Power Tariff: ಕರ್ನಾಟಕ ಜನತೆಗೆ ಕಾದಿದೆ ಕರೆಂಟ್ ಶಾಕ್, ಮತ್ತೆ ವಿದ್ಯುತ್ ದರ ಹೆಚ್ಚಳ ಸಾಧ್ಯತೆ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದೆ. ಇಂದು ಸಂಜೆ 4 ಗಂಟೆಗೆ ಹೊಸ ವಿದ್ಯುತ್ ದರ ಘೋಷಣೆ ಮಾಡಲಿದೆ. ಹೀಗಾಗಿ ರಾಜ್ಯದ ಜನತೆಗೆ ಇಂದೇ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಇದೆ. ದರ ಹೆಚ್ಚಳ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ.
ಬೆಂಗಳೂರು, ಫೆಬ್ರವರಿ 28: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದೆ. ಇಂದು ಸಂಜೆ 4 ಗಂಟೆಗೆ ಹೊಸ ವಿದ್ಯುತ್ ದರ (Power Tariff) ಘೋಷಣೆ ಮಾಡಲಿದೆ. ಹೀಗಾಗಿ ರಾಜ್ಯದ ಜನತೆಗೆ ಇಂದೇ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ ಇದೆ. ದರ ಹೆಚ್ಚಳ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಮಾರ್ಚ್ 1ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ದರ ಹೆಚ್ಚಿಸುವಂತೆ ಐದು ಎಸ್ಕಾಂಗಳು ಮನವಿ ಮಾಡಿದ್ದವು.
ಪ್ರತಿ ವರ್ಷ ಏರ್ಪಿಲ್‌ನಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆ ಈ ಬಾರಿ ಅವಧಿಗೆ ಮುಂಚಿತವಾಗಿಯೇ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಗೃಹಜ್ಯೋತಿ ಯೋಜನೆ ನಡುವೆಯೂ ವಿದ್ಯುತ್ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್ ಮಾತನಾಡಿ ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ಇತರೆ ಮೂಲಗಳಿಂದ ಆದಾಯ ಗಳಿಸಿ ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಉಚಿತ ವಿದ್ಯುತ್ ಆಸೆಯಲ್ಲಿದ್ದವರಿಗೆ ಹೆಸ್ಕಾಂ ಶಾಕ್! ದುಪ್ಪಟ್ಟು ದರದ ಬಿಲ್ ನೋಡಿ ಉತ್ತರ ಕನ್ನಡ ಜನತೆ ತಲ್ಲಣ
ದರ ಹೆಚ್ಚಿಸಿದರೆ, ಅದು ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ. ಹೆಸ್ಕಾಂ ವಿತರಣಾ ನಷ್ಟವನ್ನು ತಡೆಯಬೇಕು, ಅನಗತ್ಯ ವೆಚ್ಚಗಳನ್ನು ನಿರ್ಬಂಧಿಸಬೇಕು ಮತ್ತು ಆ ಮೂಲಕ ನಷ್ಟವನ್ನು ತಡೆಯಬೇಕು. ಅದರ ಬದಲು ನಿಯಮಿತವಾಗಿ ದರವನ್ನು ಹೆಚ್ಚಿಸಬಾರದು ಎಂದು ಅವರು ಹೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Wed, 28 February 24