ಬೆಂಗಳೂರಿನ NTTF ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ, ಎಚ್ಒಡಿ ಕಿರುಕುಳ ಆರೋಪ
ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಅದರಂತೆ ಇದೀಗ ವಿದ್ಯಾರ್ಥಿಯೊಬ್ಬ ಎಚ್ಒಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಗುಂಟೆ ಬಳಿಯ ಡಿಫೆನ್ಸ್ ಕಾಲೋನಿಯಲ್ಲಿ ನಡೆದಿದೆ. ಈ ಕುರಿತು ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ, ಫೆ.28: ನಗರದ ಬಾಗಲಗುಂಟೆ ಬಳಿಯ ಡಿಫೆನ್ಸ್ ಕಾಲೋನಿಯಲ್ಲಿ NTTF ಕಾಲೇಜಿನ ಎಚ್ಒಡಿ ಕಿರುಕುಳಕ್ಕೆ ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಋಷ್ಯಂತ್ (18) ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಇತ ಫೈನಲ್ ಇಯರ್ ಡಿಪ್ಲೋಮಾ ಇನ್ ಮ್ಯಾಕೇನಿಕ್ ಓದುತ್ತಿದ್ದ. ಈ ವೇಳೆ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ಎಚ್ಒಡಿ ಶಿಜು ಗಂಗಧರ್ ಎಂಬುವವರು ಪ್ರಾಜೆಕ್ಟ್ ವರ್ಕ್ಗೆ ಸಂಬಂಧ ಪಟ್ಟಂತೆ ‘ನೀನು ನೋಡೊದಕ್ಕೆ ಶವದ ರೀತಿ ಇದೀಯಾ, ನಿನ್ನ ಪ್ರಾಜೆಕ್ಟ ವರ್ಕ್ ಕೂಡ ಹಾಗೆ ಇದೆ ಎಂದು ಬೈದಿದ್ದರಂತೆ.
ಈ ಹಿನ್ನಲೆ ಅವರ ಕಿರುಕುಳಕ್ಕೆ ಬೇಸತ್ತ ಮಗ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಇದೀಗ ಮಗನ ಶವ ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಧಾರವಾಡ: ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ
ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೊ ಗೊತ್ತಿಲ್ಲಾ-ಪ್ರಿನ್ಸಿಪಾಲ್
ನೇಣುಬಿಗಿದುಕೊಂಡು ಡಿಪ್ಲೊಮಾ ವಿದ್ಯಾರ್ಥಿ ಋಷ್ಯಂತ್ ಆತ್ಮಹತ್ಯೆ ಪ್ರಕರಣದ ಕುರಿತು ಪಿಣ್ಯ ಎನ್ಟಿಟಿ ಕಾಲೇಜು ವೈಸ್ ಪ್ರಿನ್ಸಿಪಾಲ್ ಪ್ರಕಾಶ್ ಎಂಬುವವರು ಮಾತನಾಡಿ, ‘ ಆತ ಒಬ್ಬ ಒಳೆಯ ವಿಧ್ಯಾರ್ಥಿ, ಯಾಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೊ ಗೊತ್ತಿಲ್ಲ. ಒಳ್ಳೆಯ ವಿದ್ಯಾರ್ಥಿಗಳಿನೆ ನಮ್ಮ ಆಡಳಿತ ಮಂಡಳಿ ಯಾವತ್ತು ಸಹಾನೂಭೂತಿ ತೊರುತ್ತದೆ. ಈಗಿನ ವಿದ್ಯಾರ್ಥಿ ಸಮೂಹ ನಮ್ಮ ಶಿಕ್ಷರ ಮಾತಿನಿಂದ ಮುಂದಿನ ದಿನದಲ್ಲಿ ಆಡಳಿತ ಮಂಡಳಿ ವಿಧ್ಯಾರ್ಥಿ ಸಮೂಹದ ಜೊತೆ ಮಾತು ಕಥೆ ನಡೆಸಲಿದೆ. ಕಾಲೇಜು ಆಡಳಿತ ಮಂಡಳಿ ಋಷ್ಯಂತ್ ಸಾವಿಗೆ ಸಂತಾಪ ಸೂಚಿಸುತ್ತದೆ. ಜೊತೆಗೆ ಈ ಘಟನೆಗೆ ಕಾನೂನು ರೀತಿಯಲ್ಲಿ ಕ್ರಮ ಕೈ ಗೊಳುತ್ತೇವೆ ಎಂದರು.
ಹೆಜ್ಜೇನು ದಾಳಿಗೆ ಸಿಬ್ಬಂದಿ ಸೇರಿ ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
ಚಾಮರಾಜನಗರ: ನಗರದ ಜೆಎಸ್ಎಸ್ ನರ್ಸಿಂಗ್ ಕಾಲೇಜಿನಲ್ಲಿ ಹೆಜ್ಜೇನು ದಾಳಿ ಮಾಡಿದ್ದು, ಸಿಬ್ಬಂದಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಮದ್ಯಾಹ್ನ ಊಟದ ಸಮಯದಲ್ಲಿ ಕಾಲೇಜು ಆವರಣದಲ್ಲಿ ಹೆಜ್ಜೇನು ದಾಳಿ ಮಾಡಿದ್ದು, ಹೆಜ್ಜೇನು ದಾಳಿಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದು, ತಕ್ಷಣ ಕಾಲೇಜು ಸಿಬ್ಬಂದಿ ಹೊಗೆ ಹಾಕಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಗಾಯಗೊಂಡವರಿಗೆ ಸದ್ಯ ಜೆಎಸ್‌ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಜ್ಜೇನುಗೊಳಗಾದ ಎಲ್ಲಾ ವಿದ್ಯಾರ್ಥಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Wed, 28 February 24