AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP ವಾರ್ಡ್​ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರದಿಂದ ಅಧಿನಿಯಮ ಜಾರಿ, ಗರಿಗೆದರಿದ ಚುನಾವಣೆ ಕುತೂಹಲ

BBMP‌ ಅಧಿನಿಯಮಕ್ಕೆ ಡಿಸೆಂಬರ್ 19ರಂದು ರಾಜ್ಯಪಾಲರು ಅಂಕಿತ ಹಾಕಿದ್ದರು. ಅಧಿನಿಯಮದ‌ ಎಲ್ಲಾ ಉಪಬಂಧಗಳು ಜನವರಿ 11ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.

BBMP ವಾರ್ಡ್​ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರದಿಂದ ಅಧಿನಿಯಮ ಜಾರಿ, ಗರಿಗೆದರಿದ ಚುನಾವಣೆ ಕುತೂಹಲ
ಬಿಬಿಎಂಪಿ ಮುಖ್ಯ ಕಚೇರಿ
ಆಯೇಷಾ ಬಾನು
|

Updated on:Jan 08, 2021 | 1:41 PM

Share

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ‌ ಅಧಿನಿಯಮಕ್ಕೆ ಡಿಸೆಂಬರ್ 19ರಂದು ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದರು. ಅದಕ್ಕೆ ಅನುಗುಣವಾಗಿ.. ಅಧಿನಿಯಮದ‌ ಎಲ್ಲಾ ಉಪಬಂಧಗಳು ಜನವರಿ 11ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ.

ಈ ಬಗ್ಗೆ ರಾಜ್ಯ ಸರ್ಕಾರ ನಿನ್ನೆ (ಜ.07) ಅಧಿಸೂಚನೆ ಹೊರಡಿಸಿದೆ. ಈ ಅಧಿನಿಯಮದ ಪ್ರಕಾರ ಚುನಾವಣಾ ಆಯೋಗದಿಂದ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ. ಜನಸಂಖ್ಯೆಗೆ ಅನುಗುಣವಾಗಿ ಹಾಲಿ ವಾರ್ಡ್ ವಿಂಗಡಿಸಿ ಹೊಸ ವಾರ್ಡ್‌ಗಳ ರಚನೆ ಮಾಡಲಾಗುತ್ತೆ.

ದೇಶದಲ್ಲೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆಯಾದ ಬಿಬಿಎಂಪಿ: ಇನ್ನು ಪಾಲಿಕೆ‌ ಅಧಿನಿಯಮಕ್ಕೆ ರಾಜ್ಯಪಾಲ ವಾಲಾರಿಂದ ಅಂಕಿತ ಸಿಕ್ಕಿದ್ದು BBMP ದೇಶದಲ್ಲೇ ಅತ್ಯಂತ ದೊಡ್ಡ ಮಹಾನಗರ ಪಾಲಿಕೆಯಾಗಿದೆ. 198 ವಾರ್ಡ್‌ನಿಂದ 243ಕ್ಕೆ ವಾರ್ಡ್‌ಗಳ ಸಂಖ್ಯೆ ಏರಿಕೆಯಾಗಲಿದೆ. ಹೀಗಾಗಿ ಇನ್ನು ಮುಂದೆ‌ ಬಿಬಿಎಂಪಿಗೆ ಪ್ರತ್ಯೇಕ ಕಾನೂನು ರಚನೆಯಾಗಲಿದೆ. ಇಷ್ಟು ದಿನ 198 ವಾರ್ಡ್‌ಗಳಿಂದ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಇದರ ಬದಲಿಗೆ 243 ವಾರ್ಡ್‌ಗಳಿಂದ ಪಾಲಿಕೆ ಕಾರ್ಯನಿರ್ವಹಣೆ ಮಾಡಲಿದೆ.

ಇಷ್ಟು ವರ್ಷ ಕೆಎಂಸಿ ಕಾಯ್ದೆ 1976ರಡಿ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಹಾಗೂ ಮೇಯರ್ ಅವಧಿ ಒಂದು ವರ್ಷದ‌ ಬದಲಿಗೆ 30 ತಿಂಗಳಿಗೆ ವಿಸ್ತರಿಸಲಾಗಿದೆ. ಕಮಿಷನರ್‌ ಹುದ್ದೆಯನ್ನು ಚೀಫ್ ಕಮಿಷನರ್ ‌ಆಗಿ‌ ಬದಲಾವಣೆ ಮಾಡಲಾಗಿದ್ದು ಎಲ್ಲಾ ವಲಯಕ್ಕೆ ವಲಯ ಆಯುಕ್ತರು ನೇಮಕವಾಗಲಿದ್ದಾರೆ.

ಬ್ರಿಟನ್‌ನಿಂದ ಬಂದಿದ್ದ 121 ಜನರು ಇನ್ನೂ ಪತ್ತೆಯಾಗಿಲ್ಲ -BBMPಯಿಂದ ಕಳವಳಕಾರಿ ಮಾಹಿತಿ ಬಿಡುಗಡೆ

Published On - 1:37 pm, Fri, 8 January 21