ಸುಂದರ ಯುವತಿಯ Friend Request ಬಂದರೆ ಇರಲಿ ಎಚ್ಚರ..! ನೀವೂ ವಂಚಕರ ಜಾಲದಲ್ಲಿ ಸಿಕ್ಕಿಬೀಳಬಹುದು..

| Updated By: ಸಾಧು ಶ್ರೀನಾಥ್​

Updated on: Dec 18, 2020 | 3:29 PM

ವಿಡಿಯೋ ಇಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುವ ಈ ಜಾಲ, ಕೊಡದೆ ಇದ್ದರೆ ರೆಕಾರ್ಡ್ ವಿಡಿಯೋವನ್ನು ನಿಮ್ಮ ಕುಟುಂಬ, ಸ್ನೇಹಿತರಿಗೆ ಕಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇದು ಅಂತಿಂಥಾ ಜಾಲವಲ್ಲ..ಇದರಲ್ಲೀಗ ಶ್ರೀಮಂತರ ಮಕ್ಕಳು, ಉದ್ಯಮಿಗಳು, ಗಣ್ಯರು ಸಿಲುಕಿದ್ದಾರೆ.

ಸುಂದರ ಯುವತಿಯ Friend Request ಬಂದರೆ ಇರಲಿ ಎಚ್ಚರ..! ನೀವೂ ವಂಚಕರ ಜಾಲದಲ್ಲಿ ಸಿಕ್ಕಿಬೀಳಬಹುದು..
ಪ್ರಾತಿನಿಧಿಕ ಚಿತ್ರ
Follow us on

ಮೈಸೂರು: ಇತ್ತೀಚೆಗಂತೂ ಹೈಟೆಕ್​ ವಂಚನೆಯ ದಂಧೆ ಹೆಚ್ಚಾಗಿ ಬಿಟ್ಟಿದೆ.. ತಂತ್ರಜ್ಞಾನ ಅಭಿವೃದ್ಧಿಯಾದಷ್ಟೂ ಮೋಸದ ಜಾಲವೂ ವಿಸ್ತರಿಸುತ್ತಿದೆ. ಅಂಥ ವಂಚನೆಯ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು.. ಅದು ಹನಿ ವಿಡಿಯೋ ಟ್ರ್ಯಾಪ್..

ಫೇಸ್​ಬುಕ್ ಪ್ರೊಫೈಲ್​ಗಳೇ ಟಾರ್ಗೆಟ್​
ಇದೂ ಕೂಡ ಹನಿಟ್ರ್ಯಾಪ್​ನಂತಹ ವಂಚನೆ.. ಈ ಜಾಲದಲ್ಲಿ ವಂಚಕರು ಮೊದಲು ಫೇಸ್​ಬುಕ್​ ಪ್ರೊಫೈಲ್​ ಪರಿಶೀಲನೆ ಮಾಡುತ್ತಾರೆ. ಅದರ ಮೂಲಕವೇ ನೀವು ಶ್ರೀಮಂತರಾ ಎಂಬುದನ್ನೂ ಚೆಕ್​ ಮಾಡಿಕೊಳ್ಳುತ್ತಾರೆ. ನಂತರ ನಿಮಗೆ ಸುಂದರ ಯುವತಿಯ ಭಾವಚಿತ್ರವಿರುವ ಅಕೌಂಟ್​ನಿಂದ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಾರೆ.

ಹಾಗೇ, ಮೆಸೆಂಜರ್​ನಲ್ಲೂ ಮೆಸೇಜ್​ಗಳು ಶುರುವಾಗುತ್ತವೆ. ನೀವು ಚೂರೇಚೂರು ಆಸಕ್ತಿ ತೋರಿಸಿದರೂ ಅಲ್ಲಿಗೆ ಮುಗಿಯಿತು.. ಹಳ್ಳಕ್ಕೆ ಬಿದ್ದಿರಿ ಎಂದೇ ಅರ್ಥ.. ನಂತರ ಮಾಡರ್ನ್​ ಡ್ರೆಸ್​ ಧರಿಸಿದ ಫೋಟೋಗಳು, ಸೆಕ್ಸ್​ ಮೆಸೇಜ್​ಗಳು ಬರಲು ಪ್ರಾರಂಭವಾಗುತ್ತವೆ.. ಈ ಮೂಲಕ ನಿಮ್ಮೆಲ್ಲ ವಿಚಾರಗಳನ್ನೂ ನಿಮ್ಮಿಂದಲೇ ತಿಳಿದುಕೊಳ್ಳುತ್ತಾರೆ.

ಮಧ್ಯರಾತ್ರಿ ವಿಡಿಯೋ ಕಾಲ್​
ಇಷ್ಟೆಲ್ಲ ಆದ ಮೇಲೆ ನೀವು ಸಂಪೂರ್ಣವಾಗಿ ಬಲೆಗೆ ಬಿದ್ದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಂಡು ವಂಚಕರು ತಮ್ಮ ಅಸಲಿ ಆಟ ಶುರು ಮಾಡುತ್ತಾರೆ. ನಿಮ್ಮ ಮೊಬೈಲ್​ ನಂಬರ್ ಕೂಡ ಪಡೆದುಕೊಳ್ಳುತ್ತಾರೆ. ಮಧ್ಯರಾತ್ರಿಯಲ್ಲಿ ವಾಟ್ಸ್​ಆ್ಯಪ್​ ಅಥವಾ ಮೆಸೆಂಜರ್​ನಲ್ಲಿ ವಿಡಿಯೋ ಕಾಲ್​ ಮಾಡುತ್ತಾರೆ. ಬಣ್ಣಬಣ್ಣದ ಮಾತುಗಳನ್ನಾಡುತ್ತಾರೆ. ನಂತರ ತಾವೂ ಬೆತ್ತಲೆಯಾಗಿ, ನಿಮ್ಮನ್ನೂ ಬೆತ್ತಲಾಗುವಂತೆ ಪ್ರಚೋದಿಸುತ್ತಾರೆ..

ಒಮ್ಮೆ ಆ ಹುಡುಗಿಯ ಮಾತಿಗೆ ಮರುಳಾಗಿ ನೀವು ಬಟ್ಟೆಬಿಚ್ಚಿದರೆ ಅಲ್ಲಿಗೆ ನೀವು ಎಲ್ಲವನ್ನೂ ಕಳೆದುಕೊಂಡಿರಿ ಎಂದೇ ಅರ್ಥ.. ಅದೇ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್​ ಶುರು ಮಾಡುತ್ತಾರೆ.. ಒಮ್ಮೆ ನೀವು ಬೆತ್ತಲಾಗದೆ ಇದ್ದರೆ ಮತ್ತೊಂದು ರೀತಿಯ ಬೆದರಿಕೆ ಶುರುವಾಗುತ್ತದೆ.. ನಿಮ್ಮ ಸಾಮಾನ್ಯ ವಿಡಿಯೋ ಮತ್ತು ಆಕೆ ಬೆತ್ತಲಾದ ವಿಡಿಯೋವನ್ನು ಮರ್ಜ್​ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಲು ಶುರುವಿಟ್ಟುಕೊಳ್ಳುತ್ತಾರೆ.

ವಿಡಿಯೋ ಇಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುವ ಈ ಜಾಲ, ಕೊಡದೆ ಇದ್ದರೆ ರೆಕಾರ್ಡ್ ವಿಡಿಯೋವನ್ನು ನಿಮ್ಮ ಕುಟುಂಬ, ಸ್ನೇಹಿತರಿಗೆ ಕಳಿಸುವುದಾಗಿ ಬೆದರಿಕೆ ಹಾಕುತ್ತಾರೆ. ಇದು ಅಂತಿಂಥಾ ಜಾಲವಲ್ಲ.. ಇದರಲ್ಲೀಗ ಶ್ರೀಮಂತರ ಮಕ್ಕಳು, ಉದ್ಯಮಿಗಳು, ಗಣ್ಯರು ಸಿಲುಕಿದ್ದಾರೆ. ಕೆಲವರು ಸೈಬರ್​ ಕ್ರೈಂನಲ್ಲಿ ದೂರು ದಾಖಲಿಸಿದ್ದು, ಮತ್ತೊಂದಿಷ್ಟು ಜನ ಸುಮ್ಮನೆ ಇದ್ದಾರೆ. ಮಾಹಿತಿ ಪ್ರಕಾರ, ಈ ಜಾಲ ಹೊರರಾಜ್ಯದಿಂದಲೇ ಕೃತ್ಯ ಎಸಗುತ್ತಿದೆ. ಆಯಾ ಪ್ರಾದೇಶಿಕ ಭಾಷೆಯಲ್ಲೇ ಇವರ ಸಂವಹನ ಇರುತ್ತದೆ.

ಫೇಸ್​ಬುಕ್​ನಲ್ಲಿ ಫ್ರೆಂಡ್​ ರಿಕ್ವೆಸ್ಟ್ ಕಳಿಸುವ ಅಪರಿಚಿತ ಯುವತಿಯರ ಬಗ್ಗೆ ಎಚ್ಚರಿಕೆಯಿಂದ ಇರಿ. ಒಮ್ಮೆ ಈಗಾಗಲೇ ಫ್ರೆಂಡ್ಸ್ ಆಗಿದ್ದರೆ ಅವರ ಮೆಸೇಜ್​, ಮಾತುಗಳಿಗೆ ಮರುಳಾಗಬೇಡಿ. ಒಂದು ವೇಳೆ ಬ್ಲ್ಯಾಕ್​ ಮೇಲ್​ ಮಾಡಿ, ಹಣಕ್ಕೆ ಒತ್ತಾಯಿಸಿದರೆ ಹತ್ತಿರದ ಠಾಣೆಗೆ ದೂರು ನೀಡಿ ಅಥವಾ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ. ಎ.ಎನ್​. ಪ್ರಕಾಶ್​ ಗೌಡ ಹೇಳಿದ್ದಾರೆ.

Facebookನಲ್ಲಿ ಅಸಭ್ಯ ಪೋಸ್ಟ್ ಹಾಕಿದ್ದಕ್ಕೆ.. ಮನನೊಂದು ಗೃಹಿಣಿ ಆತ್ಮಹತ್ಯೆಗೆ ಯತ್ನ

Published On - 3:28 pm, Fri, 18 December 20