ಉಚಿತ ವಿದ್ಯುತ್ ಆಸೆಯಲ್ಲಿದ್ದವರಿಗೆ ಹೆಸ್ಕಾಂ ಶಾಕ್! ದುಪ್ಪಟ್ಟು ದರದ ಬಿಲ್ ನೋಡಿ ಉತ್ತರ ಕನ್ನಡ ಜನತೆ ತಲ್ಲಣ

ಪ್ರತೀ ಮನೆಗೆ 200 ಯೂನಿಟ್ ಉಚಿತ ನೀಡುವುದಾಗಿ ಘೋಷಣೆ ಮಾಡಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಮುಂದಿನ ತಿಂಗಳಿಂದ ತಮಗೆ ಉಚಿತ ವಿದ್ಯುತ್ ಅಂತಾ ಖುಷಿಯಲ್ಲಿದ್ದ ಉತ್ತರಕನ್ನಡ ಜಿಲ್ಲೆಯ ಜನರಿಗೆ ಇದೀಗ ದುಪ್ಪಟ್ಟು ದರದ ಬಿಲ್​ ನೋಡಿ ಶಾಕ್ ಆಗಿದ್ದಾರೆ.

ಉಚಿತ ವಿದ್ಯುತ್ ಆಸೆಯಲ್ಲಿದ್ದವರಿಗೆ ಹೆಸ್ಕಾಂ ಶಾಕ್! ದುಪ್ಪಟ್ಟು ದರದ ಬಿಲ್ ನೋಡಿ ಉತ್ತರ ಕನ್ನಡ ಜನತೆ ತಲ್ಲಣ
ವಿದ್ಯುತ್ ದರದಲ್ಲಿ ಭಾರೀ ಏರಿಕೆ ಮಾಡಿದ ಹೆಸ್ಕಾಂ
Follow us
| Updated By: Rakesh Nayak Manchi

Updated on: Jun 09, 2023 | 10:34 PM

ಕಾರವಾರ: ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ, ಬೆಲೆ ಏರಿಸುವ ಮೂಲಕ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಪ್ರತೀ ಮನೆಗೆ 200 ಯೂನಿಟ್ ಉಚಿತ (Free Electricity) ನೀಡುವುದಾಗಿ ಘೋಷಣೆಯನ್ನು ಮಾಡಿದೆ. ಇದರಿಂದಾಗಿ ಮುಂದಿನ ತಿಂಗಳಿಂದ ತಮಗೆ ಉಚಿತ ವಿದ್ಯುತ್ ಅಂತಾ ಖುಷಿಯಲ್ಲಿದ್ದ ಉತ್ತರಕನ್ನಡ ಜಿಲ್ಲೆಯ ಜನರು ಇದೀಗ ದುಪ್ಪಟ್ಟು ದರದ ಬಿಲ್​ ನೋಡಿ ಶಾಕ್ ಆಗಿದ್ದಾರೆ. ಹೆಸ್ಕಾಂನ ವಿದ್ಯುತ್ ದರ ಹೆಚ್ಚಳ ಗ್ರಾಹಕರನ್ನು ತಲ್ಲಣಗೊಳಿಸಿದೆ.

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗಳಿಗೆ 200 ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಸರಕಾರ ತಿಳಿಸಿದೆ. ಆದರೆ, ಇದರ ಜೊತೆಗೆ ವಿದ್ಯುತ್ ಬಿಲ್​ನ ದರವನ್ನು ಭಾರೀ ಹೆಚ್ಚು ಮಾಡಲಾಗಿದ್ದು, ಉತ್ತರಕನ್ನಡ ಜಿಲ್ಲೆಯ ಹೆಸ್ಕಾಂ ಇಲಾಖೆ ಗ್ರಾಹಕರಿಗೆ ಒಂದು ಪಟ್ಟು ಹೆಚ್ಚು ದರ ವಿಧಿಸಿ ಶಾಕ್ ನೀಡಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಹೆಸ್ಕಾಂನಿಂದ ಪ್ರತಿ 0-100 ಯುನಿಟ್‌‌ಗೆ ಪ್ರತೀ ಒಂದು ಯುನಿಟ್ ಮೇಲೆ 4.75 ರೂ. ದರ ನಿಗದಿ ಮಾಡಲಾಗಿದ್ದು, 100 ಯುನಿಟ್​ಗೂ ಹೆಚ್ಚಾದಲ್ಲಿ ಪ್ರತೀ ಯುನಿಟ್ ಮೇಲೆ 7.00ರೂ. ದರ ವಿಧಿಸಲಾಗುತ್ತಿದೆ. ಇನ್ನು ಸಾಮಾನ್ಯ ಬಿಲ್‌ಗಳ ಮೇಲೆ ಮಿನಿಮಮ್ ಚಾರ್ಜ್ ಎಂದು ಫಿಕ್ಸ್ ಚಾರ್ಜ್ 330, ಎಫ್‌ಎಸಿ- 91.80ರೂ. ಟ್ಯಾಕ್ಸ್ 15.39 ಸೇರಿಸಿ 437.19ರೂ. ಪಾವತಿ ಮಾಡಬೇಕಾಗುತ್ತದೆ. ಇದರ ಮೇಲೆ ಜನರು ಬಳಕೆ ಮಾಡಿದ ವಿದ್ಯುತ್ ಯುನಿಟ್ ಲೆಕ್ಕ ಸೇರಿಸಲಾಗುತ್ತದೆ.

ಇದನ್ನೂ ಓದಿ: ವಾರದಲ್ಲಿ ವಿದ್ಯುತ್ ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟ-ಚೇಂಬರ್​ ಆಫ್ ಕಾಮರ್ಸ್​ ಸಂಸ್ಥೆ ಎಚ್ಚರಿಕೆ

ಸರ್ಕಾರ ಹೇಳಿದ್ದೇ ಒಂದು ಮಾಡುತ್ತಿರುವುದೇ ಇನ್ನೊಂದು

ಈ ತಿಂಗಳ ಬಿಲ್​ನಲ್ಲಿಯೇ ವಿದ್ಯುತ್ ದರ ಹೆಚ್ಚಾಗಿರುವುದು ನೋಡಿ ಜನರಿಗೆ ಶಾಕ್ ಮೇಲೆ ಶಾಕ್ ಕಾಣಿಸಿಕೊಂಡಿದೆ. ವಿದ್ಯುತ್ ದರ ಜೊತೆಗೆ ಆಹಾರ ಪದಾರ್ಥಗಳ ದರ ಸಹ ಹೆಚ್ಚಾಗತೊಡಗಿದ್ದು, ಸರ್ಕಾರ ಹೇಳಿದ್ದೇ ಬೇರೆ ಈಗ ಮಾಡುತ್ತಿರುವುದೇ ಬೇರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮನೆಗಳ ವಿದ್ಯುತ್ ಬಿಲ್ ಅಲ್ಲದೇ ವಾಣಿಜ್ಯ ಮಳಿಗೆಗಳಿಗೂ ವಿದ್ಯುತ್ ದರ ಹೆಚ್ಚು ಮಾಡಲಾಗಿದೆ. ಅಂಗಡಿ ಹಾಗೂ ಇತರ ಉದ್ಯಮ ನಡೆಸುವವರಿಗೆ ದೊಡ್ಡ ತಲೆನೋವಾಗಿ ಕಾಣಿಸಿಕೊಂಡಿದೆ. ಜನ ಸಾಮಾನ್ಯರ ಮನೆಗಳಲ್ಲಂತೂ 600 ರೂ., 900 ರೂ., 1500 ರೂ. ಬಿಲ್ ಬರುತ್ತಿದ್ದವರಿಗೆ ಈ ಬಾರಿ 1,500ರೂ., 2000ರೂ, 3000ರೂ. ಬಿಲ್‌ಗಳು ಬಂದಿರುವುದದು ತಲೆ ಮೇಲೆ ಹೊಡೆದಂತಾಗಿದೆ.

ಸಣ್ಣ ಸಣ್ಣ ಅಂಗಡಿಗಳನ್ನು ನಡೆಸುವವರು, ದಿನಗೂಲಿ ಮಾಡುವವರಿಗೆ ಇದು ಶಾಕ್ ನೀಡಿದ್ದು, ದುಡಿದ ಹಣವನ್ನು ಕೂಡಾ ವಿದ್ಯುತ್ ಬಿಲ್ ಪಾವತಿಸಲು ನೀಡಬೇಕಲ್ಲಾ ಎಂದು ಬೇಸರದಲ್ಲಿದ್ದಾರೆ. ಇನ್ನು ಸರಕಾರ ತಿಳಿಸಿರುವ 200 ಯುನಿಟ್ ಫ್ರೀ ವಿಚಾರದಲ್ಲಿ ವಾರ್ಷಿಕ ಸರಾಸರಿ ನೋಡಿ ಕೇವಲ ಶೇ.10ರಷ್ಟು ಹೆಚ್ಚು ಬಳಕೆಗೆ ಮಾತ್ರ ಅವಕಾಶ ಎಂದು ತಿಳಿಸಿದೆ‌. ಇದು ಜನರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಸರ್ಕಾರ ಸರಳ ನಿಯಮಗಳ ಮೂಲಕ ಈ ಗೊಂದಲ ಪರಿಹರಿಸಬೇಕಿದೆ. ಒಟ್ಟಾರೆಯಾಗಿ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಫ್ರೀ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಜನರಿಗೆ ಹೆಸ್ಕಾಂ ಇಲಾಖೆ ಭರ್ಜರಿ ದರ ಹೆಚ್ಚಳ ಮಾಡಿ ದೊಡ್ಡ ಶಾಕನ್ನೇ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ