ಬೆಂಗಳೂರು: ಏಪ್ರಿಲ್‌ನಿಂದ ಆಸ್ತಿ ತೆರಿಗೆಯ ಜೊತೆಗೆ ಶೇ. 2ರಷ್ಟು ಭೂ ಸಾರಿಗೆ ಸೆಸ್ ವಿಧಿಸಲು ಬಿಬಿಎಂಪಿ ನಿರ್ಧರಿಸಿದ್ದು, ಬೆಂಗಳೂರಿನ ಆಸ್ತಿ ಮಾಲೀಕರಿಗೆ ದೊಡ್ಡ ಶಾಕ್ ಎದುರಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭೂ ಸಾರಿಗೆ ಸೆಸ್ ವಿಧಿಸುವ ನಿರ್ಣಯವನ್ನು ಅಂಗೀಕರಿಸಿದ ಎರಡು ವರ್ಷಗಳ ನಂತರ ಮುಂಬರುವ ಹಣಕಾಸು ವರ್ಷದಲ್ಲಿ ಅಂದರೆ ಏಪ್ರಿಲ್‌ನಿಂದ ಪ್ರಾರಂಭವಾಗುವುದು ಖಚಿತವಾಗಿದ್ದು, ಬೇಕಾಗುವ ಸಿದ್ದತೆಗಳು ನಡೆಯುತ್ತಿದೆ.
ಬಿಬಿಎಂಪಿ ಈ ವಿಷಯದ ಬಗ್ಗೆ ಮೊದಲ ಬಾರಿಗೆ ನಿರ್ಣಯವನ್ನು ಅಂಗೀಕರಿಸಿದಾಗ, ರಾಜ್ಯ ಸರ್ಕಾರವು ಸಾರ್ವಜನಿಕರ ಹಿನ್ನಡೆಗೆ ಹೆದರಿ ಈ ಕ್ರಮವನ್ನು ಮುಂದುವರಿಸಲಿಲ್ಲ. ಆದರೆ ಇದೀಗ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಅನುಮೋದನೆ ನೀಡಿದ್ದು, ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಕೊರೊನಾ ಕಾಟದ ಮಧ್ಯೆಯೂ ಡಿಸೆಂಬರ್ನಲ್ಲಿ ಅತಿ ಹೆಚ್ಚು GST ಸಂಗ್ರಹ..! ಕೇಂದ್ರದ ಕೈಹಿಡಿದಿದ್ದು ಯಾವುದು ಗೊತ್ತಾ?