ಬೆಂಗಳೂರು, ಫೆಬ್ರವರಿ 28: ವಾಟರ್ ಟ್ಯಾಂಕರ್ ಮಾಫಿಯಾಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಡಿವಾಣ ಹಾಕಲು ಮುಂದಾಗಿದೆ. ಮಾ.7ರೊಳಗೆ ವಾಟರ್ ಟ್ಯಾಂಕರ್ ನೋಂದಣಿ ಕಡ್ಡಾಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ನಗರದ ಕಾವೇರಿ ಭವನದಲ್ಲಿ ಆಯೋಜಿಸಿದ್ದ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರೇಡ್ ಲೈಸೆನ್ಸ್ ಇರುವ ಟ್ಯಾಂಕರ್ 54 ಇರಬಹುದು. ಸಾರಿಗೆ ಇಲಾಖೆ ಪ್ರಕಾರ 3500 ಟ್ಯಾಂಕರ್ಗಳು ಇವೆ. ನಾವು ಅವರಿಗೆ ಒಂದು ವಾರ ಡೆಡ್ಲೈನ್ ಕೊಡುತ್ತೇವೆ. ಮಾ.1ರಿಂದ ಮಾರ್ಚ್ 7ರೊಳಗೆ ನೋಂದಣಿ ಕಡ್ಡಾಯ ಎಂದಿದ್ದಾರೆ.
ಟ್ರೇಡ್ ಲೈಸೆನ್ಸ್ ಪಡೆದೇ ನೀರು ಸರಬರಾಜು ಮಾಡಬೇಕು. ನೋಂದಣಿ ಮಾಡಿಕೊಳ್ಳದ ಟ್ಯಾಂಕರ್ ವಶಕ್ಕೆ ಪಡೆಯುತ್ತೇವೆ. ಜೊತೆಗೆ ಟ್ರೇಡ್ ಅಸೋಸಿಯೇಷನ್ ಜೊತೆ ಮಾತನಾಡಿ ದರ ಫಿಕ್ಸ್ ಮಾಡುತ್ತೇವೆ. BWSSB ಅವರು ನೀರನ್ನು ಸರಬರಾಜು ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್: ವಿದ್ಯುತ್ ದರ ಇಳಿಕೆ ಮಾಡಿ ಸರ್ಕಾರ ಆದೇಶ
ವಾಟರ್ ಟ್ಯಾಂಕರ್ನವರ ಜೊತೆ ಮಾತಾಡಿ ದರ ಫಿಕ್ಸ್ ಮಾಡುತ್ತೇವೆ. 110 ಹಳ್ಳಿಗಳಲ್ಲಿ ನೀರಿನ ಕೊರತೆ ಇದ್ದಾಗ ಬಿಡಬ್ಲ್ಯುಎಸ್ಎಸ್ಬಿಯವರೇ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಇದನ್ನೂ ಓದಿ: ನಾಳೆ ಕನ್ನಡ ಕಹಳೆ: ಅನ್ಯಭಾಷಿಕರ ಅಂಗಡಿಗಳಿಗೆ ಬಿಬಿಎಂಪಿ ಫೈನಲ್ ವಾರ್ನಿಂಗ್!
ಟ್ರೇಡ್ ಲೈಸೆನ್ಸ್ ಇರುವ ಟ್ಯಾಂಕರ್ 54 ಇರಬಹುದು. ಸಾರಿಗೆ ಇಲಾಖೆ ಪ್ರಕಾರ 3500 ಟ್ಯಾಂಕರ್ಗಳು ಇವೆ. ನಾವು ಅವರಿಗೆ ಒಂದು ವಾರ ಡೆಡ್ಲೈನ್ ಕೊಡುತ್ತೇವೆ ಎಂದಿದ್ದಾರೆ.
ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ ಮನೋಹರ ಪ್ರತಿಕ್ರಿಯಿಸಿದ್ದು, ನಾವು ಎಸ್ಟಿಪಿ ವಾಟರ್ನ್ನ ಮತ್ತೊಮ್ಮೆ ಶುದ್ಧೀಕರಿಸಿ ಅವಶ್ಯಕತೆ ಇರುವ ಕಡೆ ಕೊಡುತ್ತೇವೆ. ಕಾರ್ ವಾಷ್ ಹಾಗೂ ಗಾರ್ಡನ್ಗೆ ಬಳಸಬಹುದು. ಜೊತೆಗೆ ಮೊದಲ ಹಂತದಲ್ಲಿ ಸುಮಾರು 7 ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ತುಂಬುತ್ತವೆ. ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಕಾವೇರಿ 5ನೇ ಹಂತ ಆದಷ್ಟು ಬೇಗ ಪೂರ್ಣ ಗೊಳಿಸುತ್ತೇವೆ. ಮೇ ಮೊದಲ ವಾರದಲ್ಲಿ ಆ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:50 pm, Wed, 28 February 24