AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆ ಕನ್ನಡ ಕಹಳೆ: ಅನ್ಯಭಾಷಿಕರ ಅಂಗಡಿಗಳಿಗೆ ಬಿಬಿಎಂಪಿ ಫೈನಲ್‌ ವಾರ್ನಿಂಗ್!

ಬೆಂಗಳೂರಿನಲ್ಲಿ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗಾಗಿ ಕನ್ನಡ ಪರ ಸಂಘಟನೆಗಳು ರಣಕಹಳೆ ಮೊಳಗಿಸಿದ್ದವು. ಇದರಿಂದ ಎಚ್ಚೆತ್ತುಕೊಂಡಿದ್ದ ಸರ್ಕಾರ ಫೆ. 28 ರೊಳಗೆ ಕಡ್ಡಾಯ ಕನ್ನಡ ನಾಮಫಲಕ ಅಳವಡಿಕೆಗೆ ಗಡುವು ನೀಡಿತ್ತು. ಸರ್ಕಾರದ ಡೆಡ್​ಲೈನ್ ಇಂದಿಗೆ ಮುಗಿಯಿತು. ಆದರೂ ಅಂಗಡಿ-ಮುಂಗಟ್ಟುಗಳ ಮುಂದಿನ ನಾಮಫಲಕ ಬದಲಾಗಿಲ್ಲ. ಹೀಗಾಗಿ ಮತ್ತೊಂದು ದಿನ ಅವಕಾಶ ನೀಡಲಾಗಿದ್ದು, ನಾಳೆ ಸಂಜೆವರೆಗೆ ನಾಮಫಲಕ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. 

ನಾಳೆ ಕನ್ನಡ ಕಹಳೆ: ಅನ್ಯಭಾಷಿಕರ ಅಂಗಡಿಗಳಿಗೆ ಬಿಬಿಎಂಪಿ ಫೈನಲ್‌ ವಾರ್ನಿಂಗ್!
ಬಿಬಿಎಂಪಿ
TV9 Web
| Edited By: |

Updated on:Feb 28, 2024 | 3:59 PM

Share

ಬೆಂಗಳೂರು, ಫೆಬ್ರವರಿ 28: ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಕನ್ನಡ (Kannada) ದ ರಣಕಹಳೆ ಮೊಳಗಲು ಸಜ್ಜಾಗುತ್ತಿದೆ. ಕನ್ನಡ ಕಡ್ಡಾಯ ನಾಮಫಲಕ ಅಳವಡಿಕೆಗೆ ನೀಡಿದ್ದ ಡೆಡ್ ಲೈನ್​ ಇಂದು ಮುಕ್ತಾಯವಾಗಿದೆ. ಹೀಗಿದ್ದರೂ ಬೆಂಗಳೂರಿನ ಅಂಗಡಿ-ಮುಂಗಟ್ಟುಗಳ ಮುಂದಿನ ನಾಮಫಲಕ ಬದಲಾಗಿಲ್ಲ. ಇದು ಕನ್ನಡ ಹೋರಾಟಗಾರರನ್ನು ಕೆರಳಿಸಿದೆ. ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶ ನೀಡಲಾಗಿದೆ. ನಾಳೆ ಸಂಜೆವರೆಗೆ ನಾಮಫಲಕ ಬದಲಾಯಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ಕ್ರಮದ ಎಚ್ಚರಿಕೆ ನೀಡಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ಮಾತನಾಡಿದ್ದು, ಕನ್ನಡ ನಾಮಫಲಕ ಹಾಕದಿದ್ದರೆ ಅಂಗಡಿಗಳನ್ನು ಬಂದ್ ಮಾಡುತ್ತೇವೆ. ಈಗಾಗಲೇ ಶೇಕಡಾ 90ರಷ್ಟು ಕನ್ನಡ ನಾಮಫಲಕ ಹಾಕಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ​. ಅಂತಾರಾಷ್ಟ್ರೀಯ ಕಂಪನಿಗಳು, SBI, ಕೆನರಾ ಬ್ಯಾಂಕ್ ಮನವಿ ನೀಡಿವೆ. ಕನ್ನಡ ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ಇಂದೇ ಡೆಡ್​ಲೈನ್! ಬಹುತೇಕ ಕಡೆ ಬದಲಾದ ಚಿತ್ರಣ, ಖಡಕ್ ಎಚ್ಚರಿಕೆ ಕೊಟ್ಟ ಕರವೇ

ಹಾಸನದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ ಗಡುವು ಇಂದಿಗೆ ಮುಗಿದಿದೆ. ನಾಳೆ ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡ ರಥ ನಾಳೆ ಬೀದಿ ಬೀದಿಗೆ ಹೋಗುತ್ತೇವೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತ ದಿಂದ ಎಲ್ಲೆಡೆ ಹೋಗಿ ಎಚ್ಚರಿಕೆ ನೀಡುತ್ತೇವೆ. ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಎಲ್ಲಾ ಕೈಗಾರಿಕೆ ಮುಚ್ಚಿ ಹೋಗಿದೆ. ದೊಡ್ಡ ದೊಡ್ಡ ಕಂಪನಿಗಳ ಕೈಗಾರಿಕೆಗಳು ಓಪನ್ ಆಗಿದೆ ಎಂದರು.

ಇದನ್ನೂ ಓದಿ: ನಾಳೆ ಡೆಡ್​ಲೈನ್: ಹಲವೆಡೆ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಕೆ, ಕೆಲವೆಡೆ ಎಚ್ಚೆತ್ತುಕೊಳ್ಳದ ವ್ಯಾಪಾರಿಗಳು

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಸರ್ಕಾರ ನಿಲುವು ಹೇಳಬೇಕು. ನಮ್ಮ‌ ಜನರ ಭೂಮಿ ಕೊಡುತ್ತಾರೆ, ಉದ್ಯೋಗ ಕೊಟ್ಟಿಲ್ಲ. ರಾಜ್ಯದಲ್ಲಿ ಈ ಬಗ್ಗೆ ಯಾರಿಗೆ ಉದ್ಯೋಗ ಕೊಡಲಾಗಿದೆ. ಸಮೀಕ್ಷೆ ನಡೆಯಲಿ ಆಗ ಯಾವ ಯಾವ ರಾಜ್ಯದ ಜನರು ಎಷ್ಟು ಇದಾರೆ ಎಂದು ಗೊತ್ತಾಗುತ್ತೆ. ಪಕ್ಷಾಂತರ ಕಾಯಿದೆಗೆ ಸಮಗ್ರ ತಿದ್ದುಪಡಿ ಆಗಬೇಕು. ಇಲ್ಲವಾದರೆ ಚುನಾವಣೆ ವ್ಯವಸ್ಥೆ ಮೇಲೆ‌ ನಂಬಿಕೆ ಹೋಗುತ್ತೆ. ಪಕ್ಷಾಂತರ ನಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದಿದ್ದಾರೆ.

ನಮ್ಮ ಸರ್ಕಾರ ಕನ್ನಡಪರ‌ ಹೋರಾಟಗಾರರ ಕೇಸ್ ವಾಪಸ್ ತಗೊಳ್ಳುತ್ತೇವೆ ಅಂತಾರೆ. ಆದರೆ ಈವರೆಗೆ ಯಾವುದೇ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆದಿಲ್ಲ. ರಾಜಕೀಯ ಪಕ್ಷಗಳ ಮೇಲಿನ‌ ಕೇಸ್ ವಾಪಸ್ ತಗೊಂಡಿದಾರೆ ಎಂದರು.

ವರದಿ: ಶಾಂತಮೂರ್ತಿ ಎಂ

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:51 pm, Wed, 28 February 24

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​