ಕಂಪನಿ ಆವರಣದಲ್ಲಿ ಕಾರ್ಮಿಕರು ದಾಂಧಲೆ ನಡೆಸಿರುವ ಘಟನೆ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ ನಡೆದಿದೆ. ತೈವಾನ್​ ಮೂಲದ ವಿಸ್ಟ್ರಾನ್​ ಕಂಪನಿ ದೇಶದಲ್ಲಿ iPhone ತಯಾರಿಕೆಯಲ್ಲಿ ತೊಡಗಿದೆ.

ವೇತನ ನೀಡದ್ದಕ್ಕೆ ಕಚೇರಿ ಧ್ವಂಸ: ನರಸಾಪುರದ iPhone ತಯಾರಿಕಾ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ
ವಿಸ್ಟ್ರಾನ್ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ
KUSHAL V

| Edited By: preethi shettigar

Dec 14, 2020 | 4:21 PM


ಕೋಲಾರ: ವೇತನ ನೀಡಿಲ್ಲ ಎಂದು ಆರೋಪ ಮಾಡಿ ಕಂಪನಿ ಆವರಣದಲ್ಲಿ ಕಾರ್ಮಿಕರು ದಾಂಧಲೆ ನಡೆಸಿರುವ ಘಟನೆ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ ನಡೆದಿದೆ. ತೈವಾನ್​ ಮೂಲದ ವಿಸ್ಟ್ರಾನ್​ ಕಂಪನಿ ದೇಶದಲ್ಲಿಌಪಲ್  iPhone ತಯಾರಿಕೆಯಲ್ಲಿ ತೊಡಗಿದೆ.

ಕಂಪನಿ ನಮಗೆ ನಾಲ್ಕು ತಿಂಗಳಿಂದ ವೇತನ ಕೊಟ್ಟಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದರೆ. ಹಾಗಾಗಿ, ಆಕ್ರೋಶಗೊಂಡ ಕಾರ್ಮಿಕರಿಂದ ಕಚೇರಿಯ ಮೇಲೆ ದಾಳಿ ಮತ್ತು ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವೇಮಗಲ್ ಪೊಲೀಸರು ಪರಿಶೀಲನೆ ನಡೆಸಿದರು.

‘ಘಟನೆಗೆ ಕಾರಣ ಹುಡುಕುತ್ತಿದ್ದೇವೆ’
ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಲಯದ‌ ಐಜಿಪಿ ಸೀಮಂತ್ ಕುಮಾರ್‌ ಪ್ರತಿಕ್ರಿಯಿಸಿದ್ದು ಕಾರ್ಮಿಕರು ಸಮಸ್ಯೆಯನನ್ನು ಕುಳಿತು ಬಗೆಹರಿಸಿಕೊಳ್ಳಬಹುದಾಗಿತು. ಆದರೆ, ಕಾನೂನು ಉಲ್ಲಂಘನೆ‌ ಮಾಡಿದ್ದು ಸರಿಯಿಲ್ಲ. ಘಟನೆಗೆ ಕಾರಣ ಹುಡುಕುತ್ತಿದ್ದೇವೆ ಎಂದು ಹೇಳಿದರು.

ಕಂಪನಿಯಲ್ಲಿ ಸಾಕಷ್ಟು‌ ಹಾನಿಯಾಗಿದೆ. ಕೃತ್ಯವೆಸಗಿರುವ‌ ಬಗ್ಗೆ ಕೆಲವು ದಾಖಲೆಗಳು ಸಿಕ್ಕಿವೆ. ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ. ಸದ್ಯ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಜಿಎಫ್​ನಿಂದಲೂ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಐಜಿಪಿ ಸೀಮಂತ್ ಕುಮಾರ್‌ ಹೇಳಿದರು.

https://tv9kannada.com/apple-supplier-wistron-set-up-new-plant-in-kolar

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada