Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದಲ್ಲಿ ವಿದ್ಯುತ್ ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟ-ಚೇಂಬರ್​ ಆಫ್ ಕಾಮರ್ಸ್​ ಸಂಸ್ಥೆ ಎಚ್ಚರಿಕೆ

ಏಳು ದಿನಗಳಲ್ಲಿ ಬಿಲ್ ಕಡಿಮೆ ಮಾಡಬೇಕು‌. ಒಂದು ವೇಳೆ ಬಿಲ್ ಕಡಿಮೆ ಮಾಡದೆ ಹೋದ್ರೆ, ಕೈಗಾರಿಕೆಗಳನ್ನ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಮಧ್ಯಪ್ರವೇಶ ಮಾಡಿ ವಿದ್ಯುತ್ ದರವನ್ನ ಕಡಿಮೆ ಮಾಡಬೇಕು ಎಂದು ಕರ್ನಾಟಕ ಚೇಂಬರ್​ ಆಫ್ ಕಾಮರ್ಸ್​ ಅಧ್ಯಕ್ಷ ವಿನಯ್ ಒತ್ತಾಯಿಸಿದ್ದಾರೆ.

ವಾರದಲ್ಲಿ ವಿದ್ಯುತ್ ದರ ಏರಿಕೆ ಹಿಂಪಡೆಯದಿದ್ದರೆ ಹೋರಾಟ-ಚೇಂಬರ್​ ಆಫ್ ಕಾಮರ್ಸ್​ ಸಂಸ್ಥೆ ಎಚ್ಚರಿಕೆ
ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆ
Follow us
ಆಯೇಷಾ ಬಾನು
|

Updated on: Jun 09, 2023 | 1:34 PM

ಹುಬ್ಬಳ್ಳಿ: ವಿದ್ಯುತ್ ದರ ಹೆಚ್ಚಿಸಿ(Electricity Price Hike) ಶಾಕ್ ನೀಡಿದ ಹೆಸ್ಕಾಂಗೆ ಚೇಂಬರ್​ ಆಫ್ ಕಾಮರ್ಸ್(Karnataka Chamber Of commerce)​ ತರಾಟೆಗೆ ತೆಗೆದುಕೊಂಡಿದೆ. ಉತ್ತರ ಕರ್ನಾಟಕದ ಚೇಂಬರ್​ ಆಫ್ ಕಾಮರ್ಸ್​ ಸಂಸ್ಥೆ ವಿದ್ಯುತ್ ದರ ಏರಿಕೆಗೆ ಖಂಡನೆ ವ್ಯಕ್ತಪಡಿಸಿದ್ದು ಹೆಸ್ಕಾಂ(Hescom) ಮತ್ತು ಸರ್ಕಾರದ(Karnataka Government) ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ವಿದ್ಯುತ್ ದರ ಏರಿಕೆ ಹಿಂಪಡೆಯಲು ಸರ್ಕಾರಕ್ಕೆ 1 ವಾರ ಗಡವು ನೀಡಿದ್ದು ಹಿಂಪಡೆಯದಿದ್ದರೆ ಕೈಗಾರಿಕೆಗಳನ್ನು ಬಂದ್​ ಮಾಡಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಹೆಸ್ಕಾಂಗೆ ಏಳು ದಿನಗಳ ಕಾಲ ಗಡುವು ನೀಡುತ್ತೇವೆ. ಹೆಸ್ಕಾಂ ನೀಡಿದ ಬಿಲ್‌ನಲ್ಲಿ 75% ರಷ್ಟು ಪಾವತಿ ಮಾಡುತ್ತೇವೆ. ಉಳಿದ ಬಿಲ್‌ನ್ನ ಬಾಕಿ ಉಳಿಸಿಕೊಳ್ಳುತ್ತೇವೆ. ಏಳು ದಿನಗಳಲ್ಲಿ ಬಿಲ್ ಕಡಿಮೆ ಮಾಡಬೇಕು‌. ಒಂದು ವೇಳೆ ಬಿಲ್ ಕಡಿಮೆ ಮಾಡದೆ ಹೋದ್ರೆ, ಕೈಗಾರಿಕೆಗಳನ್ನ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಮಧ್ಯಪ್ರವೇಶ ಮಾಡಿ ವಿದ್ಯುತ್ ದರವನ್ನ ಕಡಿಮೆ ಮಾಡಬೇಕು ಎಂದು ಕರ್ನಾಟಕ ಚೇಂಬರ್​ ಆಫ್ ಕಾಮರ್ಸ್​ ಅಧ್ಯಕ್ಷ ವಿನಯ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bangalore Power Cut: ಬೆಂಗಳೂರಿಗರಿಗೆ ವೀಕೆಂಡ್ ಶಾಕ್, ಜೂ9ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲೆ?

ಕೆಇಆರ್‌ಸಿಯಿಂದ ಮನಸ್ಸೋ ಇಚ್ಚೆ ವಿದ್ಯುತ್ ದರ ಏರಿಕೆಯಾಗಿದೆ. ಹೆಸ್ಕಾಂ ಕೆಇಆರ್‌ಸಿ ಮುಂದೆ ಪ್ರತಿ ಯುನಿಟ್ ಗೆ 50% ಹೆಚ್ಚಳದ ಬೇಡಿಕೆ ಇಟ್ಟಿತ್ತು. ಈ ರೀತಿಯ ಬೇಡಿಕೆ ಇಟ್ಟಾಗ 20 ರಿಂದ 30 ಪೈಸೆ ಕೆಇಆರ್‌ಸಿ ಹೆಚ್ಚಳ ಮಾಡ್ತಾ ಇತ್ತು. ಆದ್ರೆ ಈ ವರ್ಷ ಪ್ರತಿ ಯುನಿಟ್‌‌ಗೆ 2.54 ರೂ. ನಿಗದಿ ಮಾಡಿದೆ. ಇದರಿಂದಾಗಿ ಜನಸಾಮಾನ್ಯರ ಮೇಲೆ ಬಹಳಷ್ಟು ಹೊರೆಯಾಗಿದೆ. ಹೆಸ್ಕಾಂ ತಕ್ಷಣ ವಿದ್ಯುತ್ ಬಿಲ್‌ನ್ನ ಕಡಿಮೆ ಮಾಡಬೇಕೆಂದು ವಿನಯ್ ಆಗ್ರಹಿಸಿದ್ದಾರೆ.

ನಷ್ಟದ ಕಾರಣ ನೀಡಿ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಪ್ರತಿ ಯೂನಿಟ್ ಗೆ 70 ಪೈಸೆ ದರ ಏರಿಕೆ ಮಾಡಿ ಮೇ 12ರಂದು ಆದೇಶ ಪ್ರಕಟಿಸಿತ್ತು. ಹೊಸ ಪರಿಷ್ಕೃತ ದರವನ್ನು ಜೂನ್ 1ರಿಂದ ಅನ್ವಯವಾಗುವಂತೆ ಅದೇಶ ಪ್ರಕಟಿಸಲಾಗಿತ್ತು. ಇನ್ನು ಮತ್ತೊಂದೆಡೆ ದರ ಹೆಚ್ಚಳದ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ