ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?

ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮಾಡಲು ಲಕ್ಷ ಲಕ್ಷ ಹಣವನ್ನು ಪಡೆದಿದ್ದು ಸಿನಿಮಾ ಹೆಸರು ನಾಟ್ಯ ರಾಣಿ ಶಾಂತಲಾ ಎನ್ನೊದು ಬಿಟ್ಟು ಬೇರೆನು ಅವರಿಗೆ ಗೊತ್ತಿಲ್ಲವಂತೆ. ನಾಟ್ಯರಾಣಿ ಶಾಂತಲಾ ಸಿನಿಮಾ ಟೈಟಲ್ ರಿಜಿಸ್ಟ್ರೇಷನ್ ಮಾಡಿಸದೇ ಲಕ್ಷ ಲಕ್ಷ ಅಡ್ವಾನ್ಸ್ ಪಡೆದಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?
ನಟಿ ರಾಧಿಕಾ ಕುಮಾರಸ್ವಾಮಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jan 08, 2021 | 1:30 PM

ಬೆಂಗಳೂರು: ಅಣ್ಣ-ತಂಗಿ ಸಿನಿಮಾ ಖ್ಯಾತಿಯ ನಟಿ ರಾಧಿಕಾ ಕುಮಾರಸ್ವಾಮಿ ಅಕ್ರಮ ಹಣ ಪಡೆದ ಆರೋಪವೊಂದನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ಜೊತೆಗೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಅದುವೇ ಪ್ರಸ್ತಾವಿತ ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ? ಎಂಬುದು ಸದ್ಯದ ಪ್ರಶ್ನೆ. ರಿಜಿಸ್ಟ್ರೇಷನ್ ಮಾಡಿಸದೆಯೇ ಅವರು ಲಕ್ಷ ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ ಎಂಬ ಮಾತು ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ.

ಒಬ್ಬ ನಟಿ ಅಥವಾ ನಟ ಯಾವುದೇ ಸಿನಿಮಾ ಮಾಡಿದ್ರು ಮೊದಲು ಅದರ ಆಯ್ಕೆಯಲ್ಲಿ ಹೆಚ್ಚಿನ ಗಮನವಹಿಸುತ್ತಾರೆ. ಯಾಕಂದ್ರೆ ಒಂದು ಒಳ್ಳೆಯ ಸಿನಿಮಾ ಅವರ ಬದುಕನ್ನೇ ಬದಲಾಯಿಸಬಹುದು. ಹಾಗಾಗಿ ಕಥೆ, ನಿರ್ದೇಶನ, ಚಿತ್ರ ತಂಡ ಎಲ್ಲವನ್ನು ನೋಡಿ ಸಿನಿಮಾ ಮಾಡಬೇಕಾ, ಬೇಡವಾ ಎಂಬ ನಿರ್ಧಾರವನ್ನು ಮಾಡ್ತಾರೆ.

ಆದ್ರೆ ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾ ಮಾಡಲು ಲಕ್ಷ ಲಕ್ಷ ಹಣವನ್ನು ಪಡೆದಿದ್ದು ಸಿನಿಮಾ ಹೆಸರು ನಾಟ್ಯ ರಾಣಿ ಶಾಂತಲಾ ಅನ್ನೋದು ಬಿಟ್ಟು ಬೇರೇನೂ ಅವರಿಗೆ ಗೊತ್ತಿಲ್ಲವಂತೆ. ಈ ಸಿನಿಮಾಗೆ ನಿರ್ದೇಶಕರು ಯಾರು, ಚಿತ್ರ ತಂಡ ಯಾವುದು, ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಯಾವ ಮಾಹಿತಿ ಇಲ್ಲದಿದ್ದರೂ ಸಿನಿಮಾಗಾಗಿ ಹಣ ಪಡೆದಿದ್ದಾರೆ. ಹೀಗಾಗಿ ಈ ಕೇಸ್ ಹಲವು ಅನುಮಾನಗಳಿಗೆ ಎಡ ಮಾಡಿಕೊಟ್ಟಿದೆ.

ರಿಜಿಸ್ಟ್ರೇಷನ್ ಮಾಡಿಸದೇ ಲಕ್ಷ ಲಕ್ಷ ಅಡ್ವಾನ್ಸ್: ಇನ್ನು ನಾಟ್ಯ ರಾಣಿ ಶಾಂತಲಾ ಸಿನಿಮಾವನ್ನು ರಿಜಿಸ್ಟ್ರೇಷನ್ ಸಹ ಮಾಡಿಸಿಲ್ಲವಂತೆ. ರಿಜಿಸ್ಟ್ರೇಷನ್ ಮಾಡಿಸದೆಯೂ,  ಜೊತೆಗೆ ಅಗ್ರಿಮೆಂಟ್ ಇಲ್ಲದೆ ಬಾಯಿ ಮಾತಿನಲ್ಲೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. 75 ಲಕ್ಷ ಹಣವನ್ನು ಪಡೆದಿದ್ದಾರೆ.

ನಿರ್ಮಾಪಕನ ಭೇಟಿ ಮಾಡದೆಯೂ ಹಣ ಪಡೆದ್ರಾ ರಾಧಿಕಾ.. ಸಿನಿಮಾ ಮಾಡುವ ನೆಪದಲ್ಲಿ ರಾಧಿಕಾ ಕುಮಾರಸ್ವಾಮಿ ಒಟ್ಟು 75 ಲಕ್ಷ ಹಣ ಪಡೆದಿದ್ದಾರೆ. ಅದರೆ ಈ ಹಣದ ಪೈಕಿ ಅವರ ಅಕೌಂಟ್​ನಲ್ಲಿ 60 ಲಕ್ಷ ಹಣ ವರ್ಗಾವಣೆಯಾಗಿತ್ತು. ಆದ್ರೆ ಆ ಹಣ ಕೊಟ್ಟ ವ್ಯಕ್ತಿ ಯಾರು ಅನ್ನೋದೂ ಗೊತ್ತಿಲ್ಲವಂತೆ. ಹಾಗಾದ್ರೆ ಗೊತ್ತಿಲ್ಲದ ವ್ಯಕ್ತಿಯಿಂದ ಹಣ ಪಡೆದು ಒಂಬತ್ತು ತಿಂಗಳು ಸುಮ್ಮನೆ ಇದ್ರಾ ಸದರಿ ನಟಿ ಮಣಿ ಎಂಬ ಪ್ರಶ್ನೆಯೂ ಚಿತ್ರಪ್ರೇಮಿಗಳಲ್ಲಿ ಗಾಢವಾಗಿ ಕಾಡುತ್ತಿದೆ.

ಜೊತೆಗೆ ರಾಧಿಕಾ ಕುಮಾರಸ್ವಾಮಿ ಒಂದು ಸಿನಿಮಾಗೆ ಈಗಾಗಲೆ 75 ಲಕ್ಷ ಅಡ್ವಾನ್ಸ್ ಪಡೆದಿದ್ದಾರೆ ಅಂತಾದರೆ.. ಫುಲ್​ ಸಂಭಾವನೆ ಎಷ್ಟು ಇರಬಹುದು? ಈ ಪ್ರಶ್ನೆಗೆ ಕನ್ನಡ ಸಿನಿ ರಂಗ ಹೇಳೋದು ಕನ್ನಡದಲ್ಲಿ ಒರ್ವ ನಟಿಗೆ ಅತಿಹೆಚ್ಚು ಅಂದ್ರೆ 40 ಲಕ್ಷ ಪೇಮೆಂಟ್ ಕೊಡಬಹುದಂತೆ. ಅದ್ರೆ ಇಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ಅಗಿ 75 ಲಕ್ಷ ಹಣ ಪಡೆದಿರೊದು ಅನುಮಾನವನ್ನು ಹೆಚ್ಚಾಗಿಸಿದೆ.

ರಾಧಿಕಾ ಕುಮಾರಸ್ವಾಮಿಗೆ ಬಂತು CCB ಬುಲಾವ್, ನಾಳೆಯೇ ವಿಚಾರಣೆ

Published On - 1:29 pm, Fri, 8 January 21

ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.